ಪೊಲಿಟಿಕಲ್

ಸತ್ಯಹರಿಶ್ಚಂದ್ರನ ಮಗನಂತೆ ಮಾತನಾಡಿದ್ರೆ ಸರಿಹೋಗಲ್ಲ : ಕಾನೂನು ಮಂತ್ರಿಗೆ ಕೆ.ಎನ್ ರಾಜಣ್ಣ ಟಾಂಗ್‌

Publicstory/prajayoga

ತುಮಕೂರು : ಸತ್ಯಹರಿಶ್ಚಂದ್ರನ ಮಗನಂತೆ ಮಾತನಾಡಿದ್ರೆ ಅದೆಲ್ಲ ಸರಿ ಹೋಗಲ್ಲ. ಕಾನೂನು ಮಂತ್ರಿ ಆಗಿದ್ದಾರೆ. ಅಂತಹ ತಪ್ಪುಗಳು ಏನಾದ್ರೂ ಆಗಿದ್ರೆ ಕ್ರಮ ಕೈಗೊಳ್ಳಲಿ ಎಂದು ಮಾಜಿ ಶಾಸಕ ಕೆ.ಎನ್ ರಾಜಣ್ಣ ಸಚಿವ ಮಾಧುಸ್ವಾಮಿಗೆ ಟಾಂಗ್ ನೀಡಿದರು.

ತುಮಕೂರಿನಲ್ಲಿ ಬುಧವಾರ ಸುದ್ಧಿಗಾರರೊಂದಿಗೆ ಮಾತನಾಡಿದ ಕೆ.ಎನ್ ರಾಜಣ್ಣ, ಮಾಧುಸ್ವಾಮಿ ಅವರು ನಿರ್ದಾಕ್ಷಿಣ್ಯವಾಗಿ ಹೇಳೋ ಅಂತಾ ಮನುಷ್ಯ ಅಂದುಕೊಂಡಿದ್ದೇನೆ. ಪೋನ್‌ನಲ್ಲಿ ಮಾತನಾಡುತ್ತಾ, ನಾನು ಕೂಡ ಬಡ್ಡಿ ಕಟ್ಟಿದ್ದೀನಿ ಅಂತಾರೆ. ಯಾವುದನ್ನ ಕಟ್ಟಿದ್ದಾರೆ ಸ್ವಲ್ಪ ನನಗೆ ಕಳುಹಿಸಿಕೊಡಲಿ. ಮಾಧುಸ್ವಾಮಿ ಕೂಡ ರಾಜ್ಯದ ಮಂತ್ರಿ ಆಗಿದ್ದಾರೆ. ‌ಕಾನೂನು ಸಚಿವರು ಕೂಡ ಆಗಿದ್ದಾರೆ. ಕಾನೂನಿನಲ್ಲಿ ಇಲ್ಲದ್ದಕ್ಕೆ ದುಡ್ಡು ಕಟ್ಟಿ ಏಕೆ ರಸೀದಿ ತಗೊಂಡ್ರು. ಒಂದು ವೇಳೆ ಕಾನೂನು ಬಾಹಿರವಾಗಿ ಬಡ್ಡಿ ಕಟ್ಟಿಸಿಕೊಂಡಿದ್ರೆ ಇವರೇ ಕಾನೂನು ಮಂತ್ರಿ ಆಗಿದ್ದಾರೆ. ಕ್ರಮ ಕೈಗೊಳ್ಳಲಿ. ಸುಮ್ಮನೆ ಉಡಾಫೆ ಮಾತುಗಳನ್ನ ಆಡಬಾರದು ಎಂದು ಕಿಡಿಕಾರಿದರು.

ಮಾಧುಸ್ವಾಮಿ ಕೂಡ ಒಂದು ಸಹಕಾರ ಆಂದೋಲನದಲ್ಲಿ ಇದ್ದವರೇ. ನಾವು ಕೂಡ ಕೆಲಸ ಮಾಡುತ್ತಿರುವವರೇ. ಆದ್ರೆ, ಸತ್ಯಹರಿಶ್ಚಂದ್ರನ ಮಗನಂತೆ ಮಾತನಾಡಬಾರದ್ದಿತ್ತು. ಯಾವುದೋ ಒಂದು ಕಡೆ ಲೋಪ ಆದ್ರೆ ಎಲ್ಲಾ ಕಡೆನೂ ಕೂಡ ಇದೇ ಭಾವನೆಯನ್ನು ಇಟ್ಟುಕೊಂಡು ನೋಡಬಾರದು ಎಂದು ಪ್ರತಿಕ್ರಿಯೆ ನೀಡಿದರು.

Comment here