governance

ಧಜಾರೋಹಣಕ್ಕೆ ಪಿಡಿಓ ಗೈರು ; ಕ್ರಮಕ್ಕೆ ಒತ್ತಾಯ

Publicstory/prajayoga

ತುರುವೇಕೆರೆ: ತಾಲೂಕಿನ ಮಾದಿಹಳ್ಳಿ ಗ್ರಾಪಂ ನಲ್ಲಿ ಹಮ್ಮಿಕೊಳ್ಳಲಾಗಿದ್ದ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣಕ್ಕೆ ಗ್ರಾಪಂ ಪಿಡಿಓ ಲಿಂಗರಾಜೇಗೌಡ ಗೈರಾಗಿದ್ದರು.

ಪಿಡಿಓ ಅನುಪಸ್ಥಿತಿಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಗ್ರಾಪಂ ಅಧ್ಯಕ್ಷ ಗಿರೀಶ್, ಪಿ.ಡಿ.ಓ. ನಿರ್ಲಕ್ಷ್ಯವನ್ನು ಖಂಡಿಸಿದರು. ರಾಷ್ಟ್ರೀಯ ಹಬ್ಬ ಅಚರಣೆ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಿದ ಪಿಡಿಓ ವಿರುದ್ಧ ಗ್ರಾಪಂ ಸದಸ್ಯ ಆನೆಮೆಳೆ ನಂಜುಂಡಿ ಇಓ ಗೆ ಮೌಖಿಕ ದೂರು ನೀಡಿದ್ದಾರೆ.

ಈ ಬಗ್ಗೆ ಇಓ ಸತೀಶ್ ಕುಮಾರ್ ಪ್ರತಿಕ್ರಿಯಿಸಿ,  ಮಾದಿಹಳ್ಳಿ ಗ್ರಾಪಂ ಪಿಡಿಓ  ಲಿಂಗರಾಜೇಗೌಡ ಧ್ವಜಾರೋಹಣಕ್ಕೆ ಗೈರಾಗಿರುವ ವಿಚಾರ ತಿಳಿದಿದೆ. ಈ ಕುರಿತು ಮೇಲಧಿಕಾರಿಗಳ ಸೂಚನೆಯಂತೆ ಕ್ರಮ ವಹಿಸುತ್ತೇನೆ ಎಂದರು.

Comment here