Publicstory.in
Bengalore: ತುಮಕೂರು ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಮಾಜಿ ಸಚಿವ ಸೊಗಡು ಶಿವಣ್ಣ, ಮಾಜಿ ಶಾಸಕ ಬಿ.ಸುರೇಶಗೌಡ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಚರ್ಚಿಸಿದರು.
ತುಮಕೂರು ಗ್ರಾಮಾಂತರ ಕ್ಷೇತ್ರದ ಬಳ್ಳಗೆರೆ ಸಮೀಪದ ಗ್ರಾಮದಲ್ಲಿ ಸೋಂಕು ಕಾಣಿಸಿಕೊಂಡ ಕೂಡಲೇ ಈ ಇಬ್ಬರು ನಾಯಕರು ಮುಖ್ಯಮಂತ್ರಿ ಬಳಿಗೆ ದೌಡಾಯಿಸಿದರು.
ಜಿಲ್ಲೆಯಲ್ಲಿ ಗ್ರಾಮಗಳಿಗೆ ಸೋಂಕು ಹರಡುವ ಮುನ್ಸೂಚನೆ ಇದಾಗಿದ್ದು, ಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ. ಸೋಂಕು ಹರಡದಂತೆ ತಡೆಯಲು ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಬೇಕು ಎಂದು ಮನವಿ ಮಾಡಿದರು.
ಲಾಕ್ ಡೌನ್ ಸಡಿಲಗೊಂಡ ಹಿನ್ನೆಲೆಯಲ್ಲಿ ಸೋಂಕು ಹೆಚ್ಚಾಗಬಹುದು ಎಂಬ ಆತಂಕವನ್ನು ಈ ಇಬ್ಬರು ನಾಯಕರು ಹೇಳಿದ್ದಾರೆ.
ಸುರೇಶ ಗೌಡ ಕರೆ
ಕೊರೊನಾ ಜೊತೆಯಲ್ಲೇ ಬದುಕುವುದು ಅನಿವಾರ್ಯ . ಸೋಂಕಿನಿಂದ ದೂರ ಆಗಬೇಕಾದರೆ ಯಾರೇ ಆದರೂ ಮಾಸ್ಕ್ ಹಾಕಿಕೊಂಡೇ ಮಾತನಾಡಬೇಕು. ಓಡಾಡುವಾಗ ಮಾಸ್ಕ್ ಧರಿಸಿ, ಹತ್ತಿರ ಬಂದಾಗ ಮಾಸ್ಕ್ ತೆಗೆದು ಮಾತನಾಡುತ್ತಾರೆ. ಇದು ತಪ್ಪು, ಮಾಸ್ಕ್ ಇಲ್ಲದಿದ್ದರೆ, ಮಾಸ್ಕ್ ತೆಗೆದು ಮಾತನಾಡಲು ಬಂದರೆ ಅವರೊಂದಿಗೆ ಯಾರೂ ಮಾತನಾಡರದು. ಈ ಬಗ್ಗೆ ಗ್ರಾಮಾಂತರ ಕ್ಷೇತ್ರದ ಜನರಲ್ಲಿ ಜಾಗೃತಿ ಮೂಡಿಸುವಂತೆ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.