ಕೆಲಸ ಪಡೆದುಕೊಳ್ಳುವ ಸಲುವಾಗಿ ಉದ್ಯೋಗ ಆಕಾಂಕ್ಷಿಗಳು ನೀಡುವ ವಿವರಗಳು ಸೋರಿಕೆಯಾಗುತ್ತಿವೆ…? 29 ಮಿಲಿಯನ್ ಭಾರತೀಯರ ಡೇಟಾ ಸೋರಿಕೆಯಾಗಿರುವುದು ಇದಕ್ಕೆ ನಿದರ್ಶನ. ಉದ್ಯೋಗ ನೀಡುತ್ತೇವೆ ಎಂದು ವಿವರ ಸಂಗ್ರಹಿಸುವ ವೆಬ್ ಸೈಟ್ ಗಳು ಸೇಫ್ ಅಲ್ಲ ಎಂದು ಸಾಬೀತಾಗಿದೆ.
ಡಾರ್ಕ್ ವೆಬ್‌ನಲ್ಲಿ 29 ಮಿಲಿಯನ್ ಭಾರತೀಯರ ವೈಯಕ್ತಿಕ ಡೇಟಾವನ್ನು ಹ್ಯಾಕರ್‌ಗಳು ಸೋರಿಕೆ ಮಾಡಿದ್ದಾರೆ.
ಭಾರತೀಯರ ವೈಯಕ್ತಿಕ ಡೇಟಾವನ್ನು ಡಾರ್ಕ್ ವೆಬ್‌ನಲ್ಲಿರುವ ಹ್ಯಾಕಿಂಗ್ ಫೋರಂಗಳಲ್ಲಿ ಉಚಿತವಾಗಿ ಪೋಸ್ಟ್ ಮಾಡಿದ್ದಾರೆ.
ಕಂಪನಿಯು ಇತ್ತೀಚೆಗೆ ಫೇಸ್‌ಬುಕ್ ಮತ್ತು ಸಿಕ್ವೊಯಾ ಅನುದಾನಿತ ಭಾರತೀಯ ಶಿಕ್ಷಣ ತಂತ್ರಜ್ಞಾನ ಸಂಸ್ಥೆ ಉನಾಕಾಡೆಮಿಯ ಹ್ಯಾಕಿಂಗ್ ಅನ್ನು ಬಹಿರಂಗಪಡಿಸಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
“29.1 ಮಿಲಿಯನ್ ಭಾರತೀಯ ಉದ್ಯೋಗಾಕಾಂಕ್ಷಿಗಳ ವೈಯಕ್ತಿಕ ವಿವರಗಳು ಡೀಪ್ ವೆಬ್ ನಲ್ಲಿ ಉಚಿತವಾಗಿ ಸೋರಿಕೆಯಾಗುತ್ತಿವೆ. ನಾವು ಸಾಮಾನ್ಯವಾಗಿ ಈ ರೀತಿಯ ಸೋರಿಕೆಯನ್ನು ಸಾರ್ವಕಾಲಿಕವಾಗಿ ನೋಡುತ್ತೇವೆ, ಆದರೆ ಈ ಸಮಯದಲ್ಲಿ, ಸಂದೇಶ ಹೆಡರ್ ನಮ್ಮ ಗಮನವನ್ನು ಸೆಳೆಯಿತು ಏಕೆಂದರೆ ಅದರಲ್ಲಿ ಹೆಚ್ಚಿನ ವೈಯಕ್ತಿಕ ವಿವರಗಳು ಸೇರಿವೆ ಸ್ಥಿರ ಶಿಕ್ಷಣ, ವಿಳಾಸ, ಇತ್ಯಾದಿ” ಎಂದು ಸೈಬಲ್ ಎನ್ನುವ ಬ್ಲಾಗ್ ಪೋಸ್ಟ್ ನಲ್ಲಿ ತಿಳಿಸಲಾಗಿದೆ.
ಕೆಲಸ ಕೊಡಿಸುವ ಹೆಸರಿನಲ್ಲಿ ನಾಯಿ ಕೊಡೆಗಳಂತೆ ಹುಟ್ಟಿಕೊಂಡಿರುವ ವೆಬ್ ಸೈಟ್ ಗಳಿಂದ ವಿವರಗಳು ಸೋರಿಕೆಯಾಗಿವೆ. ಭಾರತ ದಂತ ಬೃಹತ್ ದೇಶದಲ್ಲಿ ಉದ್ಯೋಗ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿರುವುದು ಸರ್ವೇ ಸಾಮಾನ್ಯ ಇದನ್ನು ಬಳಸಿಕೊಂಂಡಿರುವ ಹ್ಯಾಕರ್ ಗಳು 29.1 ಮಿಲಿಯನ್ ಜನರ ಸಂಪೂರ್ಣ ವಿವರವನ್ನು ಸೋರಿಕೆ ಮಾಡಿದ್ದಾರೆ
ಭಾರತದ ಕೆಲವು ಪ್ರಮುಖ ಉದ್ಯೋಗ ವೆಬ್‌ಸೈಟ್‌ಗಳಲ್ಲಿ ಸೋರಿಕೆಯ ಮೂಲವನ್ನು ಪತ್ತೆ ಮಾಡುತ್ತಿರುವುದಾಗಿ ಸೈಬರ್ ಕ್ರೈಂ ಇಲಾಖೆ ಮೂಲಗಳು ತಿಳಿಸಿವೆ.