ಪೊಲಿಟಿಕಲ್

ರಸ್ತೆ ಕಾಮಗಾರಿಗೆ ಭೂಮಿ ಪೂಜೆ: ಡಾ.ಸಿ.ಎಂ.ರಾಜೇಶ್ ಗೌಡ

Publicstory/prajayoga

ಶಿರಾ: ತಾಲ್ಲೂಕಿನ ಎಲ್ಲಾ ವರ್ಗದವರಿಗೂ ವಸತಿ ಕಲ್ಪಿಸಬೇಕೆಂಬ ಉದ್ದೇಶದಿಂದ ಬಸವ ಇಂದಿರಾ ವಸತಿ ಯೋಜನೆಯಡಿ ಒಂದು ಸಾವಿರ ಮನೆಗಳನ್ನು ಶಿರಾ ಕ್ಷೇತ್ರಕ್ಕೆ ಮಂಜೂರು ಮಾಡಬೇಕೆಂದು ಸರಕಾರಕ್ಕೆ ಪ್ರಾಸ್ತಾವನೆ ಸಲ್ಲಿಸಲಾಗಿದೆ. ಶೀಘ್ರದಲ್ಲಿಯೇ ಮನೆಗಳು ಮಂಜೂರಾಗಲಿವೆ ಎಂದು ಶಾಸಕ ಡಾ. ಸಿ.ಎಂ. ರಾಜೇಶ್ ಗೌಡ ಹೇಳಿದರು.

ತಾಲೂಕಿನ ಹೊಸಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವೀರಬೊಮ್ಮನಹಳ್ಳಿ ಗ್ರಾಮದಲ್ಲಿ 60 ಲಕ್ಷ ರೂಪಾಯಿ ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಜನರ ಬಹು ನಿರೀಕ್ಷಿತ ಮದಲೂರು ಕೆರೆಗೆ ಹೇಮಾವತಿ ನೀರು ಹರಿಸಬೇಕೆಂಬ ನಮ್ಮ ಸರಕಾರದ ಭರವಸೆ ಈಡೇರಿಸಿದ್ದು, ಮುಂದಿನ ಗುರಿ ಅಪ್ಪರ ಭದ್ರ ಮತ್ತು ಎತ್ತಿನಹೊಳೆ ನೀರಾವರಿ ಯೋಜನೆ ಕಾಮಗಾರಿ ತ್ವರಿತ ಗತಿಯಲ್ಲಿ ಮುಗಿಸುವ ಮೂಲಕ ೨೦೨೩ರ ಅಂತ್ಯಕ್ಕೆ ತಾಲೂಕಿನ ಎಲ್ಲಾ ಕೆರೆಗಳಿಗೆ ನೀರು ಹರಿಸಲಾಗುವುದು ಎಂದರು.

ಈ ವೇಳೆ ಹೊಸಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರಾದ ಗಂಗಾಧರ್, ಮಲ್ಲಿಕಾರ್ಜುನ್, ಮಾಜಿ ಗ್ರಾಮ ಅಧ್ಯಕ್ಷ ಗಂಗಾಧರ್, ಬಿಜೆಪಿ ಮುಖಂಡ ಜಗದೀಶ್, ಯಾದ ಲಡಕು ತಿಪ್ಪೇಸ್ವಾಮಿ, ಅಭಿಯಂತರ ನಾಗೇಂದ್ರಪ್ಪ ,ಪಿಡಿಒ ತಿಪ್ಪೇಸ್ವಾಮಿ ,ದೊಡ್ಡಿರಪ್ಪ, ಕಾಂತರಾಜು, ದೊಡ್ಮನೆ ತಿಪ್ಪೇಸ್ವಾಮಿ, ಪ್ರಾಥಮಿಕ ಪತ್ತಿನ ಸಹಕಾರ ಸಂಘದ ನಿರ್ದೇಶಕ ಈರಣ್ಣ, ನಾಗರಾಜು, ಶ್ರೀಧರ್, ಉಮೇಶ್, ರಂಗನಾಥ್ ಸೇರಿದಂತೆ ಹಲವಾರು ಮುಖಂಡರು ಹಾಜರಿದ್ದರು.

Comment here