Friday, October 4, 2024
Google search engine
Homeಜಸ್ಟ್ ನ್ಯೂಸ್ಮದಲೂರು ಕೆರೆಗೆ ಹೇಮಾವತಿ ನೀರು; ಸಿಎಂ ಒಪ್ಪಿದ್ದೇಕೆ? ಇಲ್ಲಿದೆ ಅದರ ಕರುಣಾಜನಕ ಕಥೆ

ಮದಲೂರು ಕೆರೆಗೆ ಹೇಮಾವತಿ ನೀರು; ಸಿಎಂ ಒಪ್ಪಿದ್ದೇಕೆ? ಇಲ್ಲಿದೆ ಅದರ ಕರುಣಾಜನಕ ಕಥೆ

ಶಿರಾ ತಾಲ್ಲೂಕಿನ ಮದಲೂರು ಕೆರೆಗೆ ಹೇಮಾವತಿ ನೀರು ಹರಿಸಲು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಸುರೇಶಗೌಡ ಅವರ ಪ್ರಯತ್ನಕ್ಕೆ ತಾಲ್ಲೂಕಿನಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ತಾಲ್ಲೂಕಿನ ಜನರು ಅನುಭವಿಸುತ್ತಿರುವ ಕಷ್ಟವನ್ನು ಮುಖ್ಯಮಂತ್ರಿ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದೆ ಅವರು ನೀರು ಬಿಡುವ ಆದೇಶ ಮಾಡಲು ಕಾರಣವಾಗುತ್ತಿದೆ. ಹಾಗಾದರೆ ಆ ಪತ್ರದ ಡೀಟೈಲ್ಸ್ ಇಲ್ಲಿದೆ ನೋಡಿ.


ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪಜಿ ಅವರಿಗೆ

ಕನ್ನಡ ನಾಡು ಕಂಡ ಅತ್ಯಂತ ಜನಪ್ರಿಯ, ರೈತರ ಪರವಾದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪಜಿ ಅವರಿಗೆ ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ಜನರು ಮಾಡುತ್ತಿರುವ ಮನವಿ ಇದು.

ಬರದ ನಾಡು ಎಂದೇ ಖ್ಯಾತಿಗಳಿಸಿರುವ ಶಿರಾ ಶೇಂಗಾಕ್ಕೂ ಖ್ಯಾತಿಗಳಿಸಿದೆ. ಆದರ ಜತೆಗೆ ಜಿಲ್ಲೆಯಲ್ಲೇ ಅತಿ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿರುವ ತಾಲ್ಲೂಕು ಆಗಿದೆ.
ಎಲ್ಲಿ ನೋಡಿದರಲ್ಲಿ ಒಣಗಿದ ತೋಟಗಳು, ಬಡಕಲು ದನ ಕರುಗಳೇ ಕಾಣುತ್ತವೆ. ಇದಕ್ಕೆಲ್ಲ ಕಾರಣ ಬರ ಹಾಗೂ ನದಿ ನೀರಿನ ಹಂಚಿಕೆಯಲ್ಲಿನ ತಾರತಮ್ಯ.

ಶಿರಾದ ಮದಲೂರು ಕೆರೆಗೆ ನೀರು ಬಂದರೆ ಅರ್ಧ ತಾಲ್ಲೂಕು ನಂದನವನ ಆಗಲಿದೆ. ಅತಿ ದೊಡ್ಡ ಕೆರೆಯಾದ ಇದು ಅಕ್ರಮ ಮರಳು ಗಣಿಗಾರಿಕೆಗೆ ತುತ್ತಾಗಿ ಇಡೀ ಅರ್ಧ ತಾಲ್ಲೂಕಿನ ಅಂತರ್ಜಲವೇ ಬಸಿದು ಹೋಗಿದೆ. ಈಗ ಇಲ್ಲಿನ ಜನರ, ಜೀವನಾಡಿಗಳ ಬದುಕು ನಿಮ್ಮ ನಿರ್ಧಾರದ ಮೇಲೆ ನಿಂತಿದೆ.

ಮದಲೂರು ಕೆರೆಗೆ ಹೇಮಾವತಿಯಿಂದ ಯಾವುದೇ ನೀರು ಹಂಚಿಕೆಯಾಗಿಲ್ಲ.‌ಈ ಸಲ ಹೇಮಾವತಿ ಜಲಾಶಯ, ಕಬಿಬಿ, ಕೆ.ಆರ್ ಎಸ್ ಜಲಾಶಯಗಳು ತುಂಬಿ ತುಳುಕುತ್ತಿವೆ. ತುಮಕೂರು ಜಿಲ್ಲೆಗೆ ಈಗಾಗಲೇ ಬೇಸಿಗೆಯಲ್ಲೇ ಹೇಮಾವತಿ ನೀರು ಬಿಡಲಾಗಿದೆ. ತುಮಕೂರಿಗೆ ಕುಡಿಯುವ ನೀರು ಒದಗಿಸುವ ಕೆರೆ ಹಾಗೂ ಕುಣಿಗಲ್, ಗುಬ್ಬಿ, ತಿಪಟೂರು ಕೆರೆಗಳನ್ನು ತುಂಬಿಸಲಾಗಿದೆ. ಈ ಸಲ ಜಿಲ್ಲೆಗೆ ಬೇಕಾದುದ್ದಕ್ಕಿಂತ ಹೆಚ್ಚಾಗಿಯೇ ಹೇಮಾವತಿ ನೀರು ಹರಿಯುತ್ತಿದೆ.

ಜಿಲ್ಲೆಗೆ 24 ಟಿಎಂಸಿ ಅಡಿ ನೀರು ಹಂಚಿಕೆಯಾಗಿದ್ದು, ಇಷ್ಟು ನೀರಿನಿಂದ ಇಡೀ ಜಿಲ್ಲೆಯ ಎಲ್ಲ ಕೆರೆಗಳನ್ನು ತುಂಬಿಸಬಹುದು ಎಂದು ಪರಮಶಿವಯ್ಯ ಅವರ ಅಧ್ಯಯನ ವರದಿಯಲ್ಲೆ ಹೇಳಲಾಗಿದೆ. ಆದರೆ ರಾಜಕೀಯ ಕಾರಣಗಳಿಗಾಗಿ ಇಷ್ಟು ನೀರು ಜಿಲ್ಲೆಗೆ ಹರಿದೇ ಇಲ್ಲ.

ಹೇಮಾವತಿ ಹಾಗೂ ಜಿಲ್ಲೆಯ ಇತಿಹಾಸದಲ್ಲಿ ನೀವು ಮುಖ್ಯಮಂತ್ರಿಗಳಾದ ಬಳಿಕ ಇದೇ ಮೊದಲ ಸಲ ಬೇಸಿಗೆಯಲ್ಲೂ ನೀರು ಹರಿಸಿ ಕುಡಿಯುವ ನೀರಿನ‌ ಕೆರೆಗಳನ್ನು ತುಂಬಿಸಿದ್ದೀರಿ. ಈಗ ಮಳೆಗಾಲದಲ್ಲಿ ನೀರು ಯತೇಚ್ಛವಾಗಿ ಹರಿಯುತ್ತಿದೆ.

ಆದರೆ ಶಿರ ಮದಲೂರು ಕೆರೆಗೆ ಹೇಮಾವತಿ ನೀರು ಹಂಚಿಕೆಯಾಗದ ಕಾರಣ ನೀರು ಹರಿಸುತ್ತಿಲ್ಲ.
ಇಲ್ಲಿನ ಜನರ ಕಷ್ಟ, ಹನಿ ಕುಡಿಯುವ ನೀರಿಗೂ ಮಳಗಾಲದಲ್ಲೂ ಪಡುತ್ತಿರುವ ಪಾಡು, ಫ್ಲೋರೈಡ್ ಸಮಸ್ಯೆಯಿಂದ ಆಗುತ್ತಿರುವ ಊನತೆ ಇವುಗಳನ್ನೆಲ್ಲ ಮನಗಂಡು ಇದೊಂದು ಸಲ ವಿಶೇಷ ಪ್ರಕರಣವೆಂದು ಪರಿಗಣಿಸಿ ಮದಲೂರು ಕೆರೆಗೆ ನೀರು ಹರಿಸುವಂತೆ ಆದೇಶಿಸುವಂತೆ ಶಿರಾದ ರೈತರು, ಸಾಮಾನ್ಯ ಜನರು,‌ಮಕ್ಕಳು ಕೈ ಮುಗಿದು ಕೇಳಿಕೊಳ್ಳುತ್ತಿದ್ದೇವೆ.

ಹೇಮಾವತಿ ನೀರು ಹೆಚ್ಚಾಗಿ ಹರಿಯುತ್ತಿರುವುದರಿಂದ ತಾಲ್ಲೂಕಿನ ಜನರ ಜೀವದ ದೃಷ್ಟಿಯಿಂದ ಕೆರೆಗೆ 0.250 ಟಿಎಂಸಿಯಷ್ಟು ನೀರು ಹರಿಸಲು ಆದೇಶಿಸುವಂತೆ ಈ ಮೂಲಕ ಕೋರುತ್ತೇವೆ.
ಇದೊಂದು ಸಲ ಕೆರೆ ತುಂಬಿಸಿದರೆ ಆರೇಳು ವರ್ಷ ಅಂತರ್ಜಲ ಪೂರೈಕೆಯಾಗಲಿದೆ.‌ಈ ಮೂಲಕ ನಮ್ಮ ತಾಲ್ಲೂಕಿನ ಅನ್ನದಾತ, ಜೀವದಾತ ಆಗಬೇಕು ಎಂದು ತಮ್ಮಲ್ಲಿ ಹೃದಯತುಂಬಿ ಮನವಿ ಮಾಡಿಕೊಳ್ಳುತ್ತಿದ್ದೇವೆ.

ನೀರಿನ ಸಮಸ್ಯೆಯ ಕಾರಣದಿಂದಲೇ ತಾಲ್ಲೂಕಿನಲ್ಲಿ ಬಡತನ ಮಗ್ಗಲು ಮುರಿದು ಬಿದ್ದಿದೆ. ಗುಳೇ ಹೋಗುವವರ ಸಂಖ್ಯೆ ಪ್ರತಿ ವರ್ಷವೂ ದುಪ್ಪಟ್ಟಾಗುತ್ತಿದೆ. ಅರ್ಧ ದಲ್ಲೇ ಕಾಲೇಜು ಬಿಟ್ಟು ಬೆಂಗಳೂರಿನ ಹೋಟೆಲ್, ಬಾರ್ ಗಳನ್ನು ಪ್ರತಿ ವರ್ಷ ಸಾವಿರಾರು ವಿದ್ಯಾರ್ಥಿಗಳು ಹೋಗುತ್ತಿದ್ದಾರೆ. ಬಡತನದ ಕಾರಣದಿಂದಲೇ ಓದು ಬಿಟ್ಟು ಮದುವೆಯಾಗುವ ಹೆಣ್ಣು‌ ಮಕ್ಕಳನ್ನು ನೋಡಬೇಕಾಗಿದೆ. ಬೋರ್ ವೆಲ್ ಗಳು ಒಣಗಿ ಹಗ್ಗಕ್ಕೆ ಕೊರಳೊಡ್ಡುವ ರೈತರು ಹೆಚ್ಚುತ್ತಿದ್ದಾರೆ. ಸಾಲ ಹೆಚ್ಚಿ ಊರು,ಮನೆ ಬಿಟ್ಟವರು ಸಾವಿರಾರು ಜನರಿದ್ದಾರೆ. ಇವರಿಗೆಲ್ಲ ನೀವು ಭಗೀರಥನಂತೆ ಕೊಡುವ ಬೊಗಸೆ ನೀರು ಇಡೀ ಶಿರಾ ಜನರನ್ನು ಬದುಕಿಸಬಹುದು.

ಹೆಣ್ಣು ಮಕ್ಕಳ ಓದಿನ ಬಗ್ಗೆ ನಿಮಗೆ ಅತೀವ ಪ್ರೀತಿ ಇದೆ. ಈ ಹಿಂದೆ ನೀವು ಮುಖ್ಯಮಂತ್ರಿಗಳಾಗಿದ್ದಾಗ ಬಡತನದಲ್ಲಿ ಓದಿ‌ದ ಹುಡುಗಿಯೊಬ್ಬಳಿಗೆ ನೆರವಾಗಲು ಅಂದಿನ ಜಿಲ್ಲಾಧಿಕಾರಿಯನ್ನೇ ಅವರ ಮನೆಗೆ ಕಳುಹಿಸಿ ನಾಡಿನ ಹೆಣ್ಣು‌ ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬಿದವರು ನೀವು.

ಶಿರಾ ಹೆಣ್ಣು‌ಮಕ್ಕಳು ಬದುಕು ಹಸನಾಗಬೇಕಾದರೆ, ಅವರ ಓದು ಮುಂದುವರೆಯಬೇಕಾದರೆ ಅವರು ಅಪ್ಪಂದಿರ ತೋಟಗಳಲ್ಲಿ ನೀರು ಕಾಣಬೇಕು. ಇದಕ್ಕಾಗಿ ಮದಲೂರು, ಸಿರಾ, ಕಳ್ಳಂಬೆಳ್ಳ ಕೆರೆಗಳು ತುಂಬಬೇಕು. ತಾಲ್ಲೂಕಿನ ಹೆಣ್ಣು‌ಮಕ್ಕಳ ಕಷ್ಟಕ್ಕೆ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?