ಜೀವನದ ಮೂರು ಭಾಗವನ್ನು ನಾವು ಹಾಸಿಗೆಯಲ್ಲೆ ಕಳೆಯುತ್ತೇವೆ. ಇಂತ ಹಾಸಿಗೆ ಹೇಗಿರಬೇಕು ಎಂಬುದನ್ನೇ ನಾವು ಯೋಚಿಸುವುದಿಲ್ಲ.
ಕೆಲಸ ಮಾಡುವವರು ಎಲ್ಲಿ ಮಲಗಿದರೂ ಅಲ್ಲಿಯೇ ನಿದ್ದೆ ಮಾಡುತ್ತಾರೆ ಎನ್ನುತ್ತಾರೆ ಕೆಲವರು. ನಾವು ಮಲಗುವ ಹಾಸಿಗೆಗೂ, ಆರೋಗ್ಯ ಕ್ಕೂ ಸಂಬಂಧ ಇದೆ ಎನ್ನುತ್ತಾರೆ ನರರೋಗ ತಜ್ಞರು ಹಾಗೂ ಮೂಳೆ ತಜ್ಞರು.
ಹಾಸಿಗೆ ಸರಿ ಇಲ್ಲದಿದ್ದರೆ ಬೆನ್ನು ನೋವು, ಮಂಡಿ ನೋವು, ಮೈಕೈ ನೋವು ಬರಬಹುದು.ಮಕ್ಕಳಿಗೆ ಅಲರ್ಜಿ,ಆಸ್ತಮಾವು ತಗುಲಬಹುದು.
ಹಾಸಿಗೆ ಯಾವುದಿರಬೇಕು, ಹೇಗಿರಬೇಕು ಎಂದು ಕೆಲವರು ಚಿಂತಿಸುವುದೇ ಇಲ್ಲ. ಹಾಸಿಗೆ ಗೆ ಬಂಡವಾಳ ಹೂಡುವಾಗ ಎಚ್ಚರಿಕೆಯಿಂದ ಇರಬೇಕು. ಬಹಳ ಜೋಪಾನವಾಗಿ ಖರೀದಿಸಬೇಕು.
ಈಗ 3 ಲಕ್ಷ ರೂಪಾಯಿ ವರೆಗೂ ಹಾಸಿಗೆ ಗಳಿವೆ. ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು ಎಂಬ ಗಾದೆ ಮಾತೇ ಇದೆ. ಅದೇ ರೀತಿ ನಮ್ಮಲ್ಲಿ ಎಷ್ಟು ಹಣ ಇದೆಯೋ ಅಷ್ಟರಲ್ಲಿ ಉತ್ತಮ ಹಾಸಿಗೆ ಖರೀದಿಸುವ ಜಾಣ್ಮೆ ತೋರಬೇಕು.
ಯುರೋಪ್ ನಲ್ಲಿ ಹಾಸಿಗೆ ಕಲ್ಪನೆ ಮೊದಲಿಗೆ ಮೂಡಿತು. ಅಮೆರಿಕದಲ್ಲಿ ಹಾಸಿಗೆಗೆ ಹೆಚ್ಚಿನ ಮಹತ್ವ ಇದೆ. ಅಲ್ಲಿ ಹಾಸಿಗೆಗೆ ಇಪ್ಪತ್ತರಿಂದ ಇಪ್ಪತ್ತೈದು ವರ್ಷಗಳ ವರೆಗೂ ವಾರಂಟಿ ನೀಡುತ್ತವೆ ಅಲ್ಲಿನ ಹಾಸಿಗೆ ಕಂಪನಿಗಳು.
ಪ್ರಪಂಚದಲ್ಲಿ ಹಾಸಿಗೆ ಉದ್ಯಮ ಹುಲುಸಾಗಿ ಬೆಳೆಯುತ್ತಿದೆ. ಎಲ್ಲ ದೇಶಗಳಲ್ಲೂ ಉತ್ತಮವಾಗಿದೆ. ಹಲವು ದೇಶಗಳು ಹಾಸಿಗೆಗಳನ್ನು ಅಮದು ಮಾಡಿಕೊಳ್ಳುತ್ತಿವೆ.
ಒಂದು ಅಂದಾಜಿನ ಪ್ರಕಾರ ಭಾರತದಲ್ಲಿ ಹಾಸಿಗೆ ಉದ್ಯಮ 2022ರ ವೇಳೆಗೆ 2.22 ಬಿಲಿಯನ್ ಡಾಲರ್ ಮುಟ್ಟಲಿದೆ.
ಭಾರತದಲ್ಲಿ ಹತ್ತಿ, ನಾರಿನ ಹಾಸಿಗೆ ಪುರಾತನ ಕಾಲದಿಂದ ಬಳಕೆಯಲ್ಲಿದೆ. ಹತ್ತಿ, ನಾರಿನ ಹಾಸಿಗೆ ಆರೋಗ್ಯಕ್ಕೆ ಉತ್ತಮ ಎಂಬ ನಂಬಿಕೆ ಇದೆ. ಆದರೆ ಹತ್ತಿ, ನಾರಿನ ಹಾಸಿಗೆಗಳ ಬಾಳಿಕೆ ಅವಧಿ ತೀರಾ ಕಡಿಮೆ. ಸರಿಯಾಗಿ ನಿರ್ವಹಣೆ ಮಾಡದಿದ್ದರೆ ಬೆನ್ನು ನೋವಿಗೆ ಕಾರಣವಾಗಲಿವೆ.
ಹತ್ತಿ ಹಾಸಿಗೆಗೆ ಫಂಗಸ್ ಹೆಚ್ಚುವ ಸಾಧ್ಯತೆ ಹೆಚ್ಚು. ದೂಳು ಸೇರಿಕೊಂಡು ಅಲರ್ಜಿಗೂ ಕಾರಣವಾಗಲಿದೆ. ಬಹುತೇಕರ ಬೆನ್ನು ನೋವಿಗೆ ಹತ್ತಿ ಹಾಸಿಗೆ ಸರಿಯಾದ ನಿರ್ವಹಣೆ ಕೊರತೆ ಕಾರಣ.
ನಾರಿನ ಹಾಸಿಗೆ ಸರಿಯಾಗಿ ನಿರ್ವಹಣೆ ಮಾಡದಿದ್ದರೆ ರೋಗಕ್ಕೂ ರಹದಾರಿ ಆಗಬಹುದು.ಮಳೆಗಾಲದಲ್ಲಿ ಹತ್ತಿ ಹಾಸಿಗೆಯನ್ನು ಸ್ವಚ್ಛವಾಗಿಟ್ಟು ಕೊಳ್ಳಬೇಕು. ಬಿಸಿಲಿನಲ್ಲಿ ಒಣಗಿಸಬೇಕು. ಎರಡು ವರ್ಷಕ್ಕೊಮ್ಮೆಯಾದರೂ ಬಿಚ್ಚಿ ಹೊಲಿಸಬೇಕು.
ನವ ಮಾದರಿ ಹಾಸಿಗೆಗಳು ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದು
ರಬ್ಬರ್ ಸಿಂಥಟಿಕ್ ಹಾಸಿಗೆಗಳು, ಫೋಮ್ ಹಾಸಿಗೆಗಳು, ಸ್ಪ್ರಿಂಗ್ ಹಾಸಿಗೆಗಳು ಬೆನ್ನಿನ ಆರೋಗ್ಯದ ಕಾರಣದಿಂದ ಒಳ್ಳೆಯದು ಎನ್ನುತ್ತಾರೆ ವೈದ್ಯರು.
ಭಾರತದಲ್ಲಿ ಕರ್ನಾಲ್, ಡ್ಯೂಪ್ಲೆಕ್ಸ್ ಮತ್ತಿತರ ಕಂಪನಿ ಗಳ ಹಾಸಿಗೆಗಳು ಗಮನ ಸೆಳೆಯುತ್ತಿವೆ.
ಏನೇ ಆದರೂ ಹಾಸಿಗೆ ಕೊಳ್ಳುವ ಮುನ್ನ ಯೋಚಿಸಿ ಕೊಳ್ಳುವುದು ಒಳ್ಳೆಯದು.