ತುಳಸೀತನಯ
ಇದು ಮಾವಿನ ಹಣ್ಣಿನ ಕಾಲ. ಹಣ್ಣು ತಿಂದು ಓಟೆ ಬಿಸಾಕುವವರೇ ಹೆಚ್ಚು.
ಓಟೆ ಬಿಸಾಕುವ ಮುನ್ನ ಇದನ್ನೊಮ್ಮೆ ಪೂರ್ತಿ ಓದಿದರೆ ವಾಟೆಯೇ ಬೇಕು ಎಂದು ಮುಗಿ ಬೀಳುತ್ತೀರಿ.
ವಾಟೆಯಿಂದ ಒಂದೆರಡಲ್ಲ ಅನೇಕ ಅನುಕೂಲಗಳಿವೆ.
ನಮಗೆ ಕೆಲವೊಮ್ಮೆ ನಮ್ಮ ಸುತ್ತಮುತ್ತಲಿನ ಕೆಲವು ಸಣ್ಣ ವಿಷಯಗಳ ಬಗ್ಗೆ ತಿಳಿದಿರುವುದಿಲ್ಲ.
ನಮ್ಮ ಸುತ್ತಲಿನಲ್ಲಿರುವ ನೈಸರ್ಗಿಕ ವಸ್ತುಗಳಿಂದ ಅನೇಕ ಔಷದೀಯ ಗುಣಗಳಿವೆ. ಆದರೆ ಅಂತಹ ಎಷ್ಟೊ ವಸ್ತು ನಮ್ಮ ಕಣ್ಮುಂದೆ ಇದ್ದರೂ ಆ ಬಗ್ಗೆ ನಮಗೆ ಕಿಂಚಿತ್ತೂ ತಿಳಿದಿರುವುದಿಲ್ಲ.
ಅದರಲ್ಲಿ ಮಾವಿನ ಹಣ್ಣು ಎಷ್ಟು ಜನರಿಗೆ ಗೊತ್ತಿಲ್ಲ ಹೇಳಿ. ಎಲ್ಲರೂ ಕೂಡ ತುಂಬಾ ಇಷ್ಟಪಟ್ಟು ತಿನ್ನುತ್ತಾರೆ. ಅಷ್ಟೇ ಅಲ್ಲದೆ ಆಯುರ್ವೇದದಲ್ಲಿ ಮಾವಿನ ಮರಕ್ಕೆ ಮತ್ತು ಮಾವಿನ ಎಲೆ ತುಂಬಾ ಪ್ರಾಮುಖ್ಯತೆ ಇದೆ.
ಹಾಗೆಯೇ ನಾವು ಮಾವಿನ ಹಣ್ಣನ್ನು ತಿಂದು ಅದರ ಗೊರಟೆ(ವಾಟೆ) ಎಸೆದು ಬಿಡುತ್ತೇವೆ. ಇದರಿಂದ ಎಷ್ಟೆಲ್ಲ ಉಪಯೋಗಗಳಿವೆ ಎಂಬುದನ್ನು ನಾವಿಂದು ತಿಳಿಯೋಣ. ನೀವು ಒಂದು ಮಾವಿನ ವಾಟೆ (ಗೊರಟೆ) ಇಂದ ನಿಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು.
ಮತ್ತು ನಿಮಗೆ ಏನಾದರೂ ಹೊಟ್ಟೆ ಸಮಸ್ಯೆ ಇದ್ದರೆ ಮತ್ತು ಕೂದಲು ಚೆನ್ನಾಗಿ ಬೆಳೆಯುವುದಕ್ಕೆ ಮತ್ತು ಕೂದಲು ಬಿಳಿ ಇದ್ದರೆ ಅದನ್ನು ಕಪ್ಪುಬಣ್ಣಕ್ಕೆ ತರಲು ಈ ಪದಾರ್ಥ ತುಂಬಾ ಸಹಾಯ ಮಾಡುತ್ತದೆ.
ಅದು ಹೇಗೆಂದರೆ ಮಾವಿನ ವಾಟೆ (ಗೊರಟೆ) ಬೀಜವನ್ನು ತೆಗೆದುಕೊಂಡು ನೆರಳಿನಲ್ಲಿ ಒಣಗಿಸಿ ಪುಡಿಯನ್ನು ಮಾಡಿಕೊಳ್ಳಿ.
ನಂತರ ಆ ಪುಡಿಯನ್ನು ತಿಂದು ಸ್ವಲ್ಪ ನೀರನ್ನು ಕುಡಿದರೆ ನಿಮ್ಮ ದೇಹದ ತೂಕವನ್ನು ಮತ್ತು ಬೊಜ್ಜನ್ನು ಕಡಿಮೆ ಮಾಡಿಕೊಳ್ಳಬಹುದು.
ಎರಡನೆಯದಾಗಿ ನಿಮ್ಮ ಕೂದಲು ಏನಾದರೂ ಉದುರುತ್ತಿದ್ದರೆ ಸ್ವಲ್ಪ ಪುಡಿಯ ಜೊತೆ ನೀರನ್ನು ಬೆರೆಸಿ ಪೇಸ್ಟ್ ರೀತಿಯಲ್ಲಿ ಮಾಡಿಕೊಂಡು ನಿಮ್ಮ ತಲೆಗೆ ಹಚ್ಚಿದರೆ ನಿಮ್ಮ ಕೂದಲು ಉದುರುವುದು ನಿಲ್ಲುತ್ತದೆ.
ನಂತರ ನಿಮ್ಮ ಕೂದಲು ಕಪ್ಪಾಗಿ ಆಗಬೇಕು ಅಂದರೆ ಸಾಸಿವೆ ಎಣ್ಣೆಯ ಜೊತೆ ನೀವು ಮಾವಿನ ವಾಟೆ ಬೀಜವನ್ನು ಹಾಕಿ ಒಂದು ವಾರ ಒಣಗಿಸಿ ತಲೆಗೆ ಹಚ್ಚಿದರೆ ನಿಮ್ಮ ಕೂದಲು ತುಂಬಾ ಚೆನ್ನಾಗಿ ಬೆಳೆಯುತ್ತದೆ.
ಮುಖದಲ್ಲಿ ಗುಳ್ಳೆಗಳು ಆಗಿದ್ದರೆ ಈ ಪುಡಿಯ ಜೊತೆ ಸ್ವಲ್ಪ ಟೊಮೊಟೊವನ್ನು ಹಾಕಿ ಪೇಸ್ಟ್ ಮಾಡಿಕೊಂಡು ಮುಖಕ್ಕೆ ಹಚ್ಚಿದರೆ ನಿಮ್ಮ ಮುಖದಲ್ಲಿರುವ ಗುಳ್ಳೆಗಳು ಬೇಗನೆ ವಾಸಿಯಾಗುತ್ತದೆ.