ಪೊಲಿಟಿಕಲ್

ಚುನಾವಣೆಯಲ್ಲಿ ಹಣ ಪಡೆದ ಗುಸು ಗುಸು : ಪರಮೇಶ್ವರ್ ಪ್ರತಿಕ್ರಿಯಿಸುವಂತೆ ಹುಚ್ಚಯ್ಯ ರಿಂದ ಪತ್ರ

Publicstory/prajayoga

ಕೊರಟಗೆರೆ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೊರಟಗೆರೆ ಕ್ಷೇತ್ರದಲ್ಲಿ ಬಿಜೆಪಿಯಿಂದ ವೈ.ಎಚ್.ಹುಚ್ಚಯ್ಯ ಹಾಗೂ ಜೆಡಿಎಸ್ ನಿಂದ ಸುಧಾಕರ ಲಾಲ್ ಸ್ಪರ್ಧಿಸಿ ಸೋತಿದ್ದರು. ಕಾಂಗ್ರೆಸ್ ನಿಂದ ಡಾ.ಜಿ.ಪರಮೇಶ್ವರ್ ಗೆಲುವು ಸಾಧಿಸಿದ್ದರು.

ಈ ಹಿಂದೆ 2013ರ ವಿಧಾನಸಭಾ ಚುನಾವಣೆಯಲ್ಲಿ ಪರಮೇಶ್ವರ್ ಸೋಲುಂಡಿದ್ದರು. 2018ರಲ್ಲಿ ಶತಾಯ ಗತಾಯ ಗೆಲ್ಲಲೇಬೇಕು ಎಂಬ ಹಠಕ್ಕೆ ಬಿದ್ದು, ಮನೆ ಮನೆ ತಿರುಗಿ ಜನರ ವಿಶ್ವಾಸಗಳಿಸಲು ಪ್ರಯತ್ನಿಸುತ್ತಿದ್ದದ್ದು ಗೊತ್ತೇ ಇದೆ.

ಪತ್ರದಲ್ಲೇನಿದೆ?

ಆದರೆ, ಇತ್ತೀಚೆಗೆ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿದ್ದ ಹುಚ್ಚಯ್ಯ ಅವರು ಡಾ.ಜಿ.ಪರಮೇಶ್ವರ್ ಅವರಿಂದ ಹಣ ಪಡೆದು ಚುನಾವಣಾ ಕಣದಿಂದ ಹಿಂದೆ ಸರಿದಿದ್ದರು ಎಂಬ ಪಿಸು ಮಾತು ಜಿಲ್ಲೆಯ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸುಂತೆ ಸ್ವತಃ ಹುಚ್ಚಯ್ಯ ಅವರು ಪರಮೇಶ್ವರ್ ಗೆ ಬರೆದಿರುವ ಪತ್ರ ಎಲ್ಲೆಡೆ ಹರಿದಾಡುತ್ತಿದೆ.

ಕಳೆದ ನಾಲ್ಕು ದಶಕಗಳಿಂದ  ಸಾರ್ವಜನಿಕ ರಂಗದಲ್ಲಿ ಸೇವೆ ಮಾಡುತ್ತಾ ನಿಷ್ಕಳಂಕ ಚಾರಿತ್ರ್ಯ ಕಾಪಾಡಿಕೊಂಡು ಬಂದಿದ್ದೇನೆ. 2018ರಲ್ಲಿ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ನಾನು ನಿಮ್ಮಿಂದ ಹಣ ಪಡೆದು ಸ್ಪರ್ಧೆಯಿಂದ ವಿಮುಖನಾಗಿದ್ದೇನೆ ಎಂದು ಕೊರಟಗೆರೆ ಕ್ಷೇತ್ರದಲ್ಲಿ ವ್ಯಾಪಕ ಅಪಪ್ರಚಾರವಾಗಿದೆ. ಇದರಿಂದ ನನ್ನ ರಾಜಕೀಯ ಜೀವನಕ್ಕೇ ಸಿಡಿಲು ಬಡಿದಂತಾಗಿದೆ. ನಾನು ನಿಮ್ಮಿಂದ ಹಣ ಪಡೆದಿದ್ದೇನೊ ಇಲ್ಲವೋ ಎಂಬುದನ್ನು ತಿಳಿಸಿ ಸ್ಪಷ್ಟನೆ ನೀಡಿ ಎಂದು ಹುಚ್ಚಯ್ಯ ಬರೆದಿರುವ ಪತ್ರ ತಾಲೂಕಿನಲ್ಲಿ ಸಂಚಲನಕ್ಕೆ ಕಾರಣವಾಗಿದೆ.

Comment here