ಪಾವಗಡ: ಪಟ್ಟಣ, ಆಂಧ್ರಪ್ರದೇಶದಲ್ಲಿ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಅಂತರರಾಜ್ಯ ಕಳವು ಆರೋಪಿಯನ್ನು ತಾಲ್ಲೂಕಿನ ಅಪರಾಧ ಪತ್ತೆ ತಂಡ ಬಂಧಿಸಿದೆ.
ಆಂಧ್ರ ಪ್ರದೇಶದ ಪುಟ್ಟಪರ್ತಿ ಬಳಿಯ ಕೊಟ್ಟಪಲ್ಲಿ ರವಿ ಆರೋಪಿ. ಆರೋಪಿಯಿಂದ ಮೂರು ದ್ವಿಚಕ್ರ ವಾಹನಗಳನ್ನು ಪತ್ತೆ ತಂಡ ವಶಪಡಿಸಿಕೊಂಡಿದೆ. ಮಂಗಳವಾರ ತನಿಖಾಧಿಕಾರಿ ಸಹಾಯಕ ಸಬ್ ಇನ್ ಸ್ಪೆಕ್ಟರ್ ರಾಮಚಂದ್ರಪ್ಪ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಪಟ್ಟಣದ ಗಣೇಶ್ ಪೇಂಯಿಂಟರ್ಸ, ಬಸ್ ನಿಲ್ದಾಣದ ಬಳಿ ನಿಲ್ಲಿಸಿದ್ದ 2 ದ್ವಿಚಕ್ರ ವಾಹನವನ್ನು ಆರೋಪಿ ಕಳವು ಮಾಡಿದ್ದ. ಈ ಬಗ್ಗೆ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಮಧುಗಿರಿ ಡಿ.ಎಸ್.ಪಿ ಎಂ.ಪ್ರವೀಣ್ ರಚಿಸಿದ್ದ ತಂಡ ಕಾರ್ಯ ಪ್ರವೃತ್ತರಾಗಿತ್ತು. ಆರೋಪಿಯ ಚಲನ ವಲನದ ಬಗ್ಗೆ ನಿಗಾ ವಹಿಸಿ ಬಂಧಿಸುವಲ್ಲಿ ತಂಡ ಯಶಸ್ವಿಯಾಗಿದೆ.
ಸರ್ಕಲ್ ಇನ್ ಸ್ಪೆಕ್ಟರ್ ಶ್ರೀಶೈಲಮೂರ್ತಿ ಅವರ ನೇತೃತ್ವದಲ್ಲಿ, ಸಹಾಯಕ ಸಬ್ ಇನ್ ಸ್ಪೆಕ್ಟರ್ ರಾಮಚಂದ್ರಪ್ಪ ತನಿಖಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಎ.ಎಸ್.ಐ ರಾಮಾಂಜಿನಪ್ಪ, ಸೋಮಶೇಖರ್, ಗಂಗರಾಜು, ಗೋಪಿ, ಕೇಶವರಾಜು ಅಪರಾಧಿ ಪತ್ತೆಗಾಗಿ ಶ್ರಮಿಸಿದ್ದಾರೆ.