ಜನಮನ

ಓದುಗರ ಮನಮುಟ್ಟುತ್ತಿರುವ ಇ- ಪತ್ರಿಕೆಗಳು

ಲಕ್ಷ್ಮೀಕಾಂತರಾಜು ಎಂಜಿ


ಅದೊಂದು‌ ಕಾಲವಿತ್ತು. ಒಂದು ದಿನ ಪತ್ರಿಕೆ ಪ್ರತಿಯೊಂದನ್ನ ಹತ್ತಾರು ಮಂದಿ ಓದುತ್ತಿದ್ದರು.‌ ಬಸ್ಸಿನಲ್ಲಿ ಪ್ರಯಾಣ ಮಾಡುವಾಗ ಒಬ್ಬ ಪ್ರಯಾಣಿಕ ಕೊಂಡ ಪತ್ರಿಕೆ ಇಡೀ ಬಸ್ಸಿ‌ನ ತುಂಬೆಲ್ಲಾ ಓಡಾಡುತ್ತಿತ್ತು. ಒಂದು ಚಹಾ ಅಂಗಡಿಯವ ತರಿಸುತ್ತಿದ್ದ ಪತ್ರಿಕೆಯೊಂದನ್ನ ಇಡೀ ಸಂಜೆವರೆಗೂ ಅದೆಷ್ಟು ಜನ ಓದುತ್ತಿದ್ದರು.ಅಂದರೆ, ಅಂದು ಪತ್ರಿಕೆ ಕುರಿತ ಆಸಕ್ತಿ ಓದುಗರ ಓದುವಿಕೆಯು ಗಮನ ಸೆಳೆಯುತ್ತಿತ್ತು.

ಆದರೀಗ,ಕಾಲ ಬದಲಾಗಿದೆ. ಎಲ್ಲವೂ ಅನ್ ಲೈನ್ ಮಯ. ಆನ್ ಲೈನ್ ಕ್ಷೇತ್ರ ಪತ್ರಿಕೋದ್ಯಮಕ್ಕೂ ಕಾಲಿಟ್ಟಿದೆ. ಬೆಳಗೆದ್ದು ಪತ್ರಿಕೆ ಹಂಚುವ ಹುಡುಗನ ಕಾಯುತ್ತಿದ್ದ ಮಂದಿ ಈಗ ಬೆಳಗಿನ ಜಾವಕ್ಕೆ ಸಿಗುವ ತಮ್ಮ ಪತ್ರಿಕೆಗಳನ್ನ ಅಂತರ್ಜಾಲದಲ್ಲೇ ಸಿಗುವ ಆನ್ ಲೈನ್ ನಲ್ಲಿಯೇ ಪತ್ರಿಕೆಗಳನ್ನ ಓದಿರುತ್ತಾರೆ.

ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್ ಮತ್ತು ವಾಟ್ಸ್ ಅ್ಯಪ್ ಗಳು ಬಂದ ಮೇಲಂತೂ ಸುದ್ದಿಯ ಪ್ರಸಾರದ ವೇಗವೇ ಬದಲಾಗಿದೆ. ಸುದ್ದಿಗಳು ಅತ್ಯಂತ ವೇಗದಲ್ಲಿ ಹರಡುವುದು ಸಾಮಾಜಿಕ ಜಾಲತಾಣಗಳಲ್ಲಿಯೇ . ಇಂದು ವಾಟ್ಸ್ ಅ್ಯಪ್ ಮತ್ತು ಫೇಸ್ ಬುಕ್ ಗಳಲ್ಲಿ ಬಂದ ಸುದ್ದಿಗಳು ನಾಳಿನ ಪತ್ರಿಕೆಯಲ್ಲಿದ್ದು ಅವೆಲ್ಲಾ ತಂಗಳು ಸುದ್ದಿಗಳಾಗಿ ಜನಾಕರ್ಷಣೆಯೇ ಹೊರಟು ಹೋಗಿದೆ

ಎಲ್ಲ ಪತ್ರಿಕೆಯವರೂ ಫೇಸ್ ಬುಕ್ನಲ್ಲಿ ಅಧಿಕೃತ ನ್ಯೂಸ್ ಪೇಜ್ ಹೊಂದಿದ್ದು ಅವರುಗಳೂ ಕೂಡ ತಾಜಾ ಸುದ್ದಿಯನ್ನೆ ಅಪ್ಲೋಡ್ ಮಾಡಿ ಅದೇ ಸುದ್ದಿ ನಾಳಿನ ಪತ್ರಿಕೆಯಲ್ಲಿ ಪ್ರಕಟವಾಗುತ್ತಿವೆ‌.

ಆನ್ ಲೈನ್ ನ್ಯೂಸ್ ಪೇಜ್ ಗಳ ಕಾಲ ಶುರುವಾದಾಗಿನಿಂದ ಸುದ್ದಿ ಪತ್ರಿಕೆಯ ಸ್ವರೂಪವೇ ಬದಲಾಗಿದೆ.

ಆನ್ ಲೈನ್ ಪತ್ರಿಕೆಯಿಂದ ಅನುಕೂಲವೇನು?

ಇಂದು ಕೆಲ ಹಳ್ಳಿಗಳು ನ್ಯೂಸ್ ಪೇಪರ್ ಗಳನ್ನ ಕಂಡಿಲ್ಲ. ಕಾರಣ,ರಸ್ತೆ ಸಂಪರ್ಕ ಹಾಗೂ ಸಾರಿಗೆ ವ್ಯವಸ್ಥೆ ಇಲ್ಲದಿರುವುದು. ಆದರೆ,ಆನ್ ಲೈನ್ ಪತ್ರಿಕೆಗಳಿಂದ ಕುಗ್ರಾಮಗಳಲ್ಲೂ ಮೊಬೈಲ್ ಮೂಲಕ ಎಲ್ಲ ಪತ್ರಿಕೆ ಓದಬಹುದು. ಪತ್ರಿಕೆಗಳು ಓದುಗರನ್ನ ತಲುಪುವುದು ಸುಲಭ.

ಹಾಗೆ ನೋಡಿದರೆ ಸುದ್ದಿ ಪತ್ರಿಕೆಗಳನ್ನ ಪ್ರಕಟಿಸುವ ವೆಚ್ಚಕ್ಕಿಂತ ಮಾರಾಟ ದರ ಕಡಿಮೆ ಇದ್ದು ನಷ್ಟವೇ ಹೆಚ್ಚು. ವೆಬ್ ಸೈಟ್,ಆನ್ ಲೈನ್ ಪತ್ರಿಕೆಗಳಲ್ಲಿ ಈ ಸಮಸ್ಯೆ ಬರದು.

ಕೃತಿ,ಕಾದಂಬರಿಗಳನ್ನೇ ಓದುಗರು ಇಂದು ಪಿಡಿಎಫ್ ಮೂಲಕ ಮೊಬೈಲ್ ಹಾಗೂ ಕಂಪ್ಯೂಟರ್ ಮೂಲಕ ಓದುತ್ತಿರುವಾಗ ಕಾಗದದ ಪತ್ರಿಕೆಗಳನ್ನು ಇನ್ನೆಲ್ಲಿ ಓದಿಯಾರು?

ಇವೆಲ್ಲಾ ಬೆಳವಣಿಗೆ ಅರಿತ ಪತ್ರಿಕೆಗಳೂ ಸಹ ತಮ್ಮ ಎಲ್ಲಾ ಆವೃತ್ತಿಗಳನ್ನ ಆನ್ ಲೈನ್ ಮೂಲಕ ಓದಲು ಇದೀಗ ಉಚಿತವಾಗಿ ನೀಡಿದ್ದು ಮುಂದಿನ ದಿನಗಳಲ್ಲಿ ಚಂದಾದಾರರಾಗಿ ಓದಬೇಕಿದ್ದು ಈಗಾಗಲೇ ಸಾಂಕೇತಿಕವಾಗಿ ಕಾಣ ಸಿಗುವ ಸುದ್ದಿ ಪತ್ರಿಕೆಗಳೆಲ್ಲವೂ ಸಂಪೂರ್ಣವಾಗಿ ಆನ್ ಲೈನ್ ನಲ್ಲಿಯೇ ಸಿಗಲಿದ್ದು ಕಾಗದದ ಪತ್ರಿಕೆಗಳು ಮುಂದಿನ ದಿನಗಳಲ್ಲಿ ಕಾಣೆಯಾಗುವುದರಲ್ಲಿ ಅನುಮಾನವಿಲ್ಲ.

Comment here