governance

ಮಳೆ‌ಹಾನಿ‌ ಪರಿಶೀಲನೆಗೆ ಟ್ರ್ಯಾಕ್ಟರ್ ಏರಿದ ಡಿಸಿ: ಬ್ರೇಕಿಂಗ್

Publicstory/prajayoga

ಜಿಲ್ಲಾಧಿಕಾರಿಯ ಅವಿರತ ಕಾರ್ಯಕ್ಕೆ ಎಲ್ಲೆಡೆಯೂ ಶ್ಲಾಘನೆ ವ್ಯಕ್ತ

ಮಧುಗಿರಿ:  ಜಮೀನುಗಳು, ಮನೆ.ಶಾಲೆಗಳು ಮುಳುಗಡೆಯಾದ ಸ್ಥಳಗಳಿಗೆ  ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ್ ಟ್ರ್ಯಾಕ್ಟರ್ ಹತ್ತಿ ಬಂದಿದ್ದು ಗಮನ ಸೆಳೆಯಿಸತು.

ಮಳೆ ಹಾನಿ ಪರಿಶೀಲನೆಗೆ ಬಂದಿದ್ದ ವೇಳೆ ಕಾರಿಳಿದು ಟ್ರ್ಯಾಕ್ಟರ್ ನಲ್ಲಿ ಧಾವಿಸಿ ವೀಕ್ಷಣೆ ನಡೆಸಿದ್ದಾರೆ. ಅವರು ನಿರಂತರವಾಗಿ ಕಾಲಿಗೆ ಚಕ್ರಕಟ್ಟಿಕೊಂಡು ಸಂತ್ರಸ್ತರ ನೆರವಿಗೆ ಧಾವಿಸುತ್ತಿರುವ ಕಾರ್ಯಕ್ಕೆ ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.

ಜಯಮಂಗಲಿ ತೀರದ ಚೆನ್ನಸಾಗರ, ಸೂರನಾಗೇನಹಳ್ಳಿ, ಎಂ.ಹೊಸಹಳ್ಳಿ, ಕಾಳೇನಹಳ್ಳಿ, ಸಿ.ವೀರಾಪುರ, ಕೋಡ್ಲಾಪುರ, ಇಮ್ಮುಡಗಹಳ್ಳಿ ಗ್ರಾಮಗಳು ಜಲಾವೃತಗೊಂಡಿವೆ. ಗ್ರಾಮದ ರಸ್ತೆಯಲ್ಲಿ ಸಂಚರಿಸಲು ಅನುವಾಗುವಂತೆ ಈಗಾಗಲೇ ಜೆಸಿಬಿಯಿಂದ ಕಾರ್ಯಾಚರಣೆ ಕೈಗೊಂಡಿದ್ದು, ಮುಂಜಾನೆಗಿಂತ ನೀರಿನ ಹರಿವಿನ ಪ್ರಮಾಣ ಮಧ್ಯಾಹ್ನದ ವೇಳೆಗೆ ಕಡಿಮೆಯಾಗಿದೆ. ಮಳೆ ನೀರಿನಿಂದ ಬಾದಿತರಾದವರಿಗೆ ರಕ್ಷಣೆ ನೀಡುವಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಗ್ರಾಮ ಕಾರ್ಯಪಡೆಗೆ ಈಗಾಗಲೇ ನಿರ್ದೇಶನ ನೀಡಿದ್ದು, ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ಈ ವೇಳೆ ಜಿಲ್ಲಾಧಿಕಾರಿ  ತಿಳಿಸಿದರು.

Comment here