Publicstory
ತುಮಕೂರು: ಸಂಘಟಿತರಾಗಿ ಕೆಲಸಗಳನ್ನು ಮಾಡಿದರೆ ಉತ್ತಮ ಸಾಧನೆ ಮಾಡಬಹುದು ಎಂದು ವಿದ್ಯೋದಯ ಕಾನೂನು ಕಾಲೇಜಿನ ಸಿಇಒ ಪ್ರೊ. ಚಂದ್ರಣ್ಣ ತಿಳಿಸಿದರು.
ನಗರದ ಹಿರೇಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದ ಸಭಾಂಗಣದಲ್ಲಿ ನಬಾರ್ಡ್ವತಿಯಿಂದ ಏರ್ಪಡಿಸಿದ್ದ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಬದಲಾವಣೆಯನ್ನು ಕಾಣಬೇಕಾದರೆ ನಿರಂತರ ಪ್ರಯತ್ನ ಮಾಡಬೇಕು. ಗ್ರಾಮೀಣ ಪ್ರದೇಶದಲ್ಲಿ ರೈತರು ಸಂಘಟಿತರಾಗಿ ಕೃಷಿ ಚಟುವಟಿಕೆಗಳನ್ನು ಮಾಡಿ, ಕೃಷಿಯಲ್ಲಿ ಖರ್ಚನ್ನು ಕಡಿಮೆ ಮಾಡಿಕೊಳ್ಳಬೇಕು ಎಂದರು.
ಕರ್ನಾಟಕ ಜಲಭಿವೃದ್ದಿ ಪ್ರಾಧಿಕಾರದ ನಿವೃತ್ತ ನಿರ್ದೇಶಕರಾದ ವಿ.ಎಸ್.ಪ್ರಕಾಶ್ ಮಾತನಾಡಿ, ರೈತರು ಜಾಗತಿಕ ತಾಪಮಾನವನ್ನು ನೋಡಿಕೊಂಡು ಕೃಷಿ ಮಾಡಿದರೆ ನೀರು, ಗೊಬ್ಬರವನ್ನು ಕಡಿಮೆ ಮಾಡಲು ಪೂರಕವಾಗುತ್ತದೆ. ರೈತರು ಸಾವಯವ ಕೃಷಿ ಮಾಡಿಕೊಂಡು ತೇವಾಂಶವನ್ನು ಕಾಪಾಡಿ. ಹಸಿರು ಬೇಳೆಗಳನ್ನು ತಮ್ಮ ಜಮಿನಿನಲ್ಲಿ ಬೇಳೆದರೆ ಬೇಳೆಯು ಉತ್ತಮ ರೀತಿಯಲ್ಲಿ ಬರುತ್ತೆ. ಜೋತೆಗೆ ತೇವಾಂಶಕೂಡ ಹೆಚ್ಚು ದಿನ ಇರಲು ಸಾಧ್ಯವಾಗುತ್ತದೆ. ನೀರಿನ ಸಂರಕ್ಷಣಕ್ರಮಗಳನ್ನು ಪ್ರತಿಯೊಬ್ಬ ರೈತರು ಅಳವಡಿಸಿಕೊಳ್ಳಬೇಕು. ಇವುಗಳನ್ನು ಅಳವಡಿಸಿಕೊಳ್ಳಲು ರೈತರಲ್ಲಿ ವೈಜ್ಞಾನಿಕ ಮನೋಭಾವ ಬದಲಾವಣೆಯಾಗಬೇಕು. ಎಲ್ಲರೂ ಅವಿಷ್ಕಾರಕ್ಕೆ ಹೊಂದಿಕೊAಡು ತಂತ್ರಜ್ಞಾನ ಬಳಸಿಕೊಂಡು ಜೀವನ ರೂಪಿಸಿಕೊಳ್ಳಬೇಕು ಎಂದರು.
ನಬಾರ್ಡ್ ಉಪಮಹಾಪ್ರಬಂದಕರಾದ ಕೀರ್ತಿಪ್ರಭ ಮಾತನಾಡಿ, ನಬಾರ್ಡ್ ಅತ್ಯಂತ ಹೆಚ್ಚಿನ ಮಟ್ಟದ ಸಾಲ ಮತ್ತು ಸಹಾಯ ಧನ ನೀಡಿ ಸ್ವಾತಂತ್ರö್ಯ ಅಭಿವೃದ್ದಿಶೀಲ ಭಾರತ ನಿರ್ಮಾಣಕ್ಕೆ ಕಾರಣೀಭೂತವಾಗಿದೆ. ಜಿಲ್ಲೆಯಲ್ಲಿ ನಬಾರ್ಡ್ ಸಂಸ್ಥೆಯ ಧನ ಸಹಾಯ ಯೋಜನೆಗಳನ್ನು ಜಾರಿಗೊಳಿಸಿ ಸ್ತಿçÃಸಾಮಾನ್ಯ ಅದರಲ್ಲೂ ವಿಶೇಷವಾಗಿ ಗ್ರಾಮೀಣ ಮಹಿಳೆಯರ ಸರ್ವಾಂಗೀಣ ಅಭಿವೃದ್ದಿಯನ್ನು ಸಾಧಿಸಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸತ್‌ಕುಮಾರ್ ಕೃಷಿ ಆ್ಯಪ್ ಬಗ್ಗೆ ಮಾಹಿತಿ ನೀಡಿದರು, ಕಾರ್ಯಕ್ರಮದಲ್ಲಿ ಕೆವಿಕೆ ವಿಜ್ಞಾನಿ ಜಗದೀಶ್, ಸ್ವಯಂ ಸೇವಾ ಸಂಸ್ಥೆಯ ಪ್ರತಿನಿದಿಗಳು, ರೈತ ಉತ್ಪಾದಕರ ಕಂಪನಿಯ ಸಿಇಒಗಳು, ಸ್ವಸಹಾಯ ಸಂಘದ ಸದಸ್ಯರು ಹಾಗೂ ಮತ್ತಿತರರು ಹಾಜರಿದ್ದರು.