ಜಸ್ಟ್ ನ್ಯೂಸ್

ರಾಜಸ್ಥಾನ; ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿಗೆ ಮುಖಭಂಗ

ರಾಜಸ್ಥಾನ; ರಾಜ್ಯದಲ್ಲಿ ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅತಿ ಹೆಚ್ಚು ಸ್ತಾನಗಳಲ್ಲಿ ಗೆಲುವು ಸಾದಿಸಿ ಬಿಜೆಪಿ ಮುಖಭಂಗ ಅನುಭವಿಸಿದೆ.

ವಿಧಾನಸಭಾ ಚುನಾವಣೆಯ ಸೋಲಿನ ನಡುವೆ ಮತ್ತೆ ಹಿನ್ನಡೆ ಆಗಿರುವುದರಿಂದ ಪಕ್ಷ ಮುಜುಗರ ಅನುಭವಿಸುವಂತಾಗಿದೆ.

ಕಾಂಗ್ರೆಸ್ 961 ವಾರ್ಡ್ ಗಳಲ್ಲಿ ಗೆಲುವು ಸಾಧಿಸಿದ್ದರೆ, ಬಿಜೆಪಿ 737 ವಾರ್ಡ್ ಗಳಲ್ಲಿ ಜಯ ಗಳಿಸಿದೆ. 33 ಜಿಲ್ಲೆಗಳ 49 ನಗರ ಸ್ಥಳೀಯ ಸಂಸ್ಥೆಗಳಿಗೆ ಶನಿವಾರ ಚುನಾವಣೆ ನಡೆದಿತ್ತು. ಇಂದು ಮತ ಎಣಿಕೆ ನಡೆದು ಕಾಂಗ್ರೆಸ್ 32 ನಗರ ಸಭೆಗಳನ್ನು ತನ್ನದನ್ನಾಗಿಸಿಕೊಂಡಿದೆ.

ಬಿಜೆಪಿ ಕೇವಲ ನಾಲ್ಕು ನಗರ ಸಭೆಗಳಲ್ಲಿ ಅಧಿಕಾರಕ್ಕೆ ಬರಲು ಶಕ್ತವಾಗಿದೆ. ಪಕ್ಷೇತರರು 370ಕ್ಕೂ ಹೆಚ್ಚು ವಾರ್ಡ್ ಗಳಲ್ಲಿ ಗೆಲುವು ಸಾಧಿಸಿದ್ದಾರೆ.

ನಗರ ಸ್ಥಳೀಯ ಸಂಸ್ಥೆಗಳ ಫಲಿತಾಂಶದ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಜನತೆ ಸರ್ಕಾರದ ಪ್ರಗತಿ ನೋಡಿ ನಮಗೆ ಅಧಿಕಾರ ನೀಡಿದೆ. ಬಿಎಸ್ ಪಿ 16, ಸಿಪಿಎಂ 3 ಮತ್ತು ಎನ್.ಸಿಪಿ 2 ವಾರ್ಡ್ ಗಳಲ್ಲಿ ಗೆಲವು ಸಾಧಿಸಿವೆ ಎಂದು ಹೇಳಿದ್ದಾರೆ.

ಮೂರು ಮಹಾನಗರ ಪಾಲಿಕೆಗಳು, 28 ನಗರ ಪಾಲಿಕೆಗಳು ಮತ್ತು 18 ನಗರ ಪರಿಷತ್ ಗಳಿಗೆ ಮತದಾನ ನಡೆದು ಇಂದು ಫಲಿತಾಂಶ ಹೊರಬಿದ್ದಿದೆ.

Comment here