Thursday, September 19, 2024
Google search engine
Homeಜಸ್ಟ್ ನ್ಯೂಸ್ಬಗರ್ ಹುಕುಂ; ಜಂಟಿ ಸರ್ವೆಗೆ ಡೀಸಿ‌ ಒಪ್ಪಿಗೆ

ಬಗರ್ ಹುಕುಂ; ಜಂಟಿ ಸರ್ವೆಗೆ ಡೀಸಿ‌ ಒಪ್ಪಿಗೆ

Publicatory


Tumakuru: ಕಳೆದ ಮೂರು ದಿನಗಳಿಂದ ಕರ್ನಾಟಕ ಪ್ರಾಂತ ರೈತ ಸಂಘ ದ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಛೇರಿ ಎದುರು ನಡೆಯುತ್ತಿದ್ದ ಬಗರ್ ಹುಕಂ ಸಾಗುವಳಿದಾರರ ಅನಿರ್ದಿಷ್ಟಾವಧಿ ಪ್ರತಿಭಟನೆ ಇಂದು ಮುಕ್ತಾಯಗೊಂಡಿತು.

ಅರಣ್ಯ ಇಲಾಖೆ ಜೊತೆ ತಕರಾರು ಇರುವ ಎಲ್ಲಾ ಬಗರ್ ಹುಕಂ ಸಾಗುವಳಿ ಜಮೀನಿನ ರೈತರ ಸ್ವಾಧೀನ ರಕ್ಷಿಸಲು ಜಂಟಿ ಸರ್ವೆ ಹಾಗೂ ಜಂಟಿ ಸಭೆ ಮಾಡುವುದಾಗಿ ಜಿಲ್ಲಾಧಿಕಾರಿಯ ಲಿಖಿತ ಭರವಸೆ ಆಧಾರದಲ್ಲಿ ಪ್ರತಿಭಟನಾ ಧರಣಿ ವಾಪಸ್ಸು ಪಡೆಯಲಾಯಿತು.

ಪ್ರತಿಭಟನಾ ನಿರತರು ಒದಗಿಸಿರುವ ಗ್ರಾಮ ಹಾಗೂ ಸರ್ವೆ ನಂಬರ್ ಗಳ ಜಮೀನುಗಳ ಜಂಟಿ ಸರ್ವೆ ನಡೆಸಿ ಅರಣ್ಯ ಇಲಾಖೆ ಯಿಂದ ಯಾವುದೇ ಕಿರುಕುಳ ಆಗದಂತೆ ಕ್ರಮ ವಹಿಸಬೇಕು. ಜಂಟಿ ಸರ್ವೆ ಆಗುವ ವರೆಗೆ ಹಾಗೂ ಕಂದಾಯ ಇಲಾಖೆಗೆ ವರ್ಗಾಯಿಸಿರುವ ಡೀಮ್ಡ್ ಆರಣ್ಯದ ವ್ಯಾಪ್ತಿ ಪ್ರಮಾಣ ,ಗಡಿ ಗುರುತಿಸುವವರೆಗೆ ರೈತರ ಮೇಲೆ ದೌರ್ಜನ್ಯ ನಡೆಸದಂತೆ ಅರಣ್ಯ ಇಲಾಖೆಯನ್ನು ನಿರ್ಭಂದಿಸಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘ ರಾಜ್ಯ ಮುಖಂಡ ಟಿ ಯಶವಂತ ಆಗ್ರಹಿಸಿದರು.

ಅರಣ್ಯ ಇಲಾಖೆ ಮೂಲಕ ಕಿತ್ತುಕೊಂಡಿರುವ ಬಗರ್ ಹುಕಂ ಸಾಗುವಳಿ ಭೂಮಿ ಮರಳಿಸಲು ,ಸಾಗುವಳಿ ಮಂಜೂರಾತಿ ಆದೇಶ ಪಡೆದಿರುವ ಎಲ್ಲಾ ಬಗರ್ ಹುಕುಂ ಸಾಗುವಳಿದಾರರಿಗೆ ದುರಸ್ತ್ ಮಾಡಿಸಿ ಪಹಣಿ ವಿತರಿಸಲು, ಬಗರ್ ಹುಕಂ ಸಕ್ರಮ ಕೋರಿ ಅರ್ಜಿ ಸಲ್ಲಿಸಲು ಇರುವ ಅವಕಾಶವನ್ನು ವಿಳಂಬ ಮಾಡದೇ ಕಲ್ಪಿಸಲು ,ವಸತಿ ರಹಿತರಿಗೆ ಮನೆ-ನಿವೇಶನ ಒದಗಿಸಲು, ಹೇಮಾವತಿ ನಾಲೆ,ರಾಷ್ಟ್ರೀಯ ಹೆದ್ದಾರಿ, ಎತ್ತಿನಹೊಳೆ ,ರೈಲ್ವೆ ಮುಂತಾದ ಯೋಜನೆಗಳಿಗೆ ಭೂ ಸ್ವಾಧೀನಕ್ಕೆ ಒಳಗಾದ ಬಗರ್ ಹುಕುಂ ಸಾಗುವಳಿದಾರರು ಸೇರಿದಂತೆ ಎಲ್ಲಾ ರೈತರಿಗೆ ಪರಿಹಾರದ ಹಣ ವಿತರಿಸಲು ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆ ನೇತೃತ್ವ ವನ್ನು ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾ ಸಂಚಾಲಕ ಅಜ್ಜಪ್ಪ ,ಮುಖಂಡರಾದ ಎನ್ ಕೆ ಸುಬ್ರಹ್ಮಣ್ಯ, ನರಸಿಂಹಮೂರ್ತಿ, ದೊಡ್ಡನಂಜಯ್ಯ, ಬಸವರಾಜು, ಯಾದವಮೂರ್ತಿ, ಲೋಕೇಶ್, ಆರ್ ಎಸ್ ಚನ್ನಬಸವಣ್ಣ ,ಮಾರುತಿ ಕೆಆರ್ ,ಮೂಡ್ಲಪ್ಪ, ಗೌರಮ್ಮ,ನಾಗರಾಜು,ಕರಿಬಸವಯ್ಯ, ಮಂಜುನಾಥ್ ಮುಂತಾದವರು ವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?