ಜಸ್ಟ್ ನ್ಯೂಸ್

ಯುವಕನ ಹತ್ಯೆ

ಕೊರಟಗೆರೆ:ಯುವಕನೊಬ್ಬನನ್ನು ಲಾಂಗು, ಮಚ್ಚುಗಳಿಂದ ಬರ್ಬರವಾಗಿ ಕೊಚ್ಚಿಕೊಲೆ ಮಾಡಿರುವ ಘಟನೆ ದಾಬಸ್ ಪೇಟೆ, ಕೊರಟಗೆರೆ ಮುಖ್ಯರಸ್ತೆಯ ಜಿ. ನಾಗೇನಹಳ್ಳಿ ಬಳಿ ಗುರುವಾರ ಸಂಜೆ 7 ಗಂಟೆ ಸುಮಾರಿನಲ್ಲಿ ನಡೆದಿದೆ.

ಮಧುಗಿರಿ ತಾಲ್ಲೂಕಿನ‌ ಮಿಡಿಗೇಶಿ ಹೋಬಳಿಯ ಬಿದರಗೆರೆ ವಾಸಿ ಶ್ರೀನಿವಾಸ(25)ಕೊಲೆಗೀಡಾದ ಯುವಕ.

ಶ್ರೀನಿವಾಸ ಬೆಂಗಳೂರಿನ ಬಾಗಲಗುಂಟೆಯಲ್ಲಿ ಹಣ್ಣಿನ ವ್ಯಾಪಾರ ಮಾಡುತ್ತಿದ್ದರು. ಬಾಗಲಗುಂಟೆಯ ಅಕ್ಷಿತ ಎಂಬ ಯುವತಿಯನ್ನು ಪ್ರೀತಿಸುತ್ತಿದ್ದರು. ಐದು ತಿಂಗಳ ಹಿಂದೆ ಮದುವೆ ನಿಶ್ಚಯವಾಗಿತ್ತು ಎನ್ನಲಾಗಿದೆ.

ಇಬ್ಬರೂ ಸ್ಕಾರ್ಪಿಯೋ ವಾಹನದಲ್ಲಿ ಬಿದರಗೆರೆಗೆ ಬಂದು ವಾಪಸ್ ಬೆಂಗಳೂರಿಗೆ ಹೋಗುತ್ತಿದ್ದಾಗ ಮತ್ತೊಂದು ಸ್ಕಾರ್ಪಿಯೋ ವಾಹನದಲ್ಲಿ ಬಂದ ಆರು ಜನರ ಗುಂಪು ಕಾರನ್ನು ಅಡ್ಡಗಟ್ಟಿ ಲಾಂಗು ಮಚ್ಚುಗಳಿಂದ ಶ್ರೀನಿವಾಸನನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದೆ.

ಈ ವೇಳೆ ಅಕ್ಷಿತ ಕಾರಿನಲ್ಲಿಯೇ ಇದ್ದರು. ತರಕಾರಿ, ಹಣ್ಣು ವ್ಯಾಪಾರ ವೈಶಮ್ಯ ಕೊಲೆಗೆ ಕಾರಣ ಎನ್ನಲಾಗಿದೆ. ಸ್ನೇಹಿತರೆ ಕೊಲೆ‌ಮಾಡಿರುವುದಾಗಿ ತಿಳಿದು ಬಂದಿದೆ. ಸ್ಥಳಕ್ಕೆ ಡಿವೈಎಸ್ಪಿ ಎಂ.ಪ್ರವೀಣ್, ಸಿಪಿಐ ಎಫ್.ಕೆ.ನದಾಪ್ ಭೇಟಿ ನೀಡಿದ್ದರು.

Comment here