Publicstory. in
Tumkur: ರಾಜ್ಯದ ಪ್ರತಿ ಆಟೊ ಚಾಲಕರಿಗೆ ಉಚಿತವಾಗಿ ಐದು ಸಾವಿರ ರೂಪಾಯಿ ನೀಡಲು ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಆಟೋ ಮತ್ತು ಟ್ಯಾಕ್ಸಿ ಚಾಲಕರು ಇದರ ಪ್ರಯೋಜನವನ್ನು ಪಡೆಯಬಹುದು. ಒಂದೇ ಬಾರಿಗೆ ಐದು ಸಾವಿರ ರೂಪಾಯಿಯನ್ನು ಅವರ ಬ್ಯಾಂಕ್ ಅಕೌಂಟಿಗೆ ಹಾಕಲಾಗುತ್ತದೆ.
ಆಟೊ ಚಾಲಕರು ಮಾತ್ರ ವಲ್ಲದೆ ಟ್ಯಾಕ್ಸಿ ಚಾಲಕರು ಸಹ ಇದರ ಪ್ರಯೋಜನವನ್ನು ಪಡೆಯಬಹುದಾಗಿದೆ. ಇದರಿಂದಾಗಿ ಈ ಚಾಲಕರು ಆರ್ಥಿಕ ಸಂಕಷ್ಟದಿಂದ ಹೊರಬರಲು ಸಾಧ್ಯವಾಗಲಿದೆ ಎಂದು ಸರ್ಕಾರ ಹೇಳಿದೆ.
ಎಲ್ಲಾ ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೂ ಇದರ ಪ್ರಯೋಜನ ಸಿಗುವುದಿಲ್ಲ. ಡ್ರೈವಿಂಗ್ ಲೆಸೆನ್ಸ್ ಹೊಂದಿರುವ ಟ್ಯಾಕ್ಸಿ ಚಾಲಕರಿಗೆ ಮಾತ್ರ ಇದರ ಇದರ ಪ್ರಯೋಜನ ಸಿಗಲಿದೆ.
ಇದಕ್ಕಾಗಿ ಸರ್ಕಾರ ಕೆಲವು ಮಾರ್ಗದರ್ಶಿ ಸೂತ್ರಗಳನ್ನು ಹೊರಡಿಸಿದ್ದು ಈ ಸೂತ್ರಗಳ ಅನುಸಾರ ಪ್ರಯೋಜನ ಸಿಗಲಿದೆ.
ಈ ಐದು ಸಾವಿರ ರೂಪಾಯಿಯನ್ನು ಪಡೆಯಲು ಆಟೊ ಚಾಲಕರು ಬ್ಯಾಂಕ್ ಖಾತೆಯನ್ನು ಹೊಂದಿರುವುದು ಕಡ್ಡಾಯವಾಗಿದೆ. ಬ್ಯಾಂಕ್ ಖಾತೆ , ಆಧಾರ್ ಅನ್ನು ಸಂಬಂಧಿಸಿದ ಇಲಾಖೆಗೆ ಕೊಡಬೇಕು. ಅಲ್ಲಿಂದ ನೇರವಾಗಿ ಖಾತೆಗೆ ಐದು ಸಾವಿರ ರೂಪಾಯಿಯನ್ನು ಹಾಕಲಾಗುತ್ತದೆ.
ಕೊರೊನಾ ಹಿನ್ನೆಲೆಯಲ್ಲಿ ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಪ್ಯಾಕೇಜ್ ಘೋಷಿಸಬೇಕೆಂಬ ಒತ್ತಾಯ ಕೇಳಿಬರುತ್ತಿತ್ತು. ಇದಕ್ಕಾಗಿ ಹಲವು ಸಂಘಟನೆಗಳು ಸರ್ಕಾರವನ್ನು ಒತ್ತಾಯಿಸಿದ್ದವು.