Monday, October 14, 2024
Google search engine
Homeಜನಮನಅಳವಂಡಿ ಕಟ್ಟಿದ ಆ ಹುಡುಗನ ಬದುಕು…

ಅಳವಂಡಿ ಕಟ್ಟಿದ ಆ ಹುಡುಗನ ಬದುಕು…

ತುಮಕೂರು: ರಾಮರಡ್ಡಿ ಅಳವಂಡಿ ಅವರ ಹೆಸರು ಪ್ರಜಾವಾಣಿ ಪತ್ರಿಕೆಯ ಓದುಗರಿಗಲ್ಲದೇ ಇತರರಿಗೂ  ಚಿರಪರಿಚಿತ. ಇವರನ್ನು ನೋಡಿದವರು ಕಡಿಮೆ ಇರಬಹುದು. ಆದರೆ  ಅವರು ಹೆಸರನ್ನು ಹೆಚ್ಚು ಜನರು ಕೇಳಿದ್ದಾರೆ.

ತುಮಕೂರು ಜಿಲ್ಲೆಯ ಪ್ರಜಾವಾಣಿ ವರದಿಗಾರರಾಗಿ ಐದು ವರ್ಷದ ಹಿಂದೆ ಬಂದ ಅವರು ಇಲ್ಲಿ ಮಾಡಿದ ಕೆಲಸ ಅಗಾಧ. ಸ್ವಚ್ಛ, ಸುಂದರ ಪತ್ರಿಕೋದ್ಯಮಕ್ಕೆ ಅವರು ಎತ್ತಿದ ಕೈ. ಮಿತಭಾಷಿ. ಒಳ್ಳೆಯ ಕೆಲಸಗಾರರು ಸಹ. ಪ್ರಜಾವಾಣಿಗೆ ವಿದಾಯ ಹೇಳಿ ಅವರು ತಮ್ಮ ಹುಟ್ಟೂರು ಉತ್ತರ ಕರ್ನಾಟಕದ ಗಂಡು ಮೆಟ್ಟಿದ ನಾಡಿಗೆ ವಾಪಸ್ ಆಗುತ್ತಿದ್ದಾರೆ., ಅವರು ತುಮಕೂರು ಜಿಲ್ಲೆಗೆ ನ್ಯಾಯ ಒದಗಿಸಿದ್ದಾರೆ. ಜಿಲ್ಲೆಯ ಪರ ಪಕ್ಷಪಾತಿಯಾಗಿ ಕೆಲಸ ಮಾಡಿ ಈಗ ಅವರೂರಿಗೆ ಹೊರಟಿದ್ದಾರೆ.

ಒಂದು ಘಟನೆಯನ್ನು ನಾವಿಲ್ಲಿ ನೆನಪು ಮಾಡಿಕೊಳ್ಳಲೇಬೇಕು. ಅದೊಂದು ಮುಂಜಾನೆ ಐದು ಗಂಟೆ ಸಮಯ.  ಐದಾರು ದಿನಗಳ ಕಾಲ ಅವರಿಗೆ ಕರೆ ಬರುತ್ತಲೇ ಇತ್ತು, ಆರೇಳು ವರ್ಷದ ಒಬ್ಬ ಹುಡುಗನನ್ನು ಮನೆ ಮನೆ ಕಸ ಎತ್ತಲು ಬಿಡುತ್ತಿದ್ದಾರೆ, ಏನಾದರೂ ಮಾಡಿ ಇದನ್ನು ತಪ್ಪಿಸಿ ಎಂದು.

ಎರಡು ದಿನ ಎರಡು ರಸ್ತೆಗಳನ್ನು ಕಾದರು. ಮೂರನೇ ದಿನ ಆ ಹುಡುಗ ತುಮಕೂರಿನ ಎಸ್.ಎಸ್,ಪುರಂನ ರಸ್ತೆಯೊಂದರಲ್ಲಿ ಮನೆ ಮನೆ ಕಸ ಎತ್ತುತ್ತಿದ್ದ.  ಆತನನ್ನು ಮಾತನಾಡಿಸಿದರು. ಆತ ಏನ್ನೆಲ್ಲವನ್ನು ಹೇಳಿದ. ತಾಯಿ ಇಲ್ಲದ ಬಗ್ಗೆಯೂ ತಿಳಿಸಿದ.

ಮರುದಿನ ಪ್ರಜಾವಾಣಿ ಪತ್ರಿಕೆಯಲ್ಲಿ ಈ ಹುಡುಗನ ಕುರಿತು ವರದಿ ಪ್ರಕಟವಾಯಿತು. ಈ ವರದಿ ಓದಿದ ಮಕ್ಕಳ ಕಲ್ಯಾಣ ಸಮಿತಿ ಈ ವರಧಿ ಆಧಾರದಲ್ಲಿ ಸುಮೋಟೊ ದೂರು ದಾಖಲಿಸಿಕೊಂಡಿತ್ತು.  ಹುಡುಗನನ್ನು ಪತ್ತೆ ಹಚ್ಚಿತ್ತು. ಹುಡುಗನನ್ನು ಬಳಸಿಕೊಂಡ ಕಸ ಎತ್ತುವ ಟೆಂಡರ್ ಕರೆದಿದ್ದ ಗುತ್ತಿಗೆದಾರನಿಗೂ ನೋಟಿಸ್ ಹೋಯಿತು. ಹಾಗೇ, ಅಳವಂಡಿ ಅವರಿಗೂ ನೋಟಿಸ್ ನೀಡಿತು.

ಅಳವಂಡಿ ಅವರು ಹೇಳಿದ ಹೇಳಿಕೆ, ದಾಖಲಿಸಿಕೊಂಡಿದ್ದ ವಿವರಗಳು ಆ ಹುಡುಗನಿಗೆ ನ್ಯಾಯ ಒದಗಿಸಿತು. ಹುಡುಗನನ್ನು ಹಾಸ್ಟೆಲ್, ಶಾಲೆಗೆ ಸೇರಿಸಿ ನ್ಯಾಯಮಂಡಳಿ ಆದೇಶಿಸಿತು. ಅದರಂತೆ ಆತನನ್ನು ಶಾಲೆಗೆ ಸೇರಿಸಲಾಯಿತು. ಆತನ ಹೆಸರಿಗೆ ಹದಿನೈದು ಸಾವಿರ ಹಣವನ್ನು ಠೇವಣೆಯಾಗಿ ಇಡಿಸಲಾಯಿತು.ಈ ವರದಿ ಬಗ್ಗೆಯೂ ಸಮಿತಿ ಶಾಘ್ಲಿಸಿತು. ಇಂಥ ಅನೇಕ ಮಾನವೀಯ ವರದಿಗಳು ಅಳವಂಡಿ ಅವರಿಂದ ಮೂಡಿಬಂದಿವೆ, ಈಗ ಹುಡುಗ ಪದವಿಯಲ್ಲಿ ಓದುತ್ತಿರಬಹುದೇನೋ? ಇದೇ ಹೊತ್ತಲ್ಲಿ ಅಳವಂಡಿ ಅವರು ತುಮಕೂರು ತೊರೆದು  ಹೋಗುತ್ತಿದ್ದಾರೆ. ಅವರಿಗೆ ಒಳ್ಳೆಯದಾಗಲಿ ಎಂದು ‘ಪಬ್ಲಿಕ್ ಸ್ಟೋರಿ’ ಆಶಿಸುತ್ತಿದೆ.

RELATED ARTICLES

1 COMMENT

  1. ಅಳವಂಡಿ ಮಾನವೀಯ ಮೌಲ್ಯಗಳ ಆಗರ. ಅವರ ಮುಂದಿನ ಜೀವನ ಉಜ್ವಲವಾಗಿರಲಿ. ಅವರ ಬಗ್ಗೆ ಯಾರಿಗೂ ತಿಳಿಯದ ಮಾಹಿತಿ ಬಗ್ಗೆ ಬರೆದ ಪಬ್ಲಿಕ್ ಸ್ಟೋರಿಗೆ ಧನ್ಯವಾದಗಳು.

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?