Thursday, June 20, 2024
Google search engine
Homeಜಸ್ಟ್ ನ್ಯೂಸ್‘ಒಂದೇ ಬೇರು, ಭಾವ ನೂರು’ ಕವನ ಸಂಕಲನ ಬಿಡುಗಡೆ

‘ಒಂದೇ ಬೇರು, ಭಾವ ನೂರು’ ಕವನ ಸಂಕಲನ ಬಿಡುಗಡೆ

Publicstory


ತುರುವೇಕೆರೆ: ಕವಿತೆ ಹೃದಯ ಮತ್ತು ಬುದ್ದಿಪೂರ್ವಕವಾಗಿ ಮಂಥನಗೊಂಡ ಭಾವನಾಧಾರೆಯನ್ನು ಅಕ್ಷರರೂಪಕ್ಕಿಳಿಸುವ ಒಂದು ಅಪೂರ್ವ ಸೃಷ್ಟಿ. ಹಾಗಾಗಿ ಕವಿ ಸಂವೇದನಾಶೀಲನಾಗಿರಬೇಕು ಮತ್ತು ಆಯಾ ಕಾಲಘಟ್ಟದ ಸೂಕ್ಷ್ಮತೆಗಳನ್ನು, ಸಮಕಾಲೀನ ನೋವು, ತಲ್ಲಣಗಳನ್ನು ದಾಖಲಿಸುವ ಎಚ್ಚರದ ಮನಸ್ಥಿತಿಯನ್ನು ಹೊಂದಿರಬೇಕು ಎಂದು ನಿವೃತ್ತ ಇತಿಹಾಸ ಪ್ರಾಧ್ಯಾಪಕ ಹಾಗೂ ಕಸಾಪ ಗೌರವಾಧ್ಯಕ್ಷ ಪ್ರೊ. ಕೆ.ಪುಟ್ಟರಂಗಪ್ಪ ಅಭಿಪ್ರಾಯಪಟ್ಟರು.

ಪಟ್ಟಣದ ಚಿದಂಬರೇಶ್ವರ ಉಚಿತ ಗ್ರಂಥಾಲಯದಲ್ಲಿ ಭಾನುವಾರ ನಡೆದ ಉದಯೋನ್ಮುಖ ಕವಿ ಕೃಷ್ಣಚೈತನ್ಯ ವಿರಚಿತ ‘ಒಂದೇ ಬೇರು, ಭಾವ ನೂರು’ ಕವನ ಸಂಕಲನ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕವಿಯ ಕೃತಿಯ ಕುರಿತು ಮಾತನಾಡಿದ ಬರಹಗಾರ ತುರುವೇಕೆರೆ ಪ್ರಸಾದ್ ಕವಿ ಕೇವಲ ಕಂಡದ್ದಷ್ಟನ್ನೇ ನೋಡಿ ದಾಖಲಿಸುವ ಛಾಯಾಗ್ರಾಹಕನಲ್ಲ, ಅವನು ಕಂಡ ಸಂಗತಿಯಿಂದ ಕಾಣದ್ದನ್ನು ಕಲ್ಪಿಸುವುದರ ಜೊತೆಗೆ ತಾನು ಕಾಣದ್ದನ್ನೂ ತನ್ನೊಳಗೆ ನೋಡುವ ನೋಟ ಮೀರಿದ ದರ್ಶನ ಶಕ್ತಿ ಹೊಂದಿರಬೇಕು. ಕಣ್ಣೀರು ಮತ್ತು ವಿಷಾಧದ ಅನುಭವಗಳು ಕಾವ್ಯದ ಶ್ರೇಷ್ಠತೆಯನ್ನು ಹೆಚ್ಚಿಸುತ್ತವೆ. ಕವಿ ಕೃಷ್ಣಚೈತನ್ಯ ಸಮೃದ್ಧಿಯ ಜೊತೆ ಸಾರ್ಥಕತೆಯನ್ನೂ ತೋರುವ ಪ್ರಯತ್ನ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಮಾರಂಭದಲ್ಲಿ ಕೇಂದ್ರ ಕಸಾಪ ಅಧ್ಯಕ್ಷ ಸ್ಥಾನದ ಸ್ಪರ್ಧಿ ವ.ಚ. ಚನ್ನೇಗೌಡ, ಕಸಾಪ ಅಧ್ಯಕ್ಷ ನಂ.ರಾಜು, ಪ್ರೊ.ಪುಟ್ಟರಂಗಪ್ಪ, ಪ್ರಸಾದ್ ಇವರನ್ನು ಸನ್ಮಾನಿಸಲಾಯಿತು.

ದೇವಮ್ಮ ಶಂಕರಪ್ಪ, ಶರಿತಾ ದೇವರಮನೆ, ವಾಸವಿ ಸತೀಶ್, ಸುನಿತಾ ಮಹೇಶ್ ರೇಖಾಕುಮಾರಸ್ವಾಮಿ, ವಿರೂಪಾಕ್ಷ ಒಂದೇ ಬೇರು, ಭಾವ ನೂರು ಸಂಕಲನದ ಹಲವು ಕವಿತೆಗಳಿಗೆ ಸ್ವರ ಸಂಯೋಜನೆ ಮಾಡಿ ಹಾಡಿದರು. ಚಿದಂಬರೇಶ್ವರ ಗ್ರಂಥಾಲಯದ ಸಂಸ್ಥಾಪಕ ಲಲಿತಾ ರಾಮಚಂದ್ರ ದಂಪತಿ, ಲೇಖಕಿ ಉಷಾಶ್ರೀನಿವಾಸ್, ಶ್ರೀನಿವಾಸ್, ಸುಷ್ಮಾ, ಬೋರಲಿಂಗಯ್ಯ, ಸಂಸ್ಕೃತ ವಿಶ್ವವಿದ್ಯಾಲಯದ ಸಂತೋಷ್ ಹಾನಗಲ್, ರತಲ್ ರಾಜು, ದಿನೇಶ್, ಜಯಕರ್ನಾಟಕ ಜನಪರ ವೇದಿಕೆಯ ಅಧ್ಯಕ್ಷ ವೆಂಕಟೇಶ್, ಕಸಾಪ ಖಜಾಂಚಿ ಎಂ.ಆರ್.ಪರಮೇಶ್ವರಸ್ವಾಮಿ, ಡಿ.ಜೆ.ರಂಗಸ್ವಾಮಿ ಇತರರು ಭಾಗವಹಿಸಿದ್ದರು. ಶಿಕ್ಷಕ ಶೈಲೇಶ್ ಸ್ವಾಗತಿಸಿದರು. ಆನಂದವಾಡೇಕರ್ ವಂದಿಸಿದರು.
ಫೋಟೋ: ತುರುವೇಕೆರೆಯ ಚಿದಂಬರೇಶ್ವರ ಉಚಿತ ಗ್ರಂಥಾಲಯದಲ್ಲಿ ಭಾನುವಾರ ಕವಿ ಕೃಷ್ಣಚೈತನ್ಯ ಅವರ ಒಂದೇ ಬೇರು ಭಾವ ನೂರು ಕೃತಿಯನ್ನು ಲೋಕಾರ್ಪಣೆಗೊಳಿಸಲಾಯಿತು.

ಪ್ರೊ.ಕೆ.ಪುಟ್ಟರಂಗಪ್ಪ, ಬರಹಗಾರ ಪ್ರಸಾದ್, ಕವಿ ಕೃಷ್ಣಚೈತನ್ಯ, ಸಂಸ್ಥಾಪಕ ರಾಮಚಂದ್ರು ಇತರರು ಚಿತ್ರದಲ್ಲಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?