ನಮ್ಮೂರು

ಆಟೋ ಚಾಲಕನಿಗೆ ಜೈಲು ಶಿಕ್ಷೆ, ಆಟೋ ಚಾಲಕನಿಗೆ ಜೈಲು ಶಿಕ್ಷೆ, ದಂಡ

ಪಾವಗಡ: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ವಾಹನ ಸವಾರನ ಸಾವಿಗೆ ಕಾರಣನಾದ ಆಟೋ ಚಾಲಕನಿಗೆ ಪ್ರಧಾನ ಸಿವಿಲ್ ಮತ್ತು ಜೆಎಂಎಫ್ ಸಿ ನ್ಯಾಯಾದೀಶರಾದ ಜಗದೀಶ್ ಬಿಸೆರೊಟ್ಟಿ 1 ವರ್ಷ 2 ತಿಂಗಳು ಜೈಲು ಶಿಕ್ಷೆ, 10 ಸಾವಿರ ರೂ ದಂಡ ವಿಧಿಸಿ ಮಂಗಳವಾರ ತೀರ್ಪು ನೀಡಿದ್ದಾರೆ.
ತಾಲ್ಲೂಕಿನ ಅರಸೀಕೆರೆ-ಲಿಂಗದಹಳ್ಳಿ ರಸ್ತೆಯಲ್ಲಿ ಅಕ್ಟೋಬರ್-10, 2014 ರಂದು ಆಟೋ ಚಾಲಕ ಕುಮಾರಸ್ವಾಮಿ ಎಂಬುವರು ಅತೀ ವೇಗ, ಅಜಾಗರೂಕತೆಯಿಂದ ಆಟೋ ಚಾಲನೆ ಮಾಡಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದರು. ಅಪಘಾತದಲ್ಲಿ ದ್ವಿಚಕ್ರವಾಹನ ಸವಾರ ಮಂಜುನಾಥ್ ಅವರು ಮೃತಪಟ್ಟಿದ್ದರು.
ಸರ್ಕಲ್ ಇನ್ ಸ್ಪೆಕ್ಟರ್ ಆರ್.ಭಾನುಪ್ರಸಾದ್ ತನಿಖೆ ನಡೆಸಿ ಅಂತಿಮ ವರದಿ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕರಾದ ವಿ.ಮಂಜುನಾಥ್ ವಾದ ಮಂಡಿಸಿದ್ದಾರೆ.

Comment here