ಜಸ್ಟ್ ನ್ಯೂಸ್

ತುಮಕೂರು ರೈತರ ಪರ ದನಿ ಎತ್ತಿದ ಜಗದೀಶ್ ಕೋಡಿಹಳ್ಳಿ

Publicstory. in


ತುಮಕೂರು: ತುಮಕೂರು ಜಿಲ್ಲೆಗೆ ಹೆಚ್ಚಿನ ಹಣಕಾಸು ಒದಗಿಸಬೇಕು. ನೀರಾವರಿ ಯೋಜನೆಗಳನ್ನು ಬೇಗನೇ ಮುಗಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬೆಂಗಳೂರಿನಲ್ಲಿ ಕರೆದಿದ್ದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಭಾರತೀಯ ಕೃಷಿಕ ಸಮಾಜದ ಜಗದೀಶ್ ಕೋಡಿಹಳ್ಳಿ ದನಿಎತ್ತಿ ಮಾತನಾಡಿದರು.

ತುಮಕೂರು ಜಿಲ್ಲೆಯ ರೈತರ ಕಷ್ಟಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಅವರು, ಮುಂದಿನ ಅಯವ್ಯಯದಲ್ಲಿ ರೈತರ ಪರವಾಗಿ ಏನ್ನೆಲ್ಲ ಮಾಡಬೇಕು ಮತ್ತು ಏಕಾಗಿ ಮಾಡಬೇಕೆಂದು ಮುಖ್ಯಮಂತ್ರಿ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.

ತುಮಕೂರು ಜಿಲ್ಲೆಗೆ ನೀರು ಒದಗಿಸಬೇಕಾಗಿರುವ ಹೇಮಾವತಿ, ಭದ್ರಾ ಮೇಲ್ದಂಡೆ ಮತ್ತು ಎತ್ತಿನಹೊಳೆ ಯೋಜನೆಗಳ ಕಾಮಗಾರಿಗಳನ್ನು ತುರ್ತಾಗಿ ಮುಗಿಸುವಂತೆ ಹಾಗೂ ಕೂಡಲೇ ಅನುಷ್ಠಾನಗೊಳಿಸಲು ಬೇಕಾದ ಹಣವನ್ನು ಬಜೆಟ್ ನಲ್ಲಿ ಮೀಸಲಿಡಬೇಕು.

ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳು ಮತ್ತು ಎಲ್ಲಾ ಗ್ರಾಮಗಳಿಗೆ ವಾಟರ್ ಗ್ರಿಡ್ ಪೈಪ್ ಲೈನ್ ಮೂಲಕ ಕುಡಿಯುವ ನೀರು ಒದಗಿಸುವ ಪೈಲೆಟ್ ಪ್ರಾಜೆಕ್ಟ್ ಅನ್ನು ಸಿದ್ಧಪಡಿಸಿ ,ಸಮಗ್ರ ನೀರಾವರಿ ಯೋಜನೆಗೆ ಆದ್ಯತೆ ನೀಡಲು ಕ್ರಮವಹಿಸಬೇಕು ಎಂದು ಕೋರಿದ್ದಾರೆ.

ಯುವ ಪೀಳಿಗೆ ಕೃಷಿಯ ಬಗ್ಗೆ ನಿರಾಸಕ್ತಿತಾಳಲು ಸರ್ಕಾರದ ನೀತಿಗಳೇ ಕಾರಣ. ಕೃಷಿಯನ್ನು ಸರ್ಕಾರ ಪ್ರೋತ್ಸಾಹಿಸುತ್ತಿಲ್ಲ. ಹೀಗಾಗಿ ಬಜೆಟ್ ನಲ್ಲಿ ಕೃಷಿಗೆ ಹೆಚ್ಚಿನ ಪ್ರಾದ್ಯಾನತೆ ನೀಡಬೇಕು. ತುಮಕೂರು ಜಿಲ್ಲೆಯಲ್ಲಿ ನೈಸರ್ಗಿಕ ಕೊಬ್ಬರಿ ಉತ್ಪಾದನೆ ಜಗತ್ತಿನಲ್ಲೇ ಮೊದಲಾಗಿದೆ. ಈ ಸಾಂಪ್ರದಾಯಿಕ ಪದ್ಧತಿಯನ್ನು ಕಾಪಾಡಲು ರೈತರು ಗೋದಾಮು ನಿರ್ಮಿಸಲು ಸಹಾಯಧನ ಪದ್ಧತಿ ಜಾರಿಗೆ ತರಬೇಕು. ಕೃಷಿ ಅನುವುಗಾರರಿಗೆ ವರ್ಷ ಪೂರಾ ಸಂಬಳ ನೀಡಬೇಕು. ರೈತರು ಮತ್ತು ಸರ್ಕಾರದ ಯೋಜನೆಗಳ ಸಂಪರ್ಕ ಸೇತುವೆಯಾಗಿ ಕೆಲಸ ಮಾಡಲು ಇವರನ್ನು ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

ರೈತರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು. ವಾಣಿಜ್ಯ ಬ್ಯಾಂಕ್ ಗಳು ರೈತರಿಗೆ ಕಿರುಕುಳ ನೀಡುತ್ತಿದ್ದು, ಈ ಬ್ಯಾಂಕ್ ಗಳಲ್ಲಿ ರೈತರು ಮಾಡಿರುವ ಬಡ್ಡಿಯನ್ನು ಸಹ ಮನ್ನಾ ಮಾಡಬೇಕು ಎಂದು ಹೇಳಿದ್ದಾರೆ. ಬೆಳೆ ಸಾಲ ಅಲ್ಲದೇ ಅಲ್ಪಾವಧಿ. ದೀರ್ಘಾವಧಿ ಸಾಲಗಳನ್ನು ಮನ್ನಾ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

Comment here