ಡಾ.ರಜನಿ
ಏನು ಮಾಡಿದೆ ಎಂದು
ನುಸುಳಿ ಹೋಗುತ್ತಿರುವೆ…
ಪ್ರೀತಿಸಿ ಬಸವಳಿದೆಯಾ?
ನನಗೆ ಗೊತ್ತು
ವಿರಮಿಸಿ,
ರಾತ್ರಿ ಸೊಬಗ ಹೊತ್ತು …
ಪ್ರತಿ ದಿನ ಹೊಸ ರೂಪ
ತಾಳಿ ಬರುವೆ
ನನ್ನ ರಮಿಸಲು ….
ಬಾಲ ಚಂದಿರನಿಂದ
ಪೂರ್ಣ ಚಂದಿರನಾಗಿ…
ಸದಾ ಉರುಟಾಗಿ
ಹಿರಿತನದ
ಉರಿ ಬಿಸಿಲು ಏನು ಚೆನ್ನ ಹೇಳು..
ಅದಕ್ಕೆಂದೇ ನಾನು ಬೆಳಗ್ಗೆ
ಕಾದು ಕಾದು ….
ರಾತ್ರಿ ಬರಲು
ಹೇಳಿದ್ದು
ಗೊತ್ತಾಗಿ ಈಗಲೇ
ಕೆಂಪಾಗಿ….
ಉ….ಸರಿ
ಹೋಗಿ ಬಾ
ತಣ್ಣಗೆ
ಬೆಳದಿಂಗಳಾಗಿ
ರಜನಿ