ಲೇಖಕ, ಸಾಹಿತಿ, ಹೋರಾಟಗಾರ ಸಮಾಜವಾದದ ಕನಸುಗಾರ ಡಿ.ಎಸ್.ನಾಗಭೂಷಣ್ ಅವರು ಬುಧವಾರ ರಾತ್ರಿ ನಿಧನರಾದರು. ಅವರ ಕುರಿತು ಮೈತ್ರಿ ನ್ಯೂಸ್ ಸಂಪಾದಕರಾದ ಹೆಚ್.ವಿ.ವೆಂಕಟಾಚಲಯ್ಯ ಅವರ ನುಡಿನಮನದ ಲೇಖನ.
ದೆಹಲಿ ಆಕಾಶವಾಣಿಯಲ್ಲಿ ಆಗಾಗ ವಾರ್ತೆ ಗಳನ್ನು ಓದುತ್ತಿರುವವರು ಡಿ.ಎಸ್.ನಾಗಭೂಷಣ ಎಂಬ ಧ್ವನಿ ಕೇಳಿದ್ದೆ, 90 ರ ದಶಕದಲ್ಲಿ ಸಮಾಜವಾದಿ ಅಡಿ ಸಮತಾ ಸಂಘಟನೆ ಕಟ್ಡಿದಾಗ ಇವರನ್ನು ಕಾಣುವ ಅವಕಾಶ ಸಿಕ್ಕಿ ಗೆಳೆತನವಾಯಿತು.
ಇವರು ನಿವೃತ್ತಿ ನಂತರ ಹೊಸ ಮನುಷ್ಯ ಪತ್ರಿಕೆ ಹೊರ ತರುತ್ತಿದ್ದರು, ಅದರಲ್ಲಿ ಗಾಂಧಿ, ಅಂಬೇಡ್ಕರ್ ಅವರ ವಿಚಾರಗಳು ಹೆಚ್ಚು ಇದ್ದು ಸಮಾಜ ಗಾಂಧಿ ಹಾದಿಯಲ್ಲಿ ನಡೆಯಬೇಕೆಂದು ಬಯಸಿದವರು.
ಈ ಹಿನ್ನಲೆಯಲ್ಲಿಯೆ ಅವರು ಇತ್ತೀಚೆಗೆ ಗಾಂಧಿ ಕಥನ ಪುಸ್ತಕ ವನ್ನು ಸರಳವಾಗಿ, ವಿಸ್ತಾರವಾಗಿ ತಂದಿದ್ದರು, ಇತ್ತೀಚೆಗೆ ಅವರು ಸಮಾಜವಾದಿ ಗಳು, ಪ್ರಗತಿವಾದಿಗಳಿಗೆ ಚುರುಕು ಮುಟ್ಡುವಂತೆ ಜಾಡಿಸುತ್ತಿದ್ದರು,
ನೀವೆಲ್ಲ ಬಂಡವಾಳದ ಹಿಂದೆ ಬಿದ್ದು ಸಮಾಜವಾದ ಮರೆತ್ತಿದ್ದೀರಿ, ನಿಮ್ಮಿಂದ ಏನು ಸಾಧ್ಯವಿಲ್ಲ ಎಂದು ಕಟೋರತೆಯಿಂದ ಹೇಳಿದ್ದರು. ಒಂದೆರಡು ವರ್ಷಗಳ ಹಿಂದೆ ತಮ್ಮ ಹುಟ್ಟೂರಾದ ಡಾಬಸ್ ಪೇಟೆಗೆ ಭೇಟಿ ನೀಡಿ ಅವರ ಬಾಲ್ಯವನ್ನು ಮೆಲುಕು ಹಾಕಿದ್ದರು.
ಅವರು ಗಾಂಧಿಯನ್ನು ಆಳವಾಗಿ ಅಧ್ಯಯನ ಮಾಡಿದ್ದರು, ಸಮಾಜವಾದಿಗಳಿಗೆ ಎಚ್ಚರಿಸುತ್ತಿದ್ದ ಡಿ.ಎಸ್.ನಾಗಭೂಸಣ್ ಇನ್ನಿಲ್ಲ ಎಂಬುದು ನಮ್ಮಂತವರಿಗೆ ಬಹು ದೊಡ್ಡ ನಷ್ಟ.
ಅವರಿಗೆ ಸಂತಾಪ ಸೂಚಿಸಲು ಸಾಧ್ಯವಾಗುತ್ತಿಲ್ಲ, ಯಾಕೆಂದರೆ ತೇಜಸ್ವಿ ನಂತರ ಕೆಲ ವಿಚಾರಗಳನ್ನು ಯಾವುದೇ ಮುಲಾಜಿಲ್ಲದೆ ಹೇಳುತ್ತಿದ್ದರು. ನಮ್ಮ ನಡುವೆ ಸದಾ ಎಚ್ಚರಿಕೆ, ಸರಿ ತಪ್ಪುಗಳನ್ನು ಕಠೋರವಾಗಿ ಹೇಳುತ್ತಿದ್ದ ಕಠೋರವಾದಿ ಡಿ.ಎಸ್.ನಾಗಭೂಷಣ ರವರ ಆತ್ಮಕ್ಕೆ ಶಾಂತಿ ಸಿಗಲಿ.