ದೇವರಹಳ್ಳಿ ಧನಂಜಯ
ಎನಗಿಂತಕಿರಿಯರಿಲ್ಲ
ಮೇಲು ಕೀಳಿನ ವ್ಯಸನ
ಸನಿಹ ಸುಳಿಯಲಿಲ್ಲ
ಎಲ್ಲರೂ ನನ್ನವರೆಂಬ ಹೃದಯ ನಿವೇದನೆ
ಎಲ್ಲರ ಒಳಿತಿಗಾಗಿ ತೆರೆದು ತೋಳಿನ
ಪ್ರಾರ್ಥನೆ
ಬೆಳೆದು ನಿಂತ ವೃಕ್ಷ ಸೂತ್ರ
ಎಲ್ಲರ ಅರಿವಲೂ ಇರುವೆ.
ನೀನಿಲ್ಲದ ಉಸಿರೇ ನಿಂತಂತೆ
ಎಲ್ಲೂ ಕಾಣದೆ ಇರುವೆ.
ಕಾಯ ದೇಗುಲದ ಕಾಯಕ ಪೂಜೆ
ನಿರಂತರ.
ಜಾತಿ ಮತಗಳ ಗುಡಿ ಗಡಿ ದಾಟಿದ
ಸರದಾರ.
ಉಳುವ ಜೋಡೆತ್ತಿನಲೂ ಉಳಿದಿರುವೆ
ತನ್ನ ಖುಷಿಗೆ ತಾನೆಂಬಂತೆ
ಹರಿಯುತಿರುವೆ
ಮನದ ಕೊಳೆಯ ತೊಳೆಯುತಿರುವೆ
ಮುಟ್ಟು ತಟ್ಟುಗಳ ಮೀರಿ
ಎಲ್ಲರಿಗೂ ಬೇಕಿರುವ
ಜೀವ ಜಲ ನೀನು.
ಬೆಳೆದು ಹಬ್ಬಲಿ ನಿನ್ನಿಂದ
ಹಳೆ ಬೇರು ಹೊಸ ಚಿಗುರು.
ನೀ ಮಣ್ಣು. ಈ ನೆಲದ ಕಣ್ಣು.
ಎದೆಯ ಹದಗೊಳಿಸಿ,
ಹೊಸ ಸೃಷ್ಠಿಗೆ ಒಕ್ಕಲು ಮಾಡಿರುವೆ.
ಮಾತು ಸೂತಕವಾಗದ
ಅನುಭವ ಜನ್ಯ ವಚನ ಜ್ಞಾನ.
ಜಗದಗಲ ಬಿತ್ತಿ ಬೆಳೆದಿದೆ.
ಎಲ್ಲರೊ ಳಗೂ ನೆಲೆಯಾಗುವ
ನೆಲದ ಕಣ್ಣ ತೆರೆದಿರುವೆ.
ಮುಗಿಲಗಳ ಬೆಳೆದಿರುವ ಗುರುವೇ
ನೀನು ಒಳ ಹೊರಗನು
ಒಂದು ಮಾಡಿದ ಬಯಲು
ಅಂತರಂಗ ಬಹಿರಂಗದ ಶುದ್ಧಿ
ಬೆವರ ದ್ವೇಷಿ ಆಚಾರ ಅನಾಚಾರ
ಮನುತನವ ಕಳಚಿ
ಮಾನವತೆ ಮೆರೆದ ಜಗದ್ಗುರು
ಎಲ್ಲರೂಳಗೂ ಬೆಳಗು ಪರಂಜ್ಯೋತಿ
ದೇಗುಲ ದೇಹದ ಎದೆಗೂ ಡಲ್ಲಿ
ಬೆಳಗುತ್ತಿರುವ ಕರುಣೆಯಮೂರ್ತಿ
ಸೃಷ್ಠಿ ಸೂತ್ರದ ಇಸ್ಟಲಿಂಗದಿ
ಪ್ರಕೃತಿಯ ಸರಳ ಪಾಠ
ಎಲ್ಲರೊಳೊಂದಾಗುವ ಬೆಚ್ಚಗಿನ
ಪ್ರೀತಿ ಹೇಳಿಕೊಟ್ಟ ಗುರುವೇ
ನಿನಗೆ ಶರಣು ಶರಣಾರ್ಥಿ