ಜಸ್ಟ್ ನ್ಯೂಸ್

ಡಿಟೆನ್ಶನ್‌ ಸೆಂಟರ್ ನಲ್ಲಿ ಅವಕಾಶ

ಬೆಂಗಳೂರು: ಜೈಲಿನಿಂದ ಬಿಡುಗಡೆಯಾಗುವ  ವಿದೇಶಿ ಅಕ್ರಮ ನೆಲಸಿಗರಿಗೆ ಡಿಟೆನ್ಶನ್‌ ಸೆಂಟರ್ ನಲ್ಲಿ ಇರಲು ಅವಕಾಶ ಕಲ್ಪಿಸಲಾಗುವುದು ಎಂದು ರಾಜ್ಯ ಸರ್ಕಾರ ಹೈಕೋರ್ಟ್ ಗೆ ಪ್ರಮಾಣ ಪತ್ರ ಸಲ್ಲಿಸಿದೆ.

ಬಾಂಗ್ಲಾದ ಬಾಬುಲ್ ಖಾನ್ ಹಾಗೂ ತಾನಿಯಾ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.‌ ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್‌ ವಿಚಾರಣೆ ವೇಳೆ ಖುದ್ದು ಹಾಜರಿದ್ದು, ಈ ಕುರಿತಂತೆ ನ್ಯಾಯಪೀಠಕ್ಕೆ ಪ್ರಮಾಣ ಪತ್ರ ಸಲ್ಲಿಸಿದರು.

ಬೆಂಗಳೂರು ಉತ್ತರ ತಾಲ್ಲೂಕಿನ ಸೊಂಡೇಕೊಪ್ಪದಲ್ಲಿ  ಡಿಟೆನ್ಷನ್ ಸೆಂಟರ್ ಗೆ ಕಟ್ಟಡ ಗುರುತಿಸಲಾಗಿದೆ. ಈ ಕೇಂದ್ರ 2020ರ ಜನವರಿ 1ರಿಂದ ಕಾರ್ಯಾರಂಭ ಮಾಡಲಿದೆ ಎಂದು  ತಿಳಿಸಲಾಗಿದೆ.

Comment here