ಜಸ್ಟ್ ನ್ಯೂಸ್

ಮಕ್ಕಳೆಂದರೆ ಪ್ರೀತಿ: ಯಶ್

ರಾಧಿಕಾ ಬೆಂಗಳೂರಿನ ಪೋರ್ಟಿಸ್ ಆಸ್ಪತ್ರೆಯಿಂದ ಡಿಸ್‌ಚಾರ್ಜ್‌ ಆಗಲಿದ್ದಾರೆ ಎಂಬ ವಿಚಾರ ತಿಳಿದ ಯಶ್‌ ಅಭಿಮಾನಿಗಳು ಬುಧವಾರ ಆಸ್ಪತ್ರೆ ಮುಂದೆ ಜಮಾಯಿಸಿದ್ದರು.

ಯಶ್‌ ಮತ್ತು ರಾಧಿಕಾ ಮುದ್ಧಾದ ಗಂಡು ಮಗುವಿನ ಜೊತೆಗೆ ಪತ್ರಕರ್ತರ ಸಮ್ಮುಖದಲ್ಲಿ ಹಾಜರಾದರು. ಅವರೊಂದಿಗೆ ಪುತ್ರಿ ಐರಾ ಸಹ ಇದ್ದಳು. ಐರಾ ಯಶ್‌ ಅಭಿಮಾನಿಗಳತ್ತ ಕೈ ಬೀಸುತ್ತಾ  ಫ್ಲೈಯಿಂಗ್‌ ಕಿಸ್‌ ಬಿಸಾಕಿದ್ದು ಆಕರ್ಷಣೀಯವಾಗಿತ್ತು.

ಯಶ್‌ ಮಾದ್ಯಮದವರೊಂದಿಗೆ ಮಾತನಾಡುತ್ತಾ, ‘ನನಗೆ ಹೆಣ್ಣು ಮಗು ಎಂದರೆ ತುಂಬಾ ಇಷ್ಟ ಹಾಗೆಯೇ ರಾಧಿಕಾ ಗೆ ಗಂಡು ಮಗು ಎಂದರೆ ಆಸೆ. ಈಗ ನಮ್ಮಿಬ್ಬರ ಆಸೆಯೂ ಈಡೇರಿದೆ. ಸಧ್ಯ ಇದೀಗ ರಾಧಿಕಾ ಜೊತೆಗಿರುವ ಸಲುವಾಗಿ ಶೂಟಿಂಗ್ ನಿಂದ ವಿರಾಮ ಪಡೆದಿದ್ದೇನೆ. ಐರಾ ಜನಿಸಿದಾಗ ಕೆ.ಜಿ.ಎಫ್ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿ ಆಗಿದ್ದೆ ಎಂದರು.

ರಾಧಿಕಾ ಪಂಡಿತ್ ಮಾತನಾಡಿ, ಮಕ್ಕಳು, ನನ್ನೊಂದಿಗೆ ಇಂತಹ ವೇಳೆಯಲ್ಲಿ ಯಶ್ ಇರುವುದು ಸಂತಸ ತಂದಿದೆ. ಮಕ್ಕಳು, ನನ್ನ ಬಗ್ಗೆ ಅವರಿಗೆ ಹೆಚ್ಚಿನ ಕಾಳಜಿ ಇದೆ.

Comment here