Uppinagadi: ಬೈಕ್ ಕಳವು ಪ್ರಕರಣಕ್ಕೆ ಸಂಬಂಧಿಸಿಂತೆ ಕೌಕ್ರಾಡಿ ಗ್ರಾಮದ ಮೂಡಬೈಲು ಬರಮೇಲು ಮನೆ ನಿವಾಸಿ ವಿನಯ (25) ಎಂಬ ಆರೋಪಿಯನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದು, ಆತನಿಂದ ಕಳವುಗೈಯಲಾದ ಬೈಕನ್ನು ಪೋಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಬೆಳ್ತಂಗಡಿ ತಾಲೂಕಿನ ಕರಾಯ ಗ್ರಾಮದ ಕಲ್ಲೇರಿ ಪೇಟೆಯಲ್ಲಿ ಸತೀಶ್ ಗೌಡ ಎಂಬವರು ಫೆ.28ರಂದು ಬೈಕ್ ನಿಲ್ಲಿಸಿ ಮಂಗಳೂರಿಗೆ ತೆರಳಿದ್ದು, ಫೆ.29ರಂದು ಸಂಜೆ ಬಂದು ನೋಡಿದಾಗ ಬೈಕ್ ಕಳವಾಗಿತ್ತು. ಈ ಬಗ್ಗೆ ಅವರು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಉಪ್ಪಿನಂಗಡಿ ಪೊಲೀಸರು ಆರೋಪಿಯನ್ನು ಕಳವುಗೈಯಲಾದ ಬೈಕ್ ಸಮೇತ 34ನೇ ನೆಕ್ಕಿಲಾಡಿ ಜಂಕ್ಷನ್‍ನಲ್ಲಿ ವಶಕ್ಕೆ ಪಡೆದಿದ್ದಾರೆ.
Comment here