Friday, October 4, 2024
Google search engine
Homeಜನಮನಆತ್ಮ ನಿರ್ಭರ ಭಾರತದ ಆತ್ಮ ಎಂ.ಎಸ್.ಎಮ್.ಇ.ಗಳಾಗಲಿ

ಆತ್ಮ ನಿರ್ಭರ ಭಾರತದ ಆತ್ಮ ಎಂ.ಎಸ್.ಎಮ್.ಇ.ಗಳಾಗಲಿ

ಚಂದನ್ ಡಿ.ಎನ್. ತುಮಕೂರು


ಕೋವಿಡ್ ಜಾಗತಿಕ ಬಿಕ್ಕಟ್ಟು ಪ್ರತಿಯೊಬ್ಬ ವ್ಯಕ್ತಿಯ, ದೇಶದ, ಅಷ್ಟೇ ಏಕೆ ಇಡೀ ವಿಶ್ವದ ಚಿಂತನಾ ಶೈಲಿಯನ್ನೇ ಬದಲಿಸಿದೆ. ನಗರ ಕೇಂದ್ರೀಕೃತ ಆರ್ಥಿಕ, ಸಾಮಾಜಿಕ, ಪರಿಸರವು ಮತ್ತೊಮ್ಮೆ ಗ್ರಾಮಗಳ ಕಡೆಗೆ ಮುಖ ಮಾಡಿದೆ.

ಅದರಲ್ಲೂ ಭಾರತದಂತಹ ಬೃಹತ್ ಜನಸಂಖ್ಯಾ ಬೆಳವಣಿಗೆ ಮತ್ತು ತ್ವರಿತಗತಿಯಲ್ಲಿ ನಗರೀಕರಣಗೊಳ್ಳುತ್ತಿದ್ದ ದೇಶದಲ್ಲಿ ಉದ್ಯೋಗ, ಶಿಕ್ಷಣ, ಭದ್ರತೆ, ಉತ್ತಮಜೀವನ ಶೈಲಿಯನ್ನು ಹರಸಿ ಜನರು ನಗರಗಳಿಗೆ ವಲಸೆ ಬರುವುದು ಸಾಮಾನ್ಯ ಪ್ರಕ್ರಿಯೆಯಾಗಿತ್ತು.

ಅತಿಯಾದ ವಲಸೆಯಿಂದಾಗಿ ನಗರಗಳಲ್ಲಿ ಅತಿಯಾದ ಜನಸಂಖ್ಯಾ ದಟ್ಟಣೆ, ಪರಿಸರನಾಶ, ಭೂ ಒತ್ತುವರಿ ಮತ್ತು ಮೂಲಭೂತ ಸೌಲಭ್ಯಗಳ ಕೊರತೆ,ಕಾನೂನು ಸುವ್ಯವಸ್ಥೆ ಸಮಸ್ಯೆಗಳು ಹೆಚ್ಚಾದರೆ ಗ್ರಾಮಗಳು ಅಗತ್ಯವಾದ ಮೂಲ ಸೌಲಭ್ಯಗಳಿಂದ ವಂಚಿತವಾಗಿ ಕೃಷಿ ಸಂಬಂಧಿ ಚಟುವಟಿಕೆಗಳು, ಗ್ರಾಮೀಣ ಗುಡಿಕೈಗಾರಿಕೆಗಳು ಅಗತ್ಯ ಮಾನವ ಸಂಪನ್ಮೂಲಗಳಿಲ್ಲದೆ ನಲುಗಿದ್ದವು.

ಒಂದು ನಿದರ್ಶನವನ್ನು ನೋಡುವುದಾದರೆ,ತುಮಕೂತರು ಜಿಲ್ಲೆ, ಚಿ.ನಾ.ಹಳ್ಳಿ ತಾಲೂಕು ಎಂ.ಎಚ್‌ಕಾವಲ್ ನಲ್ಲಿ ೧೯೯೦ರ ದಶಕದ ಅವಧಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ತೆಂಗು ನಾರಿನ ಗುಡಿಕೈಗಾರಿಕೆಯಲ್ಲಿ ಸುಮಾರು ೫೦ ಜನರು ಕೆಲಸ ಮಾಡುತ್ತಿದ್ದರು. ಇದರಲ್ಲಿ ಬಹುತೇಕ ಪರಿಶಿಷ್ಟ ಜಾತಿಗೆ ಸೇರಿದ ಮಹಿಳೆಯರು ಇದ್ದು, ೨೦೦೦-೨೦೦೨ ರ ವೇಳೆಗೆ ಬಹುತೇಕ ನಿಂತು ಹೋಯಿತು. ಕಾರಣ ಆಗಾಗಲೇ ಅಲ್ಲಿನ ಯುವಕರು ಅಷ್ಟೇನೂ ಲಾಭದಾಯಕವಲ್ಲದ ಮತ್ತು ಬೇಡಿಕೆಯಿಲ್ಲದ ಹಗ್ಗ, ಮ್ಯಾಟು ತಯಾರಿಕೆಯನ್ನು ಬಿಟ್ಟು ಬೆಂಗಳೂರಿನಲ್ಲಿ ಹೋಟೆಲ್, ಬೇಕರಿ ಮತ್ತು ಕಟ್ಟಡ ನಿರ್ಮಾಣ, ಕಾರ್ಖಾನೆಗಳಲ್ಲಿ ಮತ್ತು ಗಾರ್ಮೆಂಟ್ಸ್‌ನಲ್ಲಿ ದಿನಗೂಲಿ ನೌಕರರಾಗಿ ಕೆಲಸ ನಿರ್ವಹಿಸತೊಡಗಿದರು.

ಇದು ಎಷ್ಟರಮಟ್ಟಿಗೆ ಎಂದರೆ ಊರಿನ ಪಟೇಲರ ಒಬ್ಬ ಮಗನನ್ನು ಹೊರತು ಪಡಿಸಿ ಬಹುತೇಕರು ಬೆಂಗಳೂರಿನ ೮ನೇ ಮೈಲಿ,ಮಾಕಳಿ,ಪೀಣ್ಯ,ಯಶವಂತಪುರ ತಲುಪಿದ್ದರು. ಇನ್ನು ಗ್ರಾಮಗಳಲ್ಲಿ ಉಳಿದವರು ಶಾಲಾ ಕಾಲೇಜುಗಳಲ್ಲಿ ಓದುತ್ತಿರುವ ಯುವಕರು ಮತ್ತು ವಯಸ್ಸಾದ ತಂದೆ-ತಾಯಂದಿರು.ಇದಕ್ಕೆ ಮುಖ್ಯಕಾರಣವೆಂದರೆ ಕೃಷಿಯ ಅಕಾಲಿಕತೆ, ತೆಂಗು ನಾರಿನ ಉತ್ಪನ್ನಗಳಿಗೆ ಪಾಸ್ಟಿಕ್ ಮತ್ತು ರಬ್ಬರ್ ಉತ್ಪನ್ನಗಳ ತೀವ್ರ ಪೈಪೋಟಿ ಮತ್ತು ಆಳುವ ಸರ್ಕಾರಗಳ ನಿರ್ಲಕ್ಷ್ಯ.

ಮರಳಿ ಮಣ್ಣಿಗೆ :


ಕೋವಿಡ್-೧೯ನ ಲಾಕ್‌ಡೌನ್ ನಿಂದಾಗಿ ಬದಲಾದ ಪರಿಸ್ಥಿತಿಯಲ್ಲಿ ನಗರದಿಂದ ಗ್ರಾಮೀಣ ಪ್ರದೇಶಗಳಿಗೆ ವಲಸೆ ಶುರುವಾಗಿದೆ. ಗ್ರಾಮಗಳಲ್ಲಿ ಕೃಷಿ ಮತ್ತು ಗುಡಿ ಕೈಗಾರಿಕೆಗಳ ಆರ್ಥಿಕ ಚಟುವಟಿಕೆಗಳು ಮತ್ತೆ ಪ್ರಾರಂಭವಾಗಿವೆ. ಮೇಲಿನ ನಿದರ್ಶನದ ಗ್ರಾಮದಲ್ಲಿ ಯುವಕರು ಮತ್ತೆ ನಾರು ಉತ್ಪನ್ನಗಳ ತಯಾರಿಕೆಯಲ್ಲಿ ತೊಡಗಿದ್ದಾರೆ. ಗ್ರಾಮಗಳು ಸರ್ವತೋಮುಖ ಅಭಿವೃದ್ಧಿಯು ಆ ಮೂಲಕ ದೇಶದ ಅಭಿವೃದ್ಧಿಗೆ ಭದ್ರ ಅಡಿಪಾಯ ಹಾಕಿವೆ.

ಕಲ್ಪತರು ನಾಡು ಎಂದೇ ಪ್ರಖ್ಯಾತಿ ಪಡೆದಿರುವ ತುಮಕೂರು ಜಿಲ್ಲೆಯ ಒಳನಾಡಿನಲ್ಲಿ ಅತಿ ಹೆಚ್ಚು ತೆಂಗು ಬೆಳೆಯುತ್ತಿರುವ ದೇಶದ ಏಕೈಕ ಜಿಲ್ಲೆಯಾಗಿದೆ. ಜಿಲ್ಲೆಯ ಒಳನಾಡಿನಲ್ಲಿ ತೆಂಗು ಬೆಳೆಯುತ್ತಿರುವುದರಿಂದ ಸಿಹಿ ನೀರಾ ಕಾಯಿ,ಕೊಬ್ಬರಿಗೆ ಹೆಸರಾಗಿದೆ.

ಇತ್ತೀಚೆಗೆ ಹಲವು ಹೊಸ ಹೊಸ ತಳಿಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಉದಾಹರಣೆಗೆ ಕಡಿಮೆ ನೀರಿನಲ್ಲಿ ಬೆಳೆಯುವ ’ಕಲ್ಪತರು’ ಎಳ ನೀರು ತಳಿಯನ್ನು ಅಭಿವೃದ್ಧಿ ಪಡಿಸಿದ್ದಾರೆ.
ತುಮಕೂರು ಜಿಲ್ಲೆ ಅಥವಾ ತಾಲೂಕುಗಳಲ್ಲಿ ಕನಿಷ್ಟ ೨-೩ ಸಣ್ಣ ಮತ್ತು ಮಧ್ಯಮ ತೆಂಗಿನ ಎಣ್ಣೆ ಕಾರ್ಖಾನೆಗಳನ್ನು ಸ್ಥಾಪಿಸಬಹುದಾಗಿದೆ. ಅಲ್ಲದೆ ಕೊಬ್ಬರಿಯಿಂದ ಮಿಠಾಯಿ, ಬಿಸ್ಕತ್, ಚಾಕೋಲೇಟ್, ಕೊಬ್ಬರಿ ಫ್ಲೇವರ್ ಐಸ್‌ಕ್ರೀಮ್ ತಯಾರು ಮಾಡಬಹುದಾಗಿದೆ. ಕಾಯಿ ಪೌಡರ್ ತಯಾರಿಸಿ ಹೊರರಾಜ್ಯ ಅಥವಾ ಹೊರದೇಶಗಳಿಗೆ ಕಳುಹಿಸಲು ಹೇರಳವಾದ ಅವಕಾಶವಿದೆ.

ನೀರಾ ಉತ್ಪಾದನೆಯನ್ನೂ ಸಹ ಮಾಡಬಹುದು.

ಇತ್ತೀಚಿನ ದಿನಗಳಲ್ಲಿ ಪರಿಸರ ಕಾಳಜಿ ಹೆಚ್ಚುತ್ತಿದ್ದು, ಪ್ಲಾಸ್ಟಿಕ್ ಮತ್ತು ರಬ್ಬರ್ ಗಳ ನಿರ್ಮೂಲನೆಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಗಮನ ವಹಿಸುತ್ತಿದ್ದು ಇದನ್ನು ಬಳಸಿಕೊಂಡು ಜಿಲ್ಲೆಯಲ್ಲಿ ತೆಂಗು ನಾರಿನಿಂದ ಹಗ್ಗಗಳು, ಮ್ಯಾಟು, ಇತ್ಯಾದಿಗಳನ್ನು ಹಲವಾರು ಗುಡಿ ಮತ್ತು ಸಣ್ಣ ಕೈಗಾರಿಕೆಗಳನ್ನು ಸ್ಥಾಪಿಸುವುದರ ಮೂಲಕ ಮತ್ತು ಪುನರುಜ್ಜೀವನ ಗೊಳಿಸುವುದರ ಮೂಲಕ ಉದ್ಯೋಗಾವಕಾಶಗಳನ್ನು ಸೃಷ್ಟಿ ಮಾಡಬಹುದು.

ಇಂದು ಬಹುತೇಕ ಗಾಣಗಳು ಕಾಣೆಯಾಗಿವೆ. ಆದರೆಇತ್ತೀಚೆಗೆಜನರಲ್ಲಿಅದರಲ್ಲೂ ನಗರವಾಸಿಗಳಲ್ಲಿ ನೈಸರ್ಗಿಕ ಉತ್ಪನ್ನಗಳ ಬಳಕೆಗೆ ಒಲವು ಹೆಚ್ಚಿದೆ ತುಮಕೂರು ಜಿಲ್ಲೆಯಲ್ಲಿ ಬೆಳೆಯುತ್ತಿರುವ ಅರಳೆ, ಹೊಂಗೆ, ಇತ್ಯಾದಿಗಳನ್ನು ಬಳಸಿಕೊಂಡು, ಪ್ರಸ್ತುತ ಅಭಿವೃದ್ಧಿ ಹೊಂದಿರುವ ತಂತ್ರಜ್ಞಾನವನ್ನು ಬಳಸಿಕೊಂಡು ಗಾಣಗಳನ್ನು ಅಭಿವೃದ್ಧಿಪಡಿಸಬೇಕಿದೆ.

ತುಮಕೂರು ಜಿಲೆಯಲ್ಲ್ಲಿ ತೆಂಗು ಬೆಳೆಯಷ್ಟೇ ಅಡಕೆ ಬೆಳೆಯಲಾಗುತ್ತಿದೆ. ಅಡಕೆಯನ್ನು ಹೊರರಾಜ್ಯಗಳಿಗೆ ರಫ್ತು ಮಾಡುವುದರ ಜೊತೆಗೆ ಪಾನ್ ಮಸಾಲ ಉತ್ಪನ್ನಗಳ ತಯಾರಿಕೆಯಲ್ಲಿ ಸಣ್ಣ-ಮಧ್ಯಮ ಕೈಗಾರಿಕೆಗಳನ್ನು ಸ್ಥಾಪಿಸಬಹುದು.

ಜೊತೆಗೆ ಇತ್ತೀಚೆಗೆ ಹಲವು ಸ್ಟಾರ್ಟಪ್‌ಗಳು ಅಡಕೆಯಿಂದ ಕಾಫಿ ರೀತಿಯ ಪಾನೀಯವನ್ನು ತಯಾರಿಸುತ್ತಿದ್ದು, ಇದೇ ಮಾದರಿಯ ಕೈಗಾರಿಕೆಗಳನ್ನು ಜಿಲ್ಲೆಯಲ್ಲಿ ಸ್ಥಾಪಿಸಬಹುದಾಗಿದೆ.ಪ್ಲಾಸ್ಟಿಕ್(ಏಕ ಬಳಕೆಯ)ಅನ್ನು ರಾಜ್ಯ ಸರ್ಕಾರವು ನಿಷೇಧಿಸಿದ್ದು, ಇಂದು ಅಡಿಕೆ ಪಟ್ಟೆಯಿಂದ ಮಾಡಿದ ತಟ್ಟೆ,ಜೊನ್ನೆಗಳನ್ನು ಬಳಸುತ್ತಿದ್ದು, ತುಮಕೂರು ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅವುಗಳನ್ನು ಅಭಿವೃದ್ಧಿಪಡಿಸಲಾಗಿದೆ.

ತುಮಕೂರು ಜಿಲ್ಲೆಯಲ್ಲಿರುವ ವಸಂತನರಸಾಪುರದ “ಫುಡ್ ಪಾರ್ಕ್”ಗೆ ಜಿಲ್ಲೆಯ ಎಲ್ಲಾ ಗ್ರಾಮಗಳಿಗೆ ಸಂಪರ್ಕ ಕಲ್ಪಿಸಿದರೆ ರೈತರು ಬೆಳೆಯುವ ತರಕಾರಿ ಮತ್ತು ಬೇಳೆ ಕಾಳುಗಳ ಉತ್ಪನ್ನಗಳನ್ನು ಯಶಸ್ವಿಯಾಗಿ ವಿದೇಶಗಳಿಗೆ

ರಫ್ತು ಮಾಡಬಹುದಾಗಿದೆ.
ಉದಾಹರಣೆಗೆ: ತುಮಕೂರಿನಲ್ಲಿ ಹಲವು ತಳಿಯ ಹಲಸು, ಮಾವು, ಬಾಳೆ ಇತ್ಯಾದಿ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಇವುಗಳನ್ನು ಯಶಸ್ವಿಯಾಗಿ ಚಿಪ್ಸ್, ಹಲ್ವ, ಜ್ಯೂಸ್ ತಯಾರಿಕೆಗೆ ಬಳಸಬಹುದು. ಇವುಗಳನ್ನು ತಾಲೂಕಿನಲ್ಲಿ ಸಣ್ಣ-ಮಧ್ಯಮ ಕೈಗಾರಿಕೆಗಳನ್ನು ಸ್ಥಾಪಿಸುವುದರ ಮೂಲಕವು ಕೃಷಿ ಉತ್ಪನ್ನಗಳ ಮೌಲ್ಯವನ್ನು ವರ್ಧಿಸಬುದಾಗಿದೆ.

ರೇಷ್ಮೆ: ದೇಶವು ಲಾಕ್‌ಡೌನ್ ಹೇರಿದ ಪರಿಣಾಮ ಮತ್ತು ಭಾರತಚೀನಾ ನಡುವಿನ ಗಡಿ ಬಿಕ್ಕಟ್ಟಿನಿಂದಾಗಿ ಚೀನಾದಿಂದ ಆಮದಾಗುತ್ತಿದ್ದ ಕಚ್ಚಾ ರೇಷ್ಮೆ ಪ್ರಮಾಣ ಕಡಿಮೆಯಾಗುತ್ತಿದೆ. ರೇಷ್ಮೆಗೆ ಬೇಡಿಕೆ ಹೆಚ್ಚಿರುವುದರಿಂದ ರೈತರು ಈ ಅವಕಾಶಗಳನ್ನು ಬಳಸಿಕೊಳ್ಳಬೇಕಿದೆ. ತಾಲೂಕಿನಲ್ಲಿ ರೇಷ್ಮೆ ಉತ್ಪಾದನೆ, ಹಿಪ್ಪು ನೇರಳೆ ಬೆಳೆಗೆ ಉತ್ತಮ ವಾತಾವರಣವಿರುವುದನ್ನು ರೈತರು ಮನಗಾಣಬೇಕಿದೆ. ಗುಬ್ಬಿ ತಾಲೂಕು ಕಲ್ಲೂರು ಕೇಂದ್ರೀಕೃತವಾಗಿರುವ ರೇಷ್ಮೆ, ಕೈಮಗ್ಗ ಕೇಂದ್ರವನ್ನು ದೊಡ್ಡ ಮಟ್ಟದಲ್ಲಿ ಅಭಿವೃದ್ಧಿಪಡಿಸುವ ಅವಕಾಶವಿದೆ.

ಪೌಲ್ಟ್ರಿ ಮತ್ತು ಹೈನುಗಾರಿಕೆ : ಕೃಷಿ ಸಂಬಂಧಿಸಿದ ಚಟುವಟಿಕೆಗಳಲ್ಲಿ ವಿವಿಧ ತಳಿಗಳ ಕೋಳಿ ಸಾಕಾಣೆಗೆ ತಾಲೂಕಿನಲ್ಲಿ ಉತ್ತಮ ಅವಕಾಶಗಳಿವೆ. ವೆಂಕಾಬ್, ಸುವರ್ಣ,ಸುಗುಣ ಇತ್ಯಾದಿ ಕಂಪನಿಗಳನ್ನು ತಾಲೂಕುಗಳಿಗೆ ಆಹ್ವಾನಿಸಬೇಕಿದೆ. ಇನ್ನು ತುಮುಲ್ ಜಿಲ್ಲೆಯ ಹೆಮ್ಮೆಯಾಗಿದ್ದು ಹೈನುಗಾರಿಕೆಯನ್ನು ಇನ್ನು ಅಭಿವೃದ್ಧಿಗೊಳಿಸಬೇಕಿದೆ. ಊದುಬತ್ತಿ, ಕರ್ಪೂರ, ಮೇಣದ ಬತ್ತಿ, ಬೀಡಿ, ಸಿಗರೇಟ್ ಇತ್ಯಾದಿಗಳ ತಯಾರಿಕೆಗೆ ತಾಲೂಕುಗಳಲ್ಲಿ ಅವಕಾಶವಿದೆ. ಜಿಲ್ಲೆಯು ರಾಜ್ಯದೆಲ್ಲೆಡೆ ಒಂದು ಬೃಹತ್ ವಿಸ್ತೀರ್ಣ ಮತ್ತು ಜನಸಂಖ್ಯೆ ಹೊಂದಿರು ಜಿಲ್ಲೆಯಾಗಿದ್ದು ರಾಜಧಾನಿ ಬೆಂಗಳೂರಿಗೆ ಸಮೀಪದಲ್ಲಿರುವುದರಿಂದ ರಫ್ತು ಮಾಡುವುದು ಸುಲಭವಾಗಿದೆ.
ಗಾರ್ಮೆಂಟ್ಸ್ ಮತ್ತು ಕಾರ್ಖಾನೆ ಸ್ಥಾಪನೆಗೆ ಪ್ರೋತ್ಸಾಹ: ಬೆಂಗಳೂರಿನಂತ ಬೃಹತ್ ನಗರದಲ್ಲಿ ಹೆಚ್ಚಿನ ಜನಸಂಖ್ಯಾ ದಟ್ಟಣೆಯಿಂದ ಜಾಗತಿಕ ಪಿಡುಗುಗಳ ಸಂದರ್ಭದಲ್ಲಿ ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿನ ಕಾರ್ಮಿಕರು ಹೆಚ್ಚು ಬೇಕಿರುವ ಕಾರ್ಖಾನೆಗಳು ಕಾರ್ಯನಿರ್ವಹಿಸಲು ಸಾಧ್ಯವಿಲ್ಲ.

ಈ ಸಂದರ್ಭದಲ್ಲಿ ಕಾರ್ಖಾನೆಗಳು ಸಹಜವಾಗಿ ತಾಲೂಕು ಹಾಗೂ ಜಿಲ್ಲಾ ಕೇಂದ್ರಗಳತ್ತ ಮುಖ ಮಾಡಿವೆ. ಇಲ್ಲಿ ಕೆಲಸ ಮಾಡುತ್ತಿದ್ದ ಬಹುತೇಕ ಕಾರ್ಮಿಕರು ಹಳ್ಳಿಗೆ ಹಿಂದಿರುಗಿರುವುದರಿಂದ ಇಂತಹ ಕಾರ್ಖಾನೆಗಳ ಸ್ಥಾಪನೆಗೆ ಜಿಲ್ಲಾ ಮತ್ತು ತಾಲೂಕು ಆಡಳಿತಗಳು ಪ್ರೋತ್ಸಾಹ ನೀಡಬೇಕಿದೆ. ಇದರಿಂದ ಸಾವಿರಾರು ಜನರು ಉದ್ಯೋಗ ಪಡೆಯಲು ಸಾಧ್ಯ.

ಇತ್ತೀಚಿನ ದಿಗಳಲ್ಲಿ ಕಟ್ಟಡ ನಿರ್ಮಾಣಕ್ಕಾಗಿ ಮಣ್ಣು ಇಟ್ಟಿಗೆಗಳಿಗಿಂತ ಸಿಮೆಂಟ್ ಇಟ್ಟಿಗೆಗಳಿಗೆ ಬೇಡಿಕೆ ಹೆಚ್ಚಿರುವುದರಿಂದ ಸಿಮೆಂಟ್ ಇಟ್ಟಿಗೆ ತಯಾರಿಕೆಯನ್ನು ದೊಡ್ಡ ಮಟ್ಟದಲ್ಲಿ ಪ್ರೋತ್ಸಾಹಿಸಬೇಕಿದೆ.ಪ್ಯಾಕೇಜ್ಡ್ ಕುಡಿಯುವ ನೀರಿನ ಸಣ್ಣ ಮತ್ತು ಮಧ್ಯಮ ಕಾರ್ಖಾನೆ ಸ್ಥಾಪನೆ, ಅರ್ಧ ಲೀಟರ್, ಒಂದು ಲೀಟರ್‌ವರೆಗೂ ಕುಡಿಯುವ ನೀರಿನ ತಯಾರಿಕ ಕಾರ್ಖಾನೆ ನಿರ್ಮಿಸಬಹುದು.

ಪ್ರಸ್ತುತ ದಿನಗಳಲ್ಲಿ ಚೀನಾದಲ್ಲಿ ಉತ್ಪಾದನೆ ವೆಚ್ಚವು ಹೆಚ್ಚಾಗುತ್ತಿದ್ದು ಹಲವಾರು ಕಂಪನಿಗಳು ಚೀನಾಗೆ ಪರ್ಯಾಯವಾಗಿ ಭಾರತದಲ್ಲಿ ಹೂಡಿಕೆ ಮಾಡಲು ಮುಂದಾಗುತ್ತಿವೆ. ಇದಕ್ಕೆ ಕಾರಣ ಇಲ್ಲಿನ ಉತ್ಪಾದನೆ ವೆಚ್ಚ ಕಡಿಮೆ ಇರುವುದು ಮತ್ತು ಅಗಾದ ಮಾರುಕಟ್ಟೆಗಳಿವೆ.

ಇದೇ ಸಂದರ್ಭದಲ್ಲಿ ಬಾರತ ಮತ್ತು ಚೀನಾ ನಡುವಿನ ಗಡಿ ಬಿಕ್ಕಟ್ಟಿನಿಂದಗಿ ಭಾರತ ಸರ್ಕಾರವು ಹಲವು ಎಲೆಕ್ಟಾನಿಕ್ಸ್ ಮತ್ತು ಎಲೆಕ್ಟ್ರಿಕಲ್ ಉತ್ಪಾದನೆಗಳನ್ನು ನಿಷೇದಿಸಿದಿರುವುದಾಗಿ ಜಿಲ್ಲೆ ಮತ್ತು ತಾಲೂಕು ಕೇಂದ್ರಗಳಲ್ಲಿ ಅನೇಕ ಸಣ್ಣ ಮತ್ತು ಮದ್ಯಮ ಗಾತ್ರದ ಎಲೆಕ್ಟರಾನಿಕ್ಸ್ ಕಾರ್ಖಾನೆಗಳನ್ನು ತೆರೆಯಲು ಅವಕಾಸವಿದೆ.ಇಷ್ಟೇ ಅಲ್ಲದೆ ಮಸ್ಕ್ ಸ್ಯಾನಿಟೈಸರ್,ಗ್ಲೌಸ್ ಮತ್ತು ಇತ್ಯಾದಿಗಳನ್ನು ಉತ್ಪಾದಿಸಲು ಅವಕಾಶವಿದೆ.

ಒಳಗೊಳ್ಳುವ ಸುಸ್ಥಿತ ಅಭಿವೃದ್ದಿ:
ಭಾರತವು ತೀವ್ರ ಗತಿಯಲ್ಲಿ ನಗರೀಕರಣಗೊಳ್ಳುತ್ತಿದೆಯಾದರೂ ಇಂದಿಗೂ ಶೇ,೬೨ ರಷ್ಟು ಜನ ಹಳ್ಳಿಯಲ್ಲೇ ವಾಸಿಸಿತ್ತಿದ್ದಾರೆ. ದೇಶದಲ್ಲಿ ಕೃಷಯು ಅತಿ ಹೆಚ್ಚು ಉದ್ಯೋಗವನ್ನು ಸೃಷ್ಟತಿಸಿದರೆ ಅತಿ ಸಣ್ಣ ಮತ್ತು ಮಧ್ಯಮ ಗಾತ್ರದ ಕೈಗರಿಕೆಗಳು ಹೆಚ್ಚಿನ ಉದ್ಯೋಗ ಸೃಷ್ಟಿಸಿತ್ತಿವೆ ಆದರೆ ಇವೆರಡೂ ಅಷ್ಟು ಲಭದಯಕವಾಗಿಲ್ಲ ಇಂದು ಕೃಷಿ ಮತ್ತು ಎಮ್.ಎಸ್.ಎಮ್.ಇ ಗಳು ಸಂಕಷ್ಟದ ಪರಿಸ್ಥಿತಿಯಲ್ಲಿವೆ.

ನೆರವು


ಗ್ರಾಮ ಮತ್ತು ಗ್ರಮೀಣ ಆರ್ಥಿಕತೆಯ ನೆರವನ್ನು ಕಡೆಗಣಿಸುತ್ತಿದ್ದ ಸರ್ಕಾರಗಳು ಇತ್ತೀಚೆಗೆ ಅವುಗಳ ಮಹತ್ವವನ್ನು ತಿಳಿದಿರುವುದು ಒಮದು ಆಶಾ ಭಾವನೆಯಾಗಿದೆ. ಕೇಂದ್ರ ಸರ್ಕಾರವು ಇತ್ತೀಚೆಗೆ ಘೋಷಿಸಿರುವ ಆತ್ಮ ನಿರ್ಭರ ಭಾರತ ಯೋಜನೆಯಲ್ಲಿ ಕ್ಛಷಿ ಹಾಗೂ ಕ್ಛಷಿ ಸಂಭಂದಿತ ಯೋಜನೆಗಳು ಮತ್ತು ಎಮ್.ಎಸ್,ಎಮ್.ಇ ಗಳಿಗೆ ಲಕ್ಷಾಂತರ ಕೋಟಿ ರೂಪಾಯಿಗಳನ್ನು ನೀಡುತ್ತಿದ್ದು,ಎಮ್,ಎಸ್,ಎಮ್,ಇ ಗಳಿಗೆ ಹೂಡಿಕೆಯನ್ನು ಹೆಚ್ಚಿಸುವ ದ್ಛಷ್ಟಿಯಿಂದ ಅವುಗಳ ವ್ಯಾಕ್ಯಾಯವನ್ನು ಬದಲಿಸಿದೆ.ಇನ್ನು ಅನೇಕ ಶಾಸನಾತ್ಮಕ ಬದಲಾವಣೆಯನ್ನು ತಂದಿದೆ. ಕರ್ನಾಟಕ ಸರ್ಕಾರವು ಹಲವು ಯೋಜನೆಗಳನ್ನು ಜಾರಿಗೊಳಿಸುತ್ತಿದೆ.

ಉದಾಹರಣೆಗೆ ನೂತನ ಕೈಗಾರಿಕ ನೀತಿ ೨೦೨೦-೨೫ ರ ಅನ್ವಯ ಕೆ.ಐ.ಎ.ಡಿ.ಬಿ ತಾನು ಅಭಿವೃದ್ದಿ ಪಡಿಸಿದ ಭೂಮಿಯಲ್ಲಿ ಶೇಕಡ ೩೦ ರಷ್ಟನ್ನು ಎಮ್.ಎಸ್,ಎಮ್,ಇ ಗಳೀಗೆ ಮೀಸಲಿಡಬೇಕು. ಸಬ್ಸಿಡಿ ರೂಪದಲ್ಲಿ ಬಡ್ಡಿ ದರವನ್ನು ಶೇಕಡ ೧೦ ರಿಂದ ೬ ಕ್ಕೆ ಇಳಿಸಿದೆ , ಅಲ್ಲದೆ ಟಯರ್-೨ ಮತ್ತು ಟಯರ್-೩ ನಗರಗಳಲ್ಲಿ ಕೈಗಾರಿಕೆಗಳನ್ನು ಸ್ಢಾಪಿಸಲು ಹಲವು ರಿಯಾಯಿತಿ ಮತ್ತು ವಿಶೇಷ ಪ್ರೋತ್ಸಾಹ ನೀಡುತ್ತಿದೆ.

ಇನ್ನೂ ಜಿಲ್ಲೆಯ ಮಾನವ ಸಂಪನ್ಮೂಲದ ಬಗ್ಗೆ ಹೇಳುವುದಾದರೆ ಜಿಲ್ಲೆಯ ಶೈಕ್ಷಣಿಕ ನಗರಿ ಎಂದೇ ಹೆಸರಾಗಿದೆ. ಇಲ್ಲಿ ಅನೇಕ ಇಂಜಿನಿಯರಿಂಗ್,ಡಿಪ್ಲೋಮ,ಐ.ಟಿ.ಐ ಕಾಲೇಜುಗಳಿದ್ದು ಕೌಶಲ್ವಭರಿತ ಉದ್ಯೋಗಾಕಾಂಕ್ಷಿಗಳಿದ್ದಾರೆ.

ಈ ಯುವ ಸಮುದಾಯಕ್ಕೆ ಭಾರತ ಮತ್ತು ಕೇಂದ್ರ ಸರ್ಕಾರಗಳು ಜಾರಿಗೆ ತಂದಿರುವ ಅನೇಕ ಕೌಶಲ್ಯ ಅಭಿವೃದ್ದಿ ಕಾರ್ಯಕ್ರಮಗಳ ತರಭೇತಿಯನ್ನು ನೀಡುತ್ತಿವೆ.

ಈ ಮೇಲಿನ ಎಲ್ಲಾ ಅಂಶಗಳ ಹಿನ್ನೆಲೆಯಲ್ಲಿ ಜಿಲ್ಲೆಯು ಉದ್ಯಮಗಳ ಹಾಟ್ಸ್ಪಾಟ್ ಆಗುವ ಎಲ್ಲಾ ಅವಕಾಶಗಳಿದ್ದು,ಇದಕ್ಕಾಗಿ ಸ್ಥಳೀಯರು,ಜನಪ್ರದಿನಿದಿಗಳು,ತಾಲುಕು ಮತ್ತು ಜಿಲ್ಲಾಡಳಿತಗಳು ಕೆಂಪು ಹಾಸು ಹಾಸಬೇಕಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?