ಮಧುಗಿರಿ: ತಾಲ್ಲೂಕಿನ ದೊಡ್ಡೇರಿ ಹೋಬಳಿಯ ಬಡವನಹಳ್ಳಿ ಗ್ರಾಮದ ಟಾರ್ಗೆಟ್ ಎಜುಕೇಶನ್ ಟ್ರಸ್ಟ್ ವತಿಯಿಂದ ಐನ್ ಸ್ಟೀನ್ ಪಬ್ಲಿಕ್ ಸ್ಕೂಲ್ ಶಾಲಾ ಆವರಣದಲ್ಲಿ ಫೆ. 29 ರಂದು ಸಂಜೆ 5 ಕ್ಕೆ ಕಥಾ ಲಹರಿ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್ ಕಾರ್ಯದರ್ಶಿ ಬಾಲಕೃಷ್ಣ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಂಭಾಪುರಿ ಶಾಖಾ ಮಠದ ಪೀಠಾಧ್ಯಕ್ಷ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮದ ದಿವ್ಯ ಸಾನಿದ್ಯ ವಹಿಸಲಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಯನ್ನು ಸುರಭಿ ಗೋಶಾಲೆಯ ಅಧ್ಯಕ್ಷ ಮಧುಸೂದನ್ ನೆರವೇರಿಸಲಿದ್ದಾರೆ. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೀರ್ತಿ ಸುರೇಶ್, ಎಪಿಎಂಸಿ ಸದಸ್ಯ ಬಸವರಾಜು, ಡಿಡಿಪಿಐ ರೇವಣಸಿದ್ದಪ್ಪ, ಬಿಇಓ ರಂಗಪ್ಪ, ಮಕ್ಕಳ ತಜ್ಞ ಡಾಕ್ಟರ್ ಶಿವಾನಂದ ನಾಯಕ್, ಮೆಡುಮಾ ಅಧ್ಯಕ್ಷ ಭಾಸ್ಕರ್ ರೆಡ್ಡಿ, ವೃತ್ತ ನಿರೀಕ್ಷಕ ಪ್ರಭಾಕರ್, ತಾ.ಪಂ. ಸದಸ್ಯೆ ಗೀತಾ ಬಸವರಾಜು ಹಾಗೂ ಸಾರ್ವಜನಿಕರು ಭಾಗವಹಿಸಲಿದ್ದಾರೆ ಎಂದಿದ್ದಾರೆ.