Publicstory
Chikkanayakanahalli: ತಾಲ್ಲೂಕಿನಲ್ಲಿ ಆಮ್ ಅದ್ಮಿ ಪಕ್ಷಕ್ಕೆ ಜನ ಸಮುದಾಯದಿಂದ ಉತ್ತಮ ಬೆಂಬಲ ವ್ಯಕ್ತವಾಗುತ್ತಿದ್ದು, ಜನರೊಟ್ಟಿಗೆ ಪಕ್ಷದ ಸಂಪರ್ಕ ಮತ್ತಷ್ಟು ತೀವ್ರಗೊಳಿಸಲು ಆಮ್ ಅದ್ಮಿ ಗ್ರಾಮಸಭೆಗಳನ್ನು ಅಯೋಜಿಸಿದೆ ಎಂದು ಚಿಕ್ಕನಾಯಕನಹಳ್ಳಿ ಕ್ಷೇತ್ರದ ಸಂಭಾವ್ಯ ಅಭ್ಯರ್ಥಿ ಬೆಳಗುಲಿ ಮಹಾವೀರ ಜೈನ್ ತಿಳಿಸಿದ್ದಾರೆ.
ಇದೇ 1ರಂದು ನೇ ಶುಕ್ರವಾರ ಬೆಳಿಗ್ಗೆ 10.30ಕ್ಕೆ ಚಿಕ್ಕನಾಯಕನಹಳ್ಳಿ ವಿಧಾನ ಸಭಾ ಕ್ಷೇತ್ರದ ಚಿಕ್ಕನಾಯಕನಹಳ್ಳಿ ಟೌನ್ ಶೆಟ್ಟಿಕೆರೆ ರಸ್ತೆ ನವೋದಯ ಕಾಲೇಜ್ ಎದರು ” ಆಮ್ ಆದ್ಮಿ ಪಕ್ಷ “ದ ಕಚೇರಿ ಉದ್ಘಾಟನೆ ಹಾಗೂ ಮೊದಲ ಗ್ರಾಮ ಸಂಪರ್ಕ ಸಭೆ ನಡೆಯಲಿದೆ ಎಂದು ಹೇಳಿದ್ದಾರೆ.
ಈ ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿ ತುಮಕೂರು ಜಿಲ್ಲಾ ಎ ಎ ಪಿ. ಅಧ್ಯಕ್ಷರಾದ Dr. ವಿಶ್ವನಾಥ್ ಮತ್ತು ವಲಯ ಸಂಯೋಜಕರಾದ ಗುರುಮೂರ್ತಿ ಮತ್ತು ಉಮಾಶಂಕರ್, ವಿಮಲ್ ಪಾಂಡೆ , ಫಾರೂಕ್, ಕಾರ್ಯಧ್ಯಕ್ಷರು ತುಮಕೂರು ಜಿಲ್ಲೆ. ಮತ್ತು Dr. ನಿಜಾಮುದ್ದೀನ್, ಆಡಿಟರ್ ಬಶೀರ್ ಅಹಮದ್, ಪ್ರೇಮಕುಮಾರ್ ರವರು ಸಂಬಾವ್ಯ ಅಭ್ಯರ್ಥಿ ಸಿರಾ. ಮತ್ತು ಮಂಜುನಾಥ್ ಎ ಎ ಪಿ.ಸಿರಾ. ಹಾಗೂ ಪ್ರಭುಸ್ವಾಮಿ ಸಂಬಾವ್ಯ ಅಭ್ಯರ್ಥಿ ಗುಬ್ಬಿ. ಮತ್ತು ಇತರೆ ಮುಖಂಡರು ಭಾಗವಹಿಸುತ್ತಾರೆ ಎಂದು ಹೇಳಿದ್ದಾರೆ.
” ಅಮ್ ಆದ್ಮಿ ಪಕ್ಷದ ” ಕಚೇರಿಯ ಉದ್ಘಾಟನೆಯನ್ನು ಕೂಲಿ ಕಾರ್ಮಿಕರು ಮತ್ತು ರೈತರು ಮತ್ತು ಆಟೋ ಚಾಲಕರು ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದ್ದಾರೆ.