Saturday, July 20, 2024
Google search engine
Homeಜನಮನಇ‌ನ್ಮುಂದೆ ಎಲ್ಲರಿಗೂ 12 ಗಂಟೆ ಕೆಲಸಕ್ಕೆ ತಿದ್ದುಪಡಿ: CITU ಅಧ್ಯಕ್ಷೆ ವರಲಕ್ಷ್ಮೀ ಸಂದರ್ಶನ

ಇ‌ನ್ಮುಂದೆ ಎಲ್ಲರಿಗೂ 12 ಗಂಟೆ ಕೆಲಸಕ್ಕೆ ತಿದ್ದುಪಡಿ: CITU ಅಧ್ಯಕ್ಷೆ ವರಲಕ್ಷ್ಮೀ ಸಂದರ್ಶನ

CITU ಟ್ರೇಡ್ ಯೂನಿಯನ್ ರಾಜ್ಯ ಅಧ್ಯಕ್ಷೆಯಾಗಿರುವ ವರಲಕ್ಷ್ಮಿ ಅವರು ಕರ್ನಾಟಕದಲ್ಲಿ ಅತಿದೊಡ್ಡ ಕಾರ್ಮಿಕ ಸಂಘಟನೆಯ ನೇತೃತ್ವ ವಹಿಸಿರುವ ಮೊದಲ ಮಹಿಳೆ.

ಕೊರೊನಾ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ತರಲು ಮೆಲ್ಲಗೆ ಕಾರ್ಮಿಕ ಕಾನೂನುಗಳಿಗೆ ತಿದ್ದುಪಡಿ ತರಲು ಹೊರಟಿದೆ. ಈಗಾಗಲೇ ಮಧ್ಯಪ್ರದೇಶ, ಉತ್ತರ ಪ್ರದೇಶದಲ್ಲಿ ತಿದ್ದುಪಡಿ ಮಾಡಲಾಗಿದೆ. ಕೆಲವು ಕಾನೂನುಗಳನ್ನು ಮೂರು ವರ್ಷಗಳ ಅವಧಿಗೆ ರದ್ದುಪಡಿಸಲಾಗಿದೆ. ಕಾರ್ಮಿಕರ ಕೆಲಸದ ಅವಧಿಯನ್ನು 12 ಗಂಟೆಗಳ ಕಾಲಕ್ಕೆ ಹೆಚ್ಚಿಸಲಾಗಿದೆ. ರಾಜ್ಯದಲ್ಲೂ ಜಾರಿಯಾಗಲಿವೆ.

ಈ ಹಿನ್ನೆಲೆಯಲ್ಲಿ ವಕೀಲ ಮಹೇಂದ್ರ ಕೃಷ್ಣಮೂರ್ತಿ ಅವರು https://publicstory.in ಗೆ ವರಲಕ್ಷ್ಮೀ ಅವರೊಂದಿಗೆ ನಡೆಸಿರುವ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

ಮಾಲೀಕರಿಗೆ ಲಾಭ, ಕಾರ್ಮಿಕರು ಬೀದಿಗೆ, ನಿರುದ್ಯೋಗ ಸೃಷ್ಟಿ


@ Citu ಸಂಘಟನೆಯಲ್ಲಿ ಎಷ್ಟು ಜನ‌ ಕಾರ್ಮಿಕರು ಸದಸ್ಯರಿದ್ದಾರೆ?

ದೇಶದಲ್ಲಿ ನಮ್ಮ ಸಂಘಟ‌ನೆಯಲ್ಲಿ 60 ಲಕ್ಷಕ್ಕೂ ಅಧಿಕ ಕಾರ್ಮಿಕರು ಸದಸ್ಯರಿದ್ದಾರೆ. ರಾಜ್ಯದಲ್ಲಿ 2 ಲಕ್ಷ ಕಾರ್ಮಿಕರು ನಮ್ಮೊಂದಿಗಿದ್ದಾರೆ.

ಕಾರ್ಮಿಕರು ಎಂದರೆ ಕೈಗಾರಿಕೆಗಳಲ್ಲಿ ದುಡಿಯುವವರು ಮಾತ್ರ ಅಲ್ಲ. ಎಲ್ಲ ರೀತಿಯ ಕಾರ್ಮಿಕರು, ರೈತ ಕೂಲಿ ಕಾರ್ಮಿಕರು, ಕಟ್ಟಡ ಕಾರ್ಮಿಕರು ಸೇರಿದಂತೆ ಎಲ್ಲ ವರ್ಗದವರು ಸೇರುತ್ತಾರೆ ಎಂಬುದನ್ನು ಎಲ್ಲರೂ ಗಮನಿಸಬೇಕು.

@ ಕೊರೊನಾ ಪೂರ್ವದ, ಕೊರೊನಾ ನಂತರದ ಕಾರ್ಮಿಕರ ಸ್ಥಿತಿ ಹೇಗಿದೆ?

ಕೊರೊನಾ ಬರುವುದಕ್ಕೆ ಮುಂಚೆ ಕಾರ್ಮಿಕರು ಸಾಮಾನ್ಯವಾಗಿ ಕೆಲಸಕ್ಕೆ ಹೋಗುತ್ತಿದ್ದರು, ಬರುತ್ತಿದ್ದರು. ಆದರೆ ಕೊರೊನ ನಂತರ ಆದ ಲಾಕ್ ಡೌನ್ ನಿಂದಾಗಿ ಕಾರ್ಮಿಕರು ತುಂಬಾ ತೊಂದರೆಗೆ ಒಳಗಾಗಿದ್ದಾರೆ.

ಕೈಗಾರಿಕೆಗಳಲ್ಲಿ ಮಾರ್ಚ್ ನಾಲ್ಕನೇ ವಾರದಿಂದ ಏಪ್ರಿಲ್ ತಿಂಗಳಲ್ಲಿ ಸಂಬಳವನ್ನೇ ಕೊಟ್ಟಿಲ್ಲ. ಸಂಬಳವನ್ನು ತಡೆಹಿಡಿಯಲಾಗಿದೆ. ಈ ಎಲ್ಲ ಕಾರ್ಮಿಕರಿಗೂ ಸಂಬಳ ಬೇಕು ಇಲ್ಲದಿದ್ದರೆ ಕೋಟ್ಯಂತೆರ ಕಾರ್ಮಿಕರು ಬೀದಿಗೆ ಬೀಳುವುದರಲ್ಲಿ ಯಾವುದೇ ಅನುಮಾನ ಇಲ್ಲ. ಈ ಕಾರ್ಮಿಕರಿಗೆ ಸಂಬಳ ಕೊಡುವಂತೆ ಸಿಐಟಿಯು ಒತ್ತಾಯ ಮಾಡುತ್ತಿದೆ .

@ ಲಾಕ್ ಡೌನ್ ಸಂದರ್ಭದಲ್ಲಿ ಕೆಲಸದಿಂದ ತೆಗೆಯಬಾರದು, ಸಂಬಳ ಕೊಡಬೇಕು ಎಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆಯಲ್ಲ?

ಕೇಂದ್ರ ಸರ್ಕಾರ ಮಾಡಿದ ಈ ಆದೇಶದ ಹಿನ್ಮೆಲೆಯಲ್ಲಿ ರಾಜ್ಯದಲ್ಲೂ ಸುತ್ತೋಲೆ ಹೊರಡಿಸಲಾಗಿತ್ತು. ಆದರೆ ಮಾಲೀಕರ ಒತ್ತಾಯಕ್ಕೆ ಮಣಿದ ಸರ್ಕಾರ ಮೂರೇ ದಿನಗಳಲ್ಲಿ ಈ ಸುತ್ತೋಲೆ ವಾಪಸ್ ಪಡೆಯಿತು. ಹೀಗಾಗಿ ಈಗ ಈ ಆದೇಶ ಜಾರಿಯಲ್ಲಿಲ್ಲ. ಹೀಗಾಗಿ ಮಾಲೀಕರು ಸಂಬಳ ಕೊಡದೆ ಸತಾಯಿಸುತ್ತಿದ್ದಾರೆ.

@ ಕಾರ್ಮಿಕ ಸಚಿವರಿಗೆ ಇದೆಲ್ಲ ಗೊತ್ತಾಗುವುದಿಲ್ಲವೇ?.
ಸಾಕಷ್ಟು ವಿಚಾರಗಳಲ್ಲಿ ಕಾರ್ಮಿಕ ಸಚಿವರು ಕಾರ್ಮಿಕರ ಪರವಾಗಿ ನಿಂತಿದ್ದಾರೆ. ಆದರೆ ಅವರ ಮಾತನ್ನು ರಾಜ್ಯ ಸರ್ಕಾರದಲ್ಲಿ ಕೇಳುತ್ತಿಲ್ಲ.

ಕಾರ್ಮಿಕ ಸಂಘಟನೆಗೆಗಳ ಒತ್ತಾಯದ ಮೇರೆಗೆ ಕಾರ್ಮಿಕ‌ಸಚಿವರು ತ್ರಿಪಕ್ಷೀಯ ಸಮಿತಿಯನ್ನು ರಚಿಸಿದರು.
ಈ ಸಮಿತಿಗೆ ಒಂದು ಸಾವಿರ ನೋಂದಾಯಿತ ದೂರುಗಳು ಬಂದಿವೆ. ನೂರಾರು ಜನರು ಕೆಲಸದಿಂದ ತೆಗೆಯಲಾಗಿದೆ ಎಂದು ದೂರು ನೀಡಿದ್ದಾರೆ. ಆದರೆ ಸಮಿತಿ‌ ಸರಿಯಾಗಿ ರಾಜ್ಯ ಸರ್ಕಾರ ಬಿಡುತ್ತಿಲ್ಲ. ಕಾರ್ಮಿಕ‌ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರನ್ನೇ ವರ್ಗ ಮಾಡಿತ್ತಲ್ಲ?

@ ಕಾರ್ಮಿಕ ಕಾಯ್ದೆಗೆ ತರುವ ತಿದ್ದುಪಡಿ ದೇಶದ ಅಭಿವೃದ್ದಿ ಪರವಾಗಿದೆ ಎನ್ನುತ್ತಾರಲ್ಲ?

ಕಾರ್ಮಿಕ ಕಾನೂನುಗಳ ತಿದ್ದುಪಡಿಯಿಂದ ರಾಜ್ಯಕ್ಕೆ ದೇಶಕ್ಕೆ ಲಾಭಕ್ಕಿಂತ ನಷ್ಟವೇ ಹೆಚ್ಚು. ಮಾಲೀಕರ ಪರವಾಗಿ ಸರ್ಕಾರಗಳು ವರ್ತಿಸುತ್ತಿವೆ. ಮಾಲೀಕರಿಗೆ ಲಾಭ ಮಾಡಿಕೊಡಲು ಈಗಿರುವ ಕಾರ್ಮಿಕರ ಎಂಟು ಗಂಟೆಗಳ ಕೆಲಸದ ಅವಧಿಯನ್ನು ಹದಿನೈದು ಗಂಟೆಗಳ ಕಾಲ ವಿಸ್ತರಿಸಲು ರಾಜ್ಯ ಸರ್ಕಾರ ಮುಂದಾಗುತ್ತಿದೆ. ಇದನ್ನು ಕನಿಷ್ಠ ಪಕ್ಷ ಹನ್ನೆರಡು ಗಂಟೆಗಳಾದರೂ ಹೆಚ್ಚಿಸಲು ಮುಂದಾಗಿದೆ.
@ಕಾರ್ಮಿಕರ ಕೆಲಸದ ಅವಧಿ ಹೆಚ್ಚಿಸುವುದರಿಂದ ಆರ್ಥಿಕತೆ ಪುನಶ್ಚೇತನಗೊಳ್ಳಲಿದೆ ಎಂಬ ಮಾತಿದೆಯಲ್ಲ?
ಕಾರ್ಮಿಕರು ಹೆಚ್ಚು ಕೆಲಸ ಮಾಡುವುದರಿಂದ ಇರುವ ಕಾರ್ಮಿಕರನ್ನು ಮಾಲೀಕರು ಕೆಲಸದಿಂದ ತೆಗೆಯಲು ಸಹಾಯವಾಗಲಿದೆ. ಕಡಿಮೆ ಕಾರ್ಮಿಕರಿಂದ ಹೆಚ್ಚು ಉತ್ಪಾದನೆ ಮಾಡಲು ಸಾಧ್ಯವಾಗಲಿದೆ. ಇದರಿಂದ ಇರುವ ಕಾರ್ಮಿಕರಿಗು ಕೆಲಸ ಇಲ್ಲದಂತಾಗಿ ಅವರನ್ನು ಮನೆಗೆ ಕಳುಹಿಸಲಾಗುತ್ತದೆ.

@ ಕಾರ್ಮಿಕರನ್ನು ಕೆಲಸದಿಂದ ತೆಗೆಯಲು ಅಷ್ಟು ಸುಲಭವೇ?

ಈಗ ತರಲು ಹೊತಟಿರುವ ತಿದ್ದುಪಡಿ ಪ್ರಕಾರ 300 ಕ್ಕಿಂತ ಕಡಿಮೆ ಕಾರ್ಮಿಕರು ಇರುವ ಕೈಗಾರಿಕೆಗಳನ್ನು ಯಾವ ಕ್ಷಣದಲ್ಲಿ ಬೇಕಾದರೂ ಮುಚ್ಚಬಹುದು, ತೆಗೆಯಬಹುದು. ಯಾವ ಕಾರ್ಮಿಕನನ್ನು ಯಾವಾಗ ಬೇಕಾದರೂ ಕ್ಷಣ ಮಾತ್ರದಲ್ಲಿ ತೆಗೆಯುವ ಅಧಿಕಾರವನ್ನು ಮಾಲೀಕರಿಗೆ ನೀಡಲಾಗುತ್ತಿದೆ. ಕೆಲಸ ಕಳೆದುಕೊಂಡ ಕಾರ್ಮಿಕರು ನ್ಯಾಯಾಲಯದಲ್ಲಿ ಪ್ರಶ್ನೆ ಮಾಡುವ ಅವರ ಮೂಲಭೂತ ಹಕ್ಕನ್ನು ಕಿತ್ತಕೊಳ್ಳಲಾಗುತ್ತಿದೆ.

ಈ ಹಿಂದೆ ಕೈಗಾರಿಕೆಗಳನ್ನು ಮುಚ್ಚಬೇಕಾದರೆ ಸರ್ಕಾರಕ್ಕೆ ಕಾರಣ ತಿಳಿಸಬೇಕಿತ್ತು. ಲಾಭ, ನಷ್ಟಗಳ ವಿವರ‌ ನೀಡಬೇಕಿತ್ತು. ಕಾರ್ಮಿಕರ ಬಾಕಿಯನ್ನು ಪಾವತಿಸಬೇಕಾಗಿತ್ತು.

@ ನಿಜವಾಗಲೂ ಸಮಸ್ಯೆ ಯಾರಿಗೆ ಆಗಲಿದೆ?

ತಕ್ಷಣಕ್ಕೆ ಸರ್ಕಾರಿ, ಸೇವಾ ರಂಗದಲ್ಲಿ ಕೆಲಸ ಮಾಡುವವರಿಗೆ ಇದರ ಪರಿಣಾಗ ಆಗದಿರಬಹುದು. ಆದರೆ ಮುಂದಿನ‌ ದಿ‌ನಗಳಲ್ಲಿ ಅವರಿಗೂ ಇದು ವಿಸ್ತರಣೆಯಾಗಲಿದೆ.

ಸಣ್ಣ, ಮಧ್ಯಮ ಕೈಗಾರಿಕೆಗಳ ಕಾರ್ಮಿಕರು ದೊಡ್ಡ ಮಟ್ಟದಲ್ಲಿ ಕೆಲಸ ಕಳೆದುಕೊಳ್ಳುತ್ತಾರೆ. ಇನ್ನೊಂದೆಡೆ ಇರುವ ಕಾರ್ಮಿಕರಿಗೆ ಹೆಚ್ಚು ಅವಧಿ ದುಡಿಯುವುದರಿಂದ ಹೊಸ ಉದ್ಯೋಗಗಳು ಸೃಷ್ಟಿಯಾಗುವುದಿಲ್ಲ.

@ನೀವು ಇಟ್ಟಿರುವ ಸಲಹೆಗಳೇನು?

ಕಾರ್ಮಿಕರ ಕಾನೂನುಗಳನ್ನು ಮತ್ತಷ್ಟು ಗಟ್ಟಿಗೊಳಿಸಬೇಕು. ಯಾರನ್ನು ಕೆಲಸದಿಂದ ತೆಗೆಯದಂತೆ ನೋಡಿಕೊಳ್ಳಬೇಕು.

ಈಗಿರುವ ಕೆಲಸದ ಅವಧಿಯನ್ನು 8 ಗಂಟೆಯಿಂದ ಕಡಿಮೆ ಮಾಡಿದರೆ ಹೆಚ್ಚು ಕಾರ್ಮಿಕರಿಗೆ ಕೆಲಸ ಸಿಗಲಿದೆ. ಇಲ್ಲ ಹೀಗಿರುವ ಅವಧಿಯನ್ನೇ ಮುಂದುವರೆಸಬೇಕು. ಹೆಚ್ಚು ಉದ್ಯೋಗ ಸೃಷ್ಟಿ ಕಡೆಗೆ ಗಮನ ನೀಡಬೇಕು.

ಕಾರ್ಮಿಕರ ಕೊಳ್ಳುವ ಶಕ್ತಿ ಕಡಿಮೆಯಾದಷ್ಟು ದೇಶದ ಆರ್ಥಿಕ ಸ್ಥಿತಿ ಹದಗೆಡಲಿದೆ. ಇದು ಗೊತ್ತಿದ್ದು, ಮಾಲೀಕರಿಗೆ ಅನುಕೂಲ ಮಾಡುವ ಒಂದೇ ಕಾರಣಕ್ಕಾಗಿ ಸರ್ಕಾರ ಈ ಕೆಲಸ ಮಾಡಲು ಹೊರಟಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?