ತುಮಕೂರ್ ಲೈವ್

ಮಗನೇ ಅಲ್ಲದವನ ಸಾಲ ತೀರಿಸುವಂತೆ ಬ್ಯಾಂಕ್ ಖಾತೆ ಸ್ಥಗಿತಗೊಳಿಸಿದ್ದ ಎಸ್ ಬಿಐ ಬ್ಯಾಂಕಿಗೆ ದುಬಾರಿ ದಂಡ

ತುಮಕೂರು:  ಮಗನೇ ಅಲ್ಲದವನ ಸಾಲ ತೀರಿಸುವಂತೆ ಸಿದ್ಧಾರ್ಥ ಕಾಲೇಜಿನ ನಿವೃತ್ತ ಆಡಳಿತಾಧಿಕಾರಿ ನರಸಿಂಹಮೂರ್ತಿ ಅವರ ಬ್ಯಾಂಕ್ ಖಾತೆಯ ಮೇಲೆ ನಿರ್ಬಂಧ ಹೇರಿದ್ದ ತುಮಕೂರು ನಗರದ ಎಸ್ ಬಿಐ ಬ್ಯಾಂಕ್  ಬ್ಯಾಂಕ್  ಈಗ ದಂಡ ಕಟ್ಟುವಂತಾಗಿದೆ,!

ಸಿದ್ಧಾರ್ಥ ಎಂಜಿನಿಯರಿಂಗ್ ಕಾಲೇಜಿನ ನಿವೃತ್ತ ಆಡಳಿತಾಧಿಕಾರ ಸಿ.ಎನ್.ನರಸಿಂಹಮೂರ್ತಿ ಅವರು ಉಳಿತಾಯ ಖಾತೆಯಿಂದ ಹಣ ಪಡೆಯದಂತೆ  ನಿರ್ಬಂಧ ಹೇರಿದ್ದ ತುಮಕೂರು ನಗರದ  ಸಿದ್ದಗಂಗಾ ಬಡಾವಣೆಯ ಸ್ಟೇಟ್ ಬ್ಯಾಂಕ್ ಇಂಡಿಯಾ ಶಾಖೆಗೆ  ಜಿಲ್ಲಾ ಗ್ರಾಹಕರ  ವ್ಯಾಜ್ಯಗಳ ಪರಿಹಾರ ವೇದಿಕೆ ದಂಡ ವಿಧಿಸಿ ಆದೇಶಿಸಿದೆ.

ಪ್ರಕರಣದ ವಿಚಾರಣೆ ನಡೆಸಿದ ವೇದಿಕೆಯ ಅಧ್ಯಕ್ಷರಾದ ಟಿ.ಶ್ರೀಕಂಠ ಹಾಗೂ ಸದಸ್ಯ ಬಾಲಕೃಷ್ಣ  ವಿ.ಮಸಳಿ ಅವರು ಈ ಆದೇಶ ನೀಡಿದ್ದಾರೆ. ವಕೀಲರಾದ ಎಸ್.ರಮೇಶ್ ಅವರು  ಸಿ.ಎನ್.ನರಸಿಂಹಮೂರ್ತಿ ಪರವಾಗಿ ವಾದ ಮಂಡಿಸಿದ್ದರು.

ಪ್ರಕರಣದ ಹಿನ್ನೆಲೆ ಏನು: ಪಿರ್ಯಾದಿದಾರರಾದ .ನರಸಿಂಹಮೂರ್ತಿ ಅವರು ಬ್ಯಾಂಕ್ ಶಾಖೆಯಲ್ಲಿ ಮೂವತ್ತು ವರ್ಷಗಳಿಂದ ಖಾತೆ ಹೊಂದಿದ್ದರು. ಅವರ ಸೇವಾವಧಿಯಲ್ಲಿನ ಸಂಬಳ ಮತ್ತು ನಿವೃತ್ತರಾದ ಬಳಿಕ ನಿವೃತ್ತಿ ವೇತನದ ಹಣ ಈ ಖಾತೆಗೆ ಗಮೆ ಆಗುತ್ತಿತ್ತು.

ಕಳೆದ ವರ್ಷ ಡಿಸೆಂಬರ್ ತಿಂಗಳಿನಲ್ಲಿ ಬ್ಯಾಂಕ್ ಮ್ಯಾನೇಜರ್ ಯಾವುದೇ ಸೂಚನೆ, ಕಾರಣ ನೀಡದೇ ನರಸಿಂಹಮೂರ್ತಿ ಅವರ ವಹಿವಾಟು ನಡೆಸದಂತೆ ನಿರ್ಬಂಧ ಹೇರಿದ್ದರು.  ಖಾತೆಗೆ ಪ್ರತಿ ತಿಂಗಳು ನಿವೃತ್ತಿ ವೇತನದ ಹಣ ಜಮೆ ಆಗುತ್ತಿದ್ದರು, ಮೂರು ಲಕ್ಷಕ್ಕೂ ಅಧಿಕ ಹಣ ಖಾತೆಯಲ್ಲಿದ್ದರೂ ಹಣ ವಾಪಸ್ ಕೊಡದಂತೆ ತಡೆ ಹಿಡಿದಿದ್ದರು. ಇದಾದ ನಂತರ  ಅವರು ತಮ್ಮ ವಕೀಲರಾದ ಎಸ್.ರಮೇಶ್ ಅವರ ಮೂಲಕ  ಬ್ಯಾಂಕ್ ವ್ಯವಸ್ಥಾಪಕರಿಗೆ ನೋಟಿಸ್ ನೀಡಿದ್ದರು,

ಲೀಗಸ್ ನೋಟಿಸ್ ನೀಡಿದ ಬಳಿಕವೂ ಇದಕ್ಕೆ ಮ್ಯಾನೇಜರ್ ಉತ್ತರಿಸಿರಲಿಲ್ಲ. ಅಲ್ಲದೇ ಹಣ ತೆಗೆಯಲು ಅವಕಾಶ ನೀಡಿರಲಿಲ್ಲ. ಹೀಗಾಗಿ ಜಿಲ್ಲಾ ಗ್ರಾಹಕರ ವೇದಿಕೆಯಲ್ಲಿ ದೂರು ದಾಖಲಿಸಲಾಗಿತ್ತು. ದೂರು ದಾಖಲಾದ ಬಳಿಕ ನರಸಿಂಹಮೂರ್ತಿ ಅವರ ಮಗ ಮೋಹನ್ ಎಂಬಾತ ಬ್ಯಾಂಕ್ ಶಾಖೆಯಲ್ಲಿ ಸಾಲ ಪಡೆದಿದ್ದು, ಸಾಲ ಕಟ್ಟಿಲ್ಲ ಎಂದು ಬ್ಯಾಂಕ್ ವಾದಿಸಿತ್ತು. ಆದರೆ ನರಸಿಂಹಮೂರ್ತಿ ಅವರು ಪರ ವಾದಿಸಿದ ವಕೀಲ ಎಸ್. ರಮೇಶ್ ಅವರು ನರಸಿಂಹಮೂರ್ತಿ ಅವರಿಗೆ ಮೋಹನ್ ಎಂಬ ಹೆಸರಿನ ಮಗನೇ ಇಲ್ಲ. ಅವರಿಗೆ ಮೂವರು ಮಕ್ಕಳಿದ್ದು., ಅವರು ಹೆಸರುಗಳು ಬೇರೆ ಇವೆ, ಅವರ್ಯಾರು ಸಾಲ ಪಡೆದಿಲ್ಲ ಎಂದು ಹೇಳಿದ್ದರು.

ಮೋಹನ್ ಅವರು ನರಸಿಂಹಮೂರ್ತಿ ಮಗ ಎಂದು ಸಾಬೀತುಪಡಿಸಲು ಬ್ಯಾಂಕ್ ವಿಫಲವಾದ ಹಿನ್ನೆಲೆಯಲ್ಲಿ  67 ಸಾವಿರ ದಂಡ ಹಾಗೂ 10 ಸಾವಿರ ರೂಪಾಯಿ ದಾವೆ ವೆಚ್ಚವಾಗಿ ನೀಡುವಂತೆ ಆದೇಶಿಸಿದೆ. ಅಲ್ಲದೇ ಕಳೆದ ಡಿಸೆಂಬರ್ ತಿಂಗಳಿಂದ ಈ ವರ್ಷದ ನವೆಂಬರ್ ವರೆಗೂ ದಿನದವರೆಗೆ ಶೇ 9ರಷ್ಟು ಬಡ್ಡಿ ಸಮೇತ ಪಾವತಿಸುವಂತೆ ಆದೇಶಿಸಿದೆ. ಆದೇಶಕ್ಕೆ ಪೂರಕವಾಗಿ ಕೇಶವ ಚಂದ್ ವರ್ಸ್ ಸ್ ಶಿಲ್ಲಾಂಗ್ ಬ್ಯಾಂಕ್ ದಾವೆಯಲ್ಲಿ ಸುಪ್ರೀಂ ಕೋರ್ಟ್  ತೀರ್ಪನ್ನು ಉಲ್ಲೇಖಿಸಿದೆ.

ಬ್ಯಾಂಕ್ ನವರು ಉಳಿತಾಯ ಖಾತೆಯನ್ನು ಚಾಲ್ತಿಯಲ್ಲಿಡಬೇಕು. ತಪ್ಪಿದ್ದಲ್ಲಿ ಚಾಲ್ತಿಯಲ್ಲಿಡುವ ತನಕ ದಿನ ಒಂದಕ್ಕೆ  200 ರೂಪಾಯಿಯಂತೆ ದಂಡ ಪಾವತಿಸಲು ಬದ್ಧರಾಗಿರುತ್ತಾರೆ ಎಂದು  ಆದೇಶದಲ್ಲಿ ತಿಳಿಸಿದೆ.

Comment here