Thursday, October 3, 2024
Google search engine
Homeಜಸ್ಟ್ ನ್ಯೂಸ್ಗ್ರಾಮೀಣ ಭಾಗದ ಜನರ ಆರ್ಥಿಕ ಸದೃಢತೆಗೆ ಕೆನರಾ ಬ್ಯಾಂಕ್ ಸಹಕಾರಿ

ಗ್ರಾಮೀಣ ಭಾಗದ ಜನರ ಆರ್ಥಿಕ ಸದೃಢತೆಗೆ ಕೆನರಾ ಬ್ಯಾಂಕ್ ಸಹಕಾರಿ

Publicstory


ತುಮಕೂರು: ಸಾಲ ಸೌಲಭ್ಯ ಒದಗಿಸುವ ಮುಖೇನ ಗ್ರಾಮೀಣ ಭಾಗದ ಜನರ ಆರ್ಥಿಕ ಸದೃಢತೆಗೆ ಕೆನರಾ ಬ್ಯಾಂಕ್ ಸಹಕಾರಿಯಾಗಿದೆ ಎಂದು ತುಮಕೂರು ಕೆನರಾ ಬ್ಯಾಂಕ್ ಎಜಿಎಂ ರವಿ ತಿಳಿಸಿದರು.

ತುಮಕೂರು ಗ್ರಾಮಾಂತರದ ಅರೆಯೂರು ಗ್ರಾಮದಲ್ಲಿ ಅರೆಯೂರು ಶಾಖೆಯಿಂದ ಆಯೋಜಿಸಿದ್ದ ಕೃಷಿ ಸಾಲ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರೈತರಿಗೆ ನೆರವಾಗುವಂತೆ ಕೆನರಾ ಬ್ಯಾಂಕ್ ನ ಅರ್ಧ ಶಾಖೆಗಳನ್ನು ಹಳ್ಳಿಗಳಲ್ಲಿ ಸ್ಥಾಪಿಸಲಾಗಿದೆ. ಹಾಗಾಗಿ ರೈತರು ಬ್ಯಾಂಕ್ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ಲಾಭದಾಯಕ ಕೃಷಿ ಮಾಡಬಹುದಾಗಿದೆ. ಬೆಳೆ ಸಾಲ, ಹೈನುಗಾರಿಕೆ ಸೇರಿದಂತೆ ಎಲ್ಲಾ ರೀತಿಯ ಸಾಲ ಸೌಲಭ್ಯ ಗಳು ನೀಡಲಾಗುತ್ತಿದೆ. ತುಮಕೂರು ಜಿಲ್ಲೆಯಲ್ಲಿ 27 ಶಾಖೆಗಳನ್ನು ಹಳ್ಳಿಯಲ್ಲಿ ಸ್ಥಾಪಿಸಲಾಗಿದೆ. ರೈತರಿಗೆ ನೆರವಾಗುವಂತೆ ಕೃಷಿ ಸಾಲ ವಿತರಿಸಲಾಗುತ್ತಿದೆ. ಪಡೆದ ಸಾಲವನ್ನು ಸಕಾಲಕ್ಕೆ ಮರುಪಾವತಿ ಮಾಡುವ ಮೂಲಕ ನಿಮ್ಮ ಬೆಳವಣಿಗೆಯ ಜೊತೆ ಬ್ಯಾಂಕ್ ಬೆಳವಣಿಗೆಗೂ ಸಹಕರಿಸಬೇಕು ಎಂದರು.

ಗ್ರಾಹಕ ಸ್ನೇಹಿ ಬ್ಯಾಂಕ್ ಆಗಿ ಗುರುತಿಸಿಕೊಂಡಿರುವ ಕೆನರಾ ಬ್ಯಾಂಕ್ ದೇಶದಲ್ಲೇ ಮೂರನೇ ಸ್ಥಾನದಲ್ಲಿದೆ.1906ರಲ್ಲಿ ಆರಂಭವಾಗಿ ಪ್ರಸ್ತುತ ಗ್ರಾಹಕರ ವಿಶ್ವಾಸದಿಂದ ಮುನ್ನೆಡಿಯುತ್ತಿದೆ. ತುಮಕೂರು ಜಿಲ್ಲೆಯಲ್ಲಿ 6800 ಕೋಟಿ ವ್ಯಾವಹಾರ ಇದೆ,3500ಕೋಟಿ ಸಾಲ ನೀಡಲಾಗಿದೆ. ಕೆನರಾ ಬ್ಯಾಂಕ್ ಸಂಸ್ಥಾಪಕರು ಎತ್ತಿನ ಗಾಡಿಯಲ್ಲಿ ಹಳ್ಳಿಗಳಲ್ಲಿ ಮನೆ ಮನೆಗೆ ಹೋಗಿ ಬ್ಯಾಂಕ್ ಖಾತೆ ತೆರೆಸಿ ಬ್ಯಾಂಕ್ ಆರಂಭಿಸಿದ್ದರು ಎಂದು ಸ್ಮರಿಸಿದರು.

ಕೆಎಂಎಫ್ ನಿರ್ದೇಶಕ ರೇಣುಕಾ ಪ್ರಸಾದ್ ಮಾತನಾಡಿ, ಕೆನರಾ ಬ್ಯಾಂಕ್ ಗ್ರಾಮೀಣ ಭಾಗದ ಜನರ ಜೀವನಾಡಿಯಾಗಿದೆ. ಹತ್ತಿರದಲ್ಲೇ ಸೇವೆ ನೀಡುವ ಗ್ರಾಹಕರ ಹೆಚ್ಚು ಮೆಚ್ಚಿನ ಬ್ಯಾಂಕ್. ನಾವು ಪಡೆದ ಸಾಲನ್ನು ಮರುಪಾವತಿ ಮಾಡಿದರೆ ಇನ್ನು ಹೆಚ್ಚಿನ ಜನರಿಗೆ ಸಾಲ ಸೌಲಭ್ಯ ದೊರೆಯುತ್ತದೆ. ಕೆನರಾ ಬ್ಯಾಂಕ್ ಕೃಷಿ ಸಾಲ ರೈತರ ಆರ್ಥಿಕ ಬಲವರ್ಧನೆಗೆ ನೆರವಾಗಿದೆ ಎಂದರು.

ಅರೆಯೂರು ಕೆನಾರ ಬ್ಯಾಂಕ್ ವ್ಯವಸ್ಥಾಪಕ ದೀಪಕ್ ಆರ್ ಮಾತನಾಡಿ ಕೈಸಾಲ ಮಾಡುವುದನ್ನು ಬೀಡಿ, ಬ್ಯಾಂಕ್ ನಲ್ಲಿ ಸಾಲ ಪಡೆದು ಸಕಾಲಕ್ಕೆ ಮರುಪಾವತಿ ಮಾಡಿ. ಸಾಲ ತೆಗೆದುಕೊಂಡು ಸರಿಯಾಗಿ ಕಟ್ಟಿ ಆರ್ಥಿಕವಾಗಿ ಸ್ವಾವಲಂಬಿಗಳಾಗಿ. ರೈತರಿಗೆ ಅನುಕೂಲವಾಗವಂತೆ ಕೃಷಿ ಸಾಲ ನೀಡಲಾಗುತ್ತಿದೆ. ಸಾಲ ಪಡೆದು ಕಟ್ಟದೆ ಇರುವವರಿಗೂ ಮರುಪಾವತಿ ಮಾಡುವಂತೆ ಮಾಹಿತಿ ನೀಡಿ. ಸಾಲ ಮರುಪಾವತಿಯಿಂದ ಆಗುವ ಪ್ರಯೋಜನ ಕುರಿತು ಮಾಹಿತಿ ನೀಡಿ ಎಂದರು.

ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ಸಿದ್ದಗಂಗಮ್ಮ, ಕಟ್ಟೆಗೋಲ್ಲಹಳ್ಳಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷೆ ಶ್ರೀರಂಗಮ್ಮ , ಗ್ರಾಪಂ ಸದಸ್ಯರಾದ ಪ್ರಭುದೇವರು,ಕೆ.ಎಂ.ಕಿರಣ್, ಸಿದ್ದಲಿಂಗಮ್ಮ ಇನ್ನಿತರರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?