ನವರಾತ್ರಿಯ ಐದನೇ ದಿನ ಅಂದರೆ, ಪಂಚಮಿಯಂದು ದೇವಿಯ ಅನುಗ್ರಹ, ಹಬ್ಬದ ಸಂಭ್ರಮಕ್ಕೆ ಬಿಳಿ ಬಣ್ಣದ ಉಡುಪು ಧರಿಸಬಹುದು. ಬಿಳಿ ಬಣ್ಣವು ಶುದ್ಧತೆ, ಪ್ರಾಮಾಣಿಕತೆಯನ್ನು ಸೂಚಿಸುತ್ತದೆ. ಈ ದಿನದಂದು ಸ್ಕಂದಮಾತಾ ದೇವರನ್ನು ಪೂಜೆ ಮಾಡಲಾಗುತ್ತದೆ. ಡಾ.ರಜನಿ ಅವರ ಈ ಕವನ ಬದುಕಿನೊಂದಿಗೆ ಬಿಳಿಯ ಮಹತ್ವವನ್ನು ಸಾರುತ್ತದೆ
ಬಿಳಿ
****
ಬಿಳಿ ಬಣ್ಣ ಶಾಂತತೆ,
ತಾಳ್ಳೆ, ಶುದ್ಧತೆಯ ಪ್ರತೀಕವೇ?
ಅದು ಹೇಗೆ..?.
ಒಳಗೆ ಏಳು
ಬಣ್ಣಗಳಿಲ್ಲವೆ!
ಏಳು ಬಣ್ಣಗಳನ್ನೂ
ಭಾವನೆಗಳನ್ನು
ಹಿಡಿತದಲ್ಲಿ ಹಿಡಿದರೆ ಬಿಳಿ
ಹೊಮ್ಮುವುದು…
ಬಿಳಿಯದೆಲ್ಲ ಶ್ರೇಷ್ಠವೇ?
ಬಿಳಿ ಗುಲಾಬಿ, ಬಿಳಿ ಹುಲಿ
ಬಿಳಿ ನವಿಲು…
ಬಿಳಿ ಪಾರಿವಾಳ…
ಬಿಳೀ ಹಾಳೆ
ಏನು ಚೆನ್ನ?
ಕಪ್ಪು ಅಕ್ಷರ ಮೂಡದ ಮೇಲೆ…
ಬಿಳೀ ಗುಲಾಬಿ
ಮಲ್ಲಿಗೆಗೆ
ಹಸಿರು ತೊಟ್ಟು ಇಲ್ಲದ ಮೇಲೆ…
ಕಪ್ಪು ಕೂದಲ ಮೇಲೆ
ಮಲ್ಲಿಗೆ
ಮುಡಿಯದೆ ….
ಕಪ್ಪು ಕಳೆದು ಬಿಳಿ ಆಗುವುದೇ?
ಮಳೆ ಸುರಿದ
ಬಿಳಿ ಮೋಡ….?
ಕೊರೆಯುವ ಹಿಮ
ಕೊಲ್ಲುವ
ಹಿಮ ಕರಡಿ …
ಹಸಿರು ಹುಲ್ಲು ತಿಂದು
ಬಂದ ಬಿಳಿ
ಬೆಣ್ಣೆ…
ಕಡೆಯದೇ
ಬೆಣ್ಣೆ ಆಗದು….
ಹಸಿರು
ಉಟ್ಟು
ಬಿಳಿಯಾಗಬೇಕು…
ಬಿಳಿ ಇನ್ನೂ
ಬಿಳಿಯಾಗಲಾರದು…
ಬಿಳಿ ಕುದುರೆ
ಟೂ… ಟೂ..
ಡಾ II ರಜನಿ