Publicstory. in
ಮಡಿಕೇರಿ: ಪೊನ್ನಂಪೇಟೆ – ಗೋಣಿಕೊಪ್ಪಲು ಭಾಗದಲ್ಲಿ ಅನೇಕ ತಿಂಗಳಿಂದ ಓಡಾಡುತ್ತ ಜನರಲ್ಲಿ ನಡುಕ ಹುಟ್ಟೊಸಿದ ಹುಲಿಯನ್ನು ಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳ್ಳೂರಿನ ಕಾಫಿ ತೋಟದಲ್ಲಿ ಮಂಗಳವಾರ ತಡರಾತ್ರಿ ಕೊನೆಗೂ ಸೆರೆ ಹಿಡಿಯಲಾಯಿತು.
ವಿರಾಜಪೇಟೆ ತಾಲ್ಲೂಕಿನ ಕುಮಟೂರು, ನಡಿಕೇರಿ, ತೂಚಮಕೇರಿ, ಟಿ.ಶೆಟ್ಟಿಗೇರಿ ಭಾಗಗಳಲ್ಲಿ ಹುಲಿ ಸೆರೆಗೆ ಅನೇಕ ಬೋನ್ ಗಳನ್ನು ಅರಣ್ಯ ಇಲಾಖೆ ಇಟ್ಟಿತ್ತು.
ಸಾಕಾನೆಗಳ ಸಹಾಯದಿಂದಲೂ ಹುಲಿ ಸೆರೆಗೆ ನಡೆಸಿದ ಕಾರ್ಯಾಚರಣೆಯೂ ಫಲಪ್ರದ ಆಗಿರಲಿಲ್ಲ.
ಕೊನೆಗೂ ಬೋನಿಗೆ ಹುಲಿ ಬಿತ್ತು. ಇದರಿಂದಾಗಿ ಈ ಭಾಗದ ಜನರಲ್ಲಿ ನೆಮ್ಮದಿಯ ಸಂಭ್ರಮ ಕಾಣಿಸಿತು.