ಜಸ್ಟ್ ನ್ಯೂಸ್

ದೀಪುಗೆ ಜೆಡಿಎಸ್ ಸಾರಥ್ಯ

ಕೆ.ಬಿ.ದಯಾನಂದ ಗೌಡ

ತುಮಕೂರು; ಜೆಡಿಎಸ್ ಹಿರಿಯ ಮುಖಂಡ, ಬೋರೇಗೌಡ ಅವರ ಪುತ್ರ ಕೆ.ಬಿ.ದಯಾನಂದ ಗೌಡ (ದೀಪು ಬೋರೇಗೌಡ) ಅವರನ್ನು ಜೆಡಿಎಸ್ ಯುವ ಜನತಾ ದಳದ ರಾಜ್ಯ ಪ್ರಧಾನ ಕಾರ್ಯದರ್ಶಿ ಯಾಗಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ನೇಮಕ ಮಾಡಿದ್ದಾರೆ.
ಈ ಮೂಲಕ ಪಕ್ಷದ ಯುವ ಘಟಕದ ಚುಕ್ಕಾಣಿ ನೀಡಿದ್ದಾರೆ.

ತುಮಕೂರು ಜಿಲ್ಲೆಯಲ್ಲಿ, ತುಮಕೂರು ನಗರ, ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಬಲವರ್ಧನೆಯಲ್ಲಿ ಬೋರೇಗೌಡ ರು ಹಾಗೂ ದೀಪು ಪ್ರಮುಖ ಪಾತ್ರ ವಹಿಸಿದ್ದರು.

ತುಮಕೂರು ನಗರ ಕ್ಷೇತ್ರದಿಂದ‌ ಬೋರೇಗೌಡ ಅವರು ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಸ್ವ ಪಕ್ಷೀಯರ ಚಿತಾವಣೆಯಿಂದ‌ ಅವರಿಗೆ ಟಿಕೆಟ್ ತಪ್ಪಿತ್ತು.

ಚುನಾವಣೆ ಬಳಿಕ ಈ ಬಗ್ಗೆ ದೇವೇಗೌಡರು ಸಹ ವಿಷಾದಿಸಿದ್ದರು. ಈಗ ದೀಪು ಅವರಿಗೆ ಉನ್ನತ ಸ್ಥಾನ ನೀಡಿದ್ದಾರೆ.

ತುಮಕೂರು ನಗರ ಕ್ಷೇತ್ರದಲ್ಲಿ ತಮ್ಮದೇ ಆದ‌ ಪ್ರಭಾವ ಹೊಂದಿರುದ್ದಾರೆ. ಅವರ ನೇಮಕ ಅವರ ಅಭಿಮಾನಿಗಳು, ಯುವಕರಿಗೆ ಖುಷಿ ಸಂದಿದೆ.

ದೇವೇಗೌಡರು ನನ್ನ ಮೇಲೆ ನಂಬಿಕೆ ಇಟ್ಟು ಇಷ್ಟು ದೊಡ್ಡ ಜವಾಬ್ದಾರಿ ಹೊರಿಸಿದ್ದಾರೆ. ತುಮಕೂರು ಜಿಲ್ಲೆ ಮಾತ್ರ ಅಲ್ಲ, ರಾಜ್ಯದಲ್ಲಿ ಯುವಕರನ್ನು ಪಕ್ಷಕ್ಕೆ ಕರೆ ತಂದು ಪಕ್ಷ ಬಲಪಡಿಸಲು ಪಣ ತೊಟ್ಟು ಕೆಲಸ ಮಾಡುತ್ತೇನೆ ಎಂದು ದೀಪು ಪಬ್ಲಿಕ್ ಸ್ಟೋರಿಗೆ ಪ್ರತಿಕ್ರಿಯಿಸಿದರು.

Comments (2)

  1. All the best dear deepu gowda 💐💐💐sir 💐💐 congratulations 💐💐💐

Comment here