ಜಸ್ಟ್ ನ್ಯೂಸ್

ಕಾಸರಗೋಡಿನಲ್ಲಿ ಶುಶ್ರೂಷೆ ಫಲ: ಕೋವಿಡ್-19 ಬಾಧಿತರಾದ ಮೂವರು ಗುಣಮುಖ

Publicstory. in


ಕಾಸರಗೋಡು; ಕೊರೋನಾ ಸೋಂಕಿನ ಕಪ್ಪು ಚುಕ್ಕೆಯಲ್ಲಿ ಗುರುತಿಸಿಕೊಂಡಿದ್ದ ಜಿಲ್ಲೆಯಲ್ಲಿ ಮೂವರು ಕೋವಿಡ್ 19 ಬಾಧಿತ ವ್ಯಕ್ತಿಗಳು ಸರಕಾರಿ ಆಸ್ಪತ್ರೆಯ ಚಿಕಿತ್ಸೆಯಿಂದ ಗುಣಮುಖರಾಗಿ ಶನಿವಾರ ಮನೆ ಸೇರಿದ್ದಾರೆ.

ಇದರಿಂದಾಗಿ ವೈದ್ಯ, ದಾದಿಯರ ಅಹೋರಾತ್ರಿ ದುಡಿತದ ಪರಿಶ್ರಮ, ಸರಕಾರದ, ಸ್ಥಳೀಯಾಡಳಿದ, ಪೋಲೀಸರ ಕಾನೂನು ಪಾಲನೆ, ಮನೆಯಲ್ಲಿ ಕುಳಿತವರ ಪ್ರಾಥನೆಗಳ ಪರಿಣಾಮದ ಫಲ ನೀಡಲಾರಂಭಿಸಿದೆ.

ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ 56 ವರ್ಷ ಪ್ರಾಯದ, 31 ವರ್ಷದ, 27 ವರ್ಷದ ಮೂವರು ಪುರುಷರು ಈಗ ಪೂರ್ಣ ಗುಣಮುಖರಾಗಿ ಮನೆಗೆ ತೆರಳಿದ್ದಾರೆ.

ಕೊರೊನಾ ತಂದ ದುಷ್ಪರಿನಾಮದ ಭೀಕರತೆಯ ನಡುವೆ ಈ ಸಕಾರಾತ್ಮಕ ಬೆಳವಣಿಗೆ ತಂದ ಸಂತಸ ಎಷ್ಟಿದೆ ಎಂಬುದನ್ನು ಗಮನಿಸಬೇಕಿದ್ದರೆ ಒಮ್ಮೆ ಕಾಸರಗೋಡು ಜನರಲ್ ಸರಕಾರಿ ಆಸ್ಪತ್ರೆಗೆ ತೆರಳಬೇಕು. ಇಲ್ಲಿನ ಪ್ರತಿಯೊಬ್ಬ ಸಿಬ್ಬಂದಿಯ ಮುಖದಲ್ಲಿ ಈಗ ಸಮಾಧಾನದ ಸಂತಸ ಕಂಡುಬರುತ್ತಿದೆ.

ರಾಜ್ಯ ಸರಕಾರ ಮತ್ತು ಆರೋಗ್ಯ ಇಲಾಖೆಯ ಸತತ ಯತ್ನದ ಮತ್ತು ಆಸ್ಪತ್ರೆಯ ಸಿಬ್ಬಂದಿಯ ಆಹೋರಾತ್ರೆಯ ದುಡಿಮೆ ಫಲ ನೀಡಿದೆ. ಕಳೆದ ಎರಡು ವಾರಗಳಿಂದ ಕೊರೊನಾ ಪ್ರತಿರೋಧ ರೂಪದಲ್ಲಿ ಇಲ್ಲಿ ನಡೆದು ಬರುತ್ತಿರುವ ಹೋರಾಟದ ಫಲವಿದು.

ಆಸ್ಪತ್ರೆಯ ಶುಚೀಕರಣ ಸಿಬ್ಬಂದಿಯಿಂದ ತೊಡಗಿ ವೈದ್ಯರವರೆಗೆ ಪ್ರತಿಯೊಬ್ಬರೂ ಇಲ್ಲಿ ಏಕಮನಸ್ಸಿನಿಂದ ದುಡಿಯುತ್ತಾರೆ. ಆಸ್ಪತ್ರೆಯ ಕನ್ಸೆಂಟ್ ಗಳಾದ ಡಾ.ಕುಂಜಿ ರಾಮನ್, ಡಾ. ಕೃಷ್ಣ ನಾಯಕ್, ಡಾ. ಜನಾರ್ಧನ ನಾಯಕ್ ನೇತೃತ್ವ ವಹಿಸುವ ಮೆಡಿಕಲ್ ತಂಡ ಚಿಕಿತ್ಸೆಗೆ ಇಲ್ಲಿ ನೇತೃತ್ವ ವಹಿಸುತ್ತಿದೆ.

ಜಗತ್ತಿನ ಹಲವು ದೇಶಗಳಲ್ಲಿ ತಲೆದೋರಿದ ಕೋವಿಡ್19 ತನ್ನ ಎರಡನೇ ಹಂತದ ಪ್ರಭಾವ ತೋರುತ್ತಿರುವ ವೇಳೆ ಮಾರ್ಚ್ ತಿಂಗಳ ಮಧ್ಯ ಭಾಗದಲ್ಲಿ ಕಾಸರಗೋಡು ಜಿಲ್ಲೆಗೂ ಪ್ರವೇಶ ಮಾಡಿತ್ತು.

ಪ್ರತಿದಿನ ರೋಗಬಾಧಿತರ ಸಂಖ್ಯೆ ಹೆಚ್ಚಳಗೊಳ್ಳುತ್ತಿದ್ದರೂ, ಕೋವಿಡ್19 ರ ಪ್ರತಿರೋಧ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ನಡೆಸಿದ ಸಮರ್ಪಣ ಭಾವದ ದುಡಿಮೆ ಫಲ ನೀಡುತ್ತಿದೆ ಎಂದು ಕೇರಳ ಆರೋಗ್ಯ ಸಚಿವೆ ಕೆ.ಕೆ ಶೈಲಜಾ ಟೀಚರ್ ಅಭಿನಂದಿಸಿದ್ದಾರೆ.

ಜಿಲ್ಲಾ ಮಟ್ಟದ ಜಿಲ್ಲಾಧಿಕಾರಿ ಡಾ. ಡಿ. ಸಜಿತ್ ಬಾಬು ಅವರ ನೇತೃತ್ವದಲ್ಲಿ ಪ್ರತಿರೋಧ ಚಟುವಟಿಕೆಗಳು ನಡೆಯುತ್ತಿವೆ. ಜಿಲ್ಲಾ ವ್ಯದ್ಯಾಧಿಕಾರಿ ಡಾ. ಎ.ವಿ ರಾಮದಾಸ್, ಜಿಲ್ಲಾ ಸರ್ವೇಲೆನ್ಸ್ ಅಧಿಕಾರಿ ಡಾ. ಎ.ಟಿ ಮನೋಜ್, ಕಾಸರಗೋಡು ಜನರಲ್ ಆಸ್ಪತ್ರೆಯ ವರಿಷ್ಠಾದಿಕಾರಿ ಡಾ. ರಾಜಾರಾಮ್ ಮೊದಲಾದವರು ಕೋವಿಡ್ 19 ಪ್ರತಿರೋಧ ಚಟುವಟಿಕೆಗಳಲ್ಲಿ ಮೊದಲ ಸಾಲಿನಲ್ಲಿದ್ದರು.

Comment here