ವಿದ್ಯಾ ಸಂಸ್ಥೆ

ಜನಪದ ಸಾಹಿತ್ಯವು ಸಂಬಂಧ ಗಟ್ಟಿಗೊಳಿಸುತ್ತದೆ : ಪ್ರೊ ಎನ್.ಆರ್ ಚಂದ್ರೇಗೌಡ

Publicstory/prajayoga

ತುಮಕೂರು: ಮನುಷ್ಯರ ನಡುವಿನ ಸಂಬಂಧವನ್ನು ಜಾನಪದ ಸಾಹಿತ್ಯ ಗಟ್ಟಿಗೊಳಿಸುತ್ತದೆ. ಆದರೆ, ಜನಪದ ಮೌಖಿಕ ಸಾಹಿತ್ಯ ಮತ್ತು ಪ್ರದರ್ಶನ ಕಲೆಗಳು ನಾಶವಾಗುತ್ತಿರುವ ಈ ಸಂದರ್ಭದಲ್ಲಿ ಅವುಗಳನ್ನು ಉಳಿಸಿ ಬೆಳೆಸುವ ಕಾರ್ಯ ಆಗಬೇಕಿದೆ ಎಂದು ಮೈಸೂರು ಕ.ರಾ.ಮು.ವಿ.ವಿಯ ಪ್ರೊ.ಎನ್. ಆರ್ ಚಂದ್ರೇಗೌಡ ಅಭಿಪ್ರಾಯಪಟ್ಟರು.

Sponsored

ತುಮಕೂರು ವಿವಿಯ ಸರ್.ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ  ಕುಮಾರವ್ಯಾಸ ಅಧ್ಯಯನ ಪೀಠದ ವತಿಯಿಂದ ನಡೆದ ಜನಪದ ಯಕ್ಷಗಾನದಲ್ಲಿ ರತಿ ಕಲ್ಯಾಣ ಚಿತ್ರಣದ ಕುರಿತು ವಿಚಾರ ಸಂಕಿರಣ  ಹಾಗೂ ಯಕ್ಷದೀವಿಗೆಯಿಂದ ಹಟ್ಟಿಯಂಗಡಿ ನಾರಾಯಣ ರಚಿತ ರತಿ ಕಲ್ಯಾಣ ಯಕ್ಷಗಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜನಪದ ಸಾಹಿತ್ಯದ ತಿರುಳು, ಅರ್ಥ, ಭಾವ, ಮೌಲ್ಯ ಎಂದೂ ನಾಶವಾಗುವುದಿಲ್ಲ ಮತ್ತು ಯಾವಾಗಲೂ ಪ್ರಸ್ತುತವಾದವು. ಜನಪದ ಸಾಹಿತ್ಯದ ಪ್ರಕಾರ, ಗೀತೆ, ಲಾವಣಿ ಹಾಗೂ ಒಗಟುಗಳು  ಮಹಾಕಾವ್ಯದ ಸ್ವರೂಪಗಳಾಗಿವೆ. ಜನಪದ ಸಾಹಿತ್ಯಕ್ಕೆ ಗ್ರಂಥರೂಪ ನೀಡಿದವರು ಪಾಶ್ಚತ್ಯ ವಿದ್ವಾಂಸರು ಎಂದರು.

ತುಮಕೂರು ವಿವಿ ಕುಲಸಚಿವ ಪ್ರೊ.ಕೆ.ಶಿವಚಿತ್ತಪ್ಪ ಮಾತನಾಡಿ, ಕುಮಾರವ್ಯಾಸನ  ಕಾವ್ಯವು ಚಂದ. ಯಕ್ಷಗಾನದಲ್ಲಿ ನೃತ್ಯ ಮತ್ತು ವೇಷಭೂಷಣ, ಹಾಡುಗಾರಿಕೆಯೂ ಒಂದು ಕಲೆ. ಭರತ ಮುನಿಯ ನಾಟ್ಯಶಾಸ್ತ್ರದಲ್ಲಿಯೂ ಉಲ್ಲೇಖವಿದೆ. ಯಕ್ಷಗಾನ, ಬಯಲಾಟದ ಇನ್ನೊಂದು ರೂಪವೇ ತಾಳಮದ್ದಳೆ. ಇಲ್ಲಿ ನಾವು ಹಲವು ರೂಪಗಳನ್ನು ಕಾಣಬಹುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕುಮಾರವ್ಯಾಸ ಅಧ್ಯಯನ ಪೀಠದ ಸಂಯೋಜಕ ಡಾ. ಪಿ.ಎಂ.ಗಂಗಾಧರಯ್ಯ, ಸಿಂಡಿಕೇಟ್  ಸದಸ್ಯೆ ಭಾಗ್ಯಲಕ್ಷೀ ಹಿರೇಂದ್ರ ಷಾ, ಡಾ.ಡಿವಿ ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರದ ಅಧ್ಯಕ್ಷೆ ಪ್ರೊ.ಅಣ್ಣಮ್ಮ, ಹನುಮಾನಾಯ್ಕ ಹಾಗು ಹೇಮಲತ ಹಾಜರಿದ್ದರು.

Comment here