ಜಸ್ಟ್ ನ್ಯೂಸ್

ಬೆಂಗಳೂರು ಕೇಂದ್ರ ವಿ.ವಿ.ಕುಲಸಚಿವರಾಗಿ ಡಾ.ರಮೇಶ್ ನೇಮಕ

ಡಾ.ರಾಜಶೇಖರ ಕೋಠಿ


ಮಂಡ್ಯ: ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಸಚಿವರಾಗಿದ್ದ ಡಾ.ರಮೇಶ್ ಅವರೀಗ ಬೆಂಗಳೂರು ಕೇಂದ್ರ ವಿ.ವಿ.ಯ ಮೌಲ್ಯಮಾಪನ ಕುಲಸಚಿವರು.

ಶಿವಮೊಗ್ಗದ ಸಮಾಜಶಾಸ್ತ್ರ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಪ್ರೊಫೆಸರ್ ಆಗಿದ್ದ ಅವರು ತುಮಕೂರು ವಿ.ವಿಯ MSW ಸ್ನಾತಕೋತ್ತರ ಅಧ್ಯಯನ ಕೇಂದ್ರವನ್ನು ಕಟ್ಟಿ ಬೆಳೆಸಿದವರು.

ಮ‌ೂಲತಃ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಗೊಲ್ಲಹಳ್ಳಿಯ ಶ್ರೀಮತಿ ಚಿಕ್ಕಮ್ಮ ಮತ್ತು ಭದ್ರಗಿರಯ್ಯನವರ ಹಿರಿಯ ಪುತ್ರರಾದ *ಪ್ರೊ.ಬಿ.ರಮೇಶ್ ರವರು* ತಮ್ಮ ಬಾಲ್ಯದಿಂದಲೂ ಜೀವಪರ,ಜನಪರ ಆಲೋಚನೆ ಹೊಂದಿರುವ ಸ್ನೇಹ ಜೀವಿ.

ಜ್ಞಾನಭಾರತಿ ಕ್ಯಾಂಪಸ್ ಮೂಲಕ ತಮ್ಮ ವ್ಯಕ್ತಿತ್ವವನ್ನು ಹೆಚ್ಚು ವಿಸ್ತರಿಸಿಕೊಂಡು ಭರತ ಭೂಮಿಯ ಮಹಾನ್ ಸಾಮಾಜಿಕ ಸುಧಾರಕರ ಜೀವನದ ಮೌಲ್ಯವನ್ನು ಅಕ್ಷರಶಃ ತಮ್ಮ ಬದುಕಿಗೆ ಅಳವಡಿಸಿಕೊಂಡು ವಿದ್ಯಾರ್ಥಿ ಯುವ ಮಿತ್ರರಿಗೆ ನಾಯಕತ್ವದ ಗುಣಗಳನ್ನು ರೊಪಿಸಿ,ಜೀವನೋಪಾಯದ ಮಾರ್ಗಗಳನ್ನು ಕಲ್ಪಿಸುವಲ್ಲಿ ಇವರ ಕೊಡುಗೆ ಅಪಾರ.

ಅಷ್ಟು ಮಾತ್ರವಲ್ಲದೆ ತುಮಕೂರು ವಿಶ್ವವಿದ್ಯಾಲಯದ ಸಮಾಜಕಾರ್ಯ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಅದ್ಯಯನ ಕೇಂದ್ರದ ನಿರ್ದೇಶಕರಾಗಿ ಪ್ರಮಾಣೀಕವಾಗಿ ಮತ್ತು ದಕ್ಷತೆಯಿಂದ ಹತ್ತು ಹಲವು ರಚನಾತ್ಮಕ ಯೋಜನೆಗಳನ್ನು ರೊಪಿಸಿ, ಯಶಸ್ವಿಯಾಗಿದ್ದಾರೆ.

ಇವರ ಸಾಮಾಜಿಕ ಕಳಕಳಿಯ ಸೇವೆಯನ್ನು ಗುರುತಿಸಿ ಕರ್ನಾಟಕ ರಾಜ್ಯ ಸರ್ಕಾರವು 2018 ರಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಸಚಿವರಾಗಿ (ಆಡಳಿತ) ನೇಮಕ ಮಾಡಿತು.

ತದನಂತರ ತಮ್ಮ ಪ್ರಾಧ್ಯಾಪಕ ವೃತ್ತಿ ಬದುಕಿನ ಮತ್ತು ಆಡಳಿತದ ಅನುಭವತ್ಮಾಕ ಜ್ಞಾನವನ್ನು ಯಶಸ್ವಿಯಾಗಿ ತಮಗೆ ನೀಡಿದ ಹುದ್ದೆಯನ್ನು ಅಧಿಕಾರವೆಂದು ಭಾವಿಸದೆ ಜವಾಬ್ದಾರಿ ಎಂದು ಅರಿತು ದಕ್ಷತೆಯಿಂದ ಮತ್ತು ಚಾಣಾಕ್ಷತನದಿಂದ ರಾಜ್ಯದ ಉದ್ದ-ಅಗಲಕ್ಕೂ ದೂರ ಶಿಕ್ಷಣವನ್ನು ಪ್ರಸರಣಗೂಳಿಸಿ ಕ.ರಾ.ಮು.ವಿವಿಯ ವಿಧ್ಯಾರ್ಥಿಗಳ, ಪ್ರಾಧ್ಯಾಪಕರ ಹಾಗೂ ಶಿಕ್ಷಕೇತರ ನೌಕರರ ಅಭ್ಯುದಯಕ್ಕೆ ದುಡಿದು ಎಲ್ಲರ ಪ್ರೀತಿ, ಸ್ನೇಹ, ವಿಶ್ವಾಸ ಗಳಿಸಿ, ವಿವಿಯ ಜನಮಾನಸದಲ್ಲಿ ಶಾಶ್ವತವಾದ ಸ್ಥಾನಗಳಿಸಿ ಯಶಸ್ವಿಯಾಗಿದ್ದಾರೆ.

ಈಗಿನ ಜವಾಬ್ದಾರಿಯನ್ನು ಉತ್ತಮವಾಗಿ ನಿಭಾಯಿಸಲಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ.

Comment here