ಜಸ್ಟ್ ನ್ಯೂಸ್

ನಾಗಲಮಡಿಕೆಯಲ್ಲಿ ನೀರಿಗಾಗಿ ಪ್ರತಿಭಟನೆ

ಪಬ್ಲಿಕ್ ಸ್ಟೋರಿ:    ಆಂಧ್ರದ ಪೇರೂರಿನ ಡ್ಯಾಂ ಗೆ ಹಂದ್ರಿನಿವಾ ಯೋಜನೆ ಮೂಲಕ ನೀರು ಹರಿಸಲು ಅವಕಾಶ ಕೊಡಬೇಕು ಎಂದು ಒತ್ತಾಯಿಸಿ ಸೋಮವಾರ ಪಾವಗಡ ತಾಲ್ಲೂಕಿನ ನಾಗಲಮಡಿಕೆಯಲ್ಲಿ ಜನತೆ ಪ್ರತಿಭಟನೆ ನಡೆಸಲಿದ್ದಾರೆ.

ಶಾಸಕರು ನೀರು ತೆಗೆದುಕೊಂಡು ಹೋಗದಂತೆ ಅಧಿಕಾರಿಗಳನ್ನು ಬಳಸಿಕೊಂಡು ತಡೆಯುತ್ತಿದ್ದಾರೆ ಎಂದು  ವಾಟ್ಸ್ ಅಪ್, ಫೆಸ್ ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳು ಹಾಗೂ ಸಾರ್ವಜನಿಕವಾಗಿ  ಚರ್ಚೆ ನಡೆಯುತ್ತಿದೆ.

ಆಂಧ್ರದವರು ನಾಗಲಮಡಿಕೆಯಲ್ಲಿ ಪೂಜೆ ಸಲ್ಲಿಸಿದಾಗ ಮಾಜಿ ಶಾಸಕ ತಿಮ್ಮರಾಯಪ್ಪ, ಸಂಸದ ನಾರಾಯಣಸ್ವಾಮಿ ಹೋಗಿದ್ದರು. ಆದರೆ ಶಾಸಕ ವೆಂಕಟರಮಣಪ್ಪ ಅವರಿರಲಿಲ್ಲ. ಇದೇ ವಿಚಾರವನ್ನು ಆಧಾರವಾಗಿಟ್ಟುಕೊಂಡು ಪರ ವಿರೋಧ ಚರ್ಚೆಗಳು ವ್ಯಾಪಕವಾಗಿ ನಡೆಯುತ್ತಿವೆ.

ಶಾಸಕ ವೆಂಕರಮಣಪ್ಪ, ಕೆಲವರು ಅನಗತ್ಯವಾಗಿ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಅವುಗಳಲ್ಲಿ ಯಾವುದೇ ಹುರುಳಿಲ್ಲ. ಪೆರೂರಿಗೆ ಉತ್ತರ ಪಿನಾಕಿನಿ ನದಿ ಮೂಲಕ ನೀರು ತೆಗೆದುಕೊಂಡು ಹೋಗಲು ಯಾವುದೇ ಅಭ್ಯಂತರವಿಲ್ಲ. . ಚೆಕ್ ಡ್ಯಾಂ ತುಂಬಿಸಿ   ಕಾಲುವೆ ಮೂಲಕ ನೀರು ತೆಗೆದುಕೊಂಡು ಹೋಗಲಿ ಎಂದು  ತಿಳಿಸಿದ್ದಾರೆ.

ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ, ಪ್ರತಿಭಟನೆಯಲ್ಲಿ ಭಾಗವಹಿಸಲಾಗುವುದು.   ಮೌಖಿಕ ಒಪ್ಪಿಗೆಯ ಮೇರೆಗೆ ನೀರು ಕೊಂಡೊಯ್ಯಲು ಅವಕಾಶ ಕಲ್ಪಿಸಬೇಕು. ಕೆಲ ತಾಂತ್ರಿಕ ಕಾರಣಗಳಿಂದ ಲಿಖಿತವಾಗಿ ಆದೇಶ ನೀಡಿರುವುದಿಲ್ಲ. ಇದನ್ನು ಅಧಿಕಾರಿಗಳು ಅರ್ಥಮಾಡಿಕೊಂಡು ತಾಲ್ಲೂಕಿನ  ಹಿತದೃಷ್ಠಿಯಿಂದ ಕಾಮಗಾರಿ ನಿಲ್ಲಿಸಬಾರದು.  ಚೆಕ್ ಡ್ಯಾಂ ತುಂಬಿಸುವುದರಿಂದ ಬೇಸಿಗೆಯಲ್ಲಿ ಹೋಬಳಿಯ ಜನತೆ ಹಾಗೂ ಜಾನುವಾರುಗಳಿಗೆ ನೀರು ಸಿಗಲಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Comment here