ಬೆಂಗಳೂರು: ಬೆಂಗಳೂರು ನಗರದಲ್ಲಿ ಬುಧವಾರ ಮಧ್ಯಾಹ್ನ ಜನರು ಬೆಚ್ವಿ ಬೀಳಿಸುವಂತೆ ಕೇಳಿಸಿದ ಸದ್ದು ಭೂಕಂಪನ ಎಂದು ಹೆದರಿ ಜನರು ಬೆಚ್ಚಿ ಬಿದ್ದಿದ್ದಾರೆ.
ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಕಲ್ಯಾಣ ನಗರ, ಎಂ.ಜಿ ರಸ್ತೆ, ಮಾರತ್ತಹಳ್ಳಿ, ವೈಟ್‌ಫೀಲ್ಡ್, ಸರ್ಜಾಪುರ, ಎಲೆಕ್ಟ್ರೋನಿಕ್ ಸಿಟಿ, ಹೆಬ್ಬಗೋಡಿವರೆಗೂ ಈ ಅನುಭವ ಆಗಿದೆ ಎಂದು ಅಲ್ಲಿನ ಜನರು ಹೇಳಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲೂ ಜನರು ಶಬ್ದ ದ ಬಗ್ಗೆ ಬರೆದುಕೊಂಡಿದ್ದಾರೆ.
ಹಲವರು ಭೂಕಂಪನ ಎಂದು ಭಯ ವ್ಯಕ್ತಪಡಿಸಿದ್ದಾರೆ.
ಈ ಭಾರೀ ಸದ್ದಿನ ಬಗ್ಗೆ ಸರಿಯಾದ ಮಾಹಿತಿ ಸಿಕ್ಕಿಲ್ಲ. ಏನಿರಬಹುದು ಎಂಬ ತನಿಖೆ ಮುಂದುವರೆದಿದೆ.
ಯಾವುದೇ ಅನಾಹುತ ಆಗಿಲ್ಲ. ಶಬ್ದ ಎಲ್ಲಿಂದ ಬಂತು ಎಂಬ ಬಗ್ಗೆ ಪರಿಶೀಲನೆ ನಡೆದಿದೆ ಎಂದು ಡಿಸಿಪಿ ಅನುಚೇತ್ ಹೇಳಿದ್ದಾರೆ.
ರಿಯಾಕ್ಟರ್ ಮಾಪನದಲ್ಲಿ ಭೂಮಿ ಕಂಪಿಸಿರುವ ಬಗ್ಗೆ ವರದಿಯಾಗಿಲ್ಲ. ಹೀಗಾಗಿ ಭೂಕಂಪನ ಅಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕೆಲವರು ಬಾಂಬ್ ಸ್ಪೋಟ ಸಂಭವಿಸಿದ ಶಬ್ದದಂತಿತ್ತು ಎಂದು ಕೆಲವರು ಗಾಬರಿ ಬಿದಿದ್ದಾರೆ.