Wednesday, May 22, 2024
Google search engine
Homeಜಸ್ಟ್ ನ್ಯೂಸ್ರಾಜ್ಯ ವಿಜ್ಞಾನ ಪರಿಷತ್ ಗೆ ಚುನಾವಣೆ ;ನಾಗಾಲೋಟದಲ್ಲಿ ಈ ಬಸವರಾಜು ಬಣ

ರಾಜ್ಯ ವಿಜ್ಞಾನ ಪರಿಷತ್ ಗೆ ಚುನಾವಣೆ ;ನಾಗಾಲೋಟದಲ್ಲಿ ಈ ಬಸವರಾಜು ಬಣ

Publicstory.in: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಕಾರ್ಯಕಾರಿ ಸಮಿತಿಯ 24 ಸದಸ್ಯ ಸ್ಥಾನಗಳಿಗೆ ಫೆಬ್ರವರಿ 23 ರಂದು ಚುನಾವಣೆ ನಡೆಯಲಿದೆ.

ಪ್ರಗತಿಪರ ಆಲೋಚನೆಗಳು, ವೈಜ್ಞಾನಿಕತೆ, ವೈಚಾರಿಕತೆ ಮತ್ತು ಧರ್ಮಾಧಾರಿತ ಮೌಢ್ಯ, ಕಂದಾಚಾರ, ಸಂಪ್ರಾದಾಯ, ಅವೈಜ್ಞಾನಿಕತೆಯ ನಡುವೆ ಚುನಾವಣೆ ನಡೆಯಲಿದೆ. ಉಭಯ ಬಣಗಳು ರಾಜ್ಯಾದ್ಯಂತ ತಮ್ಮ ತಂಡಗಳ ಮೂಲಕ ಪ್ರಚಾರದಲ್ಲಿ ತೊಡಗಿವೆ.

ವಿಜ್ಞಾನ ಪರಿಷತ್ ಸದಸ್ಯರನ್ನು ನೇರವಾಗಿ ಸಂಪರ್ಕಿಸಿ ಮತ ಯಾಚಿಸುವುದು ಒಂದು ಕಡೆಯಾದರೆ ಮತ್ತೊಂದು ಕಡೆ ಸಾಮಾಜಿಕ ಜಾಲತಾಣಗಳಲ್ಲೂ ಪ್ರಚಾರ ಜೋರಾಗಿಯೇ ನಡೆದಿದೆ.

ಮೈಸೂರು ವಿಭಾಗದಲ್ಲಿ ಸ್ಪರ್ಧಿಸಿರುವ ಈ.ಬಸವರಾಜು ಒಂದು ಬಣದ ನೇತೃತ್ವ ವಹಿಸಿದ್ದು ಅವರ ನೇತೃತ್ವದ ತಂಡಗಳು ಪ್ರಚಾರದಲ್ಲಿ ಸಾಕಷ್ಟು ಮುಂದಿವೆ. ಈ ತಂಡಗಳು ತಮ್ಮ ವಿಭಾಗದಲ್ಲಿ ಪ್ರತಿಯೊಬ್ಬರನ್ನು ಭೇಟಿ ಮಾಡಿ, ಮೊಬೈಲ್ ಮೂಲಕ ಸಂಪರ್ಕಿಸಿ ಮತ ಯಾಚನೆ ಮಾಡುತ್ತಿದ್ದರೆ, ಗುರುನಂಜಯ್ಯ ನೇತೃತ್ವ ತಂಡ ಪ್ರಚಾರದಲ್ಲಿ ಹಿಂದೆ ಬಿದ್ದಿದೆ. ಈ ತಂಡ ದುರ್ಬಲವಾಗಿದ್ದು ಪ್ರಚಾರದಲ್ಲಿ ಅಷ್ಟೊಂದು ಆಸಕ್ತಿ ವಹಿಸುತ್ತಿಲ್ಲ ಎಂದು ಹೇಳಲಾಗುತ್ತಿದೆ.

ಬೆಂಗಳೂರು ವಿಭಾಗದದಲ್ಲಿ ಸ್ಪರ್ಧಿಸಿರುವ ಉದಯರತ್ನಕುಮಾರ್ ನೇತೃತ್ವದ ತಂಡದಲ್ಲಿ ಡಾ.ವೈ.ಸಿ. ಕಮಲ, ಎಂ.ಗುರುಸಿದ್ದಸ್ವಾಮಿ, ಎಂ.ಎಸ್.ಪರಮೇಶ್ವರಯ್ಯ, ಎಸ್.ಎಂ. ಲೋಕೇಶ್ವರಪ್ಪ, ಜಿ.ಎಂ. ಶಂಕರಮೂರ್ತಿ ಅವರಿದ್ದು ಅತ್ಯಂತ ಪ್ರಗತಿಪರ ಆಚಲೋನೆಗಳನ್ನು ಇಟ್ಟುಕೊಂಡು ಮುನ್ನಡೆಯುತ್ತಿದೆ.  ಈ ತಂಡದಲ್ಲಿರುವ ಬಹುತೇಕರು ವಿಜ್ಞಾನ ಚಳವಳಿಯಲ್ಲಿ ಸಾಕಷ್ಟು ಕೆಲಸ ಮಾಡಿರುವವರು.

ವಿಜ್ಞಾನ ಸಂಘಟನೆ ಮಾಡುವುದು, ಜನರಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವುದು, ಮೌಢ್ಯವನ್ನು ತೊಲಗಿಸುವಂತಹ ಹಲವು ಕಾರ್ಯಗಳಲ್ಲಿ ಈ ತಂಡ ಭಾಗಿಯಾಗಿದೆ.

ಮತ್ತೊಂದು ತಂಡದಲ್ಲಿ ಪಿ.ಎಸ್. ಕೌಶಿಕ್, ಎಂ.ಎಸ್. ಮುಷ್ಟೂರಪ್ಪ, ಶಿವಕುಮಾರ್, ಬಿ.ಎನ್.ಶ್ರೀನಾಥ್, ಎಚ್.ಎಸ್. ಟಿ ಸ್ವಾಮಿ, ಹುಲಿಕಲ್ ನಟರಾಜ್ ಇದ್ದು ಬಲಪಂಥೀಯ ವಿಚಾರಧಾರೆಯನ್ನು ಹೊಂದಿರುವ ತಂಡ ಇದಾಗಿದೆ. ಮೈಸೂರು ವಿಭಾಗದಲ್ಲಿ ಮರುವನಯ್ಯ, ನರೇಂದ್ರ ಮಂಜುನಾಥ, ಚಿಕ್ಕಸ್ವಾಮಿ, ಜಗದೀಶ್ ಇದ್ದರೆ,  ಇದೇ ತಂಡಕ್ಕೆ ಬೆಂಬಲವಾಗಿ ಕಲ್ಬುರ್ಗಿ ವಿಭಾಗದಲ್ಲಿ ಲಕ್ಕಪ್ಪ ಶೆಟ್ಟಿ, ಮಹಾರುದ್ರಪ್ಪ, ಗಿರೀಶ್ ಕಡ್ಲೇವಾಡ, ಕುಂಟೆಪ್ಪ ಗೌರಿಪುರ್, ವೀರೇಂದ್ರ ಪಾಟೀಲ್, ಗನತೆ ಇದ್ದಾರೆ. ಬೆಳಗಾವಿ ವಿಭಾಗದಲ್ಲಿ ಇದೇ ಗುಂಪಿನ ಡಾ.ಲಿಂಗರಾಜ ಅಂಗಡಿ, ಶಂಕರಪ್ಪ ತಿಮ್ಮಪ್ಪ ನಾಯಿಕ, ಸಿ.ಡಿ ಪಾಟೀಲ್, ಹುದ್ದಾರ್, ಮೀನಾಕ್ಷಿ ಶಿವಾನಂದ, ಕುಡಸೋಮಣ್ಣನವರ್ ಸೇರಿ ಆರು ಮಂದಿ ಕಣದಲ್ಲಿದ್ದಾರೆ. ಈ ತಂಡಗಳು ಅಷ್ಟೊಂದು ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿಲ್ಲ.

ಮೈಸೂರು ವಿಭಾಗದಲ್ಲಿ ಹಾಸನದಿಂದ ಸ್ಪರ್ಧಿಸಿರುವ ಈ. ಬಸವರಾಜು ಅವರ ತಂಡ ಪ್ರಚಾರದಲ್ಲಿ ಸಾಕಷ್ಟು ಮುಂದಿದ್ದು ಮತದಾರರನ್ನು ತನ್ನತ್ತ ಸೆಳೆದಿದೆ. ಕಳೆದ 40 ವರ್ಷಗಳಿಂದಲೂ ವಿಜ್ಞಾನ ಕ್ಷೇತ್ರದಲ್ಲಿ ಅಪಾರ ಕೆಲಸ ಮಾಡಿರುವ ಈ. ಬಸವರಾಜು ತಂಡವನ್ನು ಗೆಲ್ಲಿಸಲು ಕೂಡ ಮತದಾರರು ಮನಸ್ಸು ಮಾಡಿದ್ದಾರೆ. ಇವರ ತಂಡದಲ್ಲಿ ರಾಮಚಂದ್ರ ಶ್ರೀಮತಿ ಹರಿಪ್ರಸಾದ್, ಬಿ.ಜಿ.ಕೃಷ್ಣಮೂರ್ತಿರಾಜ್ ಅರಸ್, ಎ.ಎನ್. ಮಹೇಶ್ ಇದ್ದು ಇವರನ್ನು ಗೆಲ್ಲಿಸಲು ಮತದಾರರು ಸಾಕಷ್ಟು ಶ್ರಮ ಹಾಕುತ್ತಿದ್ದಾರೆ.

ಪಬ್ಲಿಕ್ ಸ್ಟೋರಿ.ಇನ್ ಜೊತೆ ಮಾತನಾಡಿದ ಈ.ಬಸವರಾಜು ನಾವು ರಾಜ್ಯದ ಎಲ್ಲಾ ವಿಭಾಗದಲ್ಲೂ ಸಂಪರ್ಕ ಇಟ್ಟುಕೊಂಡಿದ್ದೇವೆ. ಪ್ರತಿದಿನವೂ ನಡೆಯುತ್ತಿರುವ ಬೆಳವಣಿಗೆಗಳ ಮಾಹಿತಿ ಪಡೆಯುತ್ತಿದ್ದೇವೆ. ಎಲ್ಲೆಡೆ ನಮ್ಮ ತಂಡಗಳೇ ಗೆಲ್ಲುತ್ತವೆ. ಮೌಢ್ಯ, ಕಂದಾಚಾರ, ಭೂತ, ಪಿಶಾಚಿ ಇಂತಹವುಗಳ ಬಗ್ಗೆ ಜನರು ಭೀತಿಯಲ್ಲಿದ್ದು ಅವರಲ್ಲಿ ವೈಜ್ಞಾನಿಕ ಮನೋಭಾವವನ್ನು ತುಂಬಿ ಭಯಮುಕ್ತಗೊಳಿಸಿದ್ದೇವೆ.

ಶಾಲಾ ಕಾಲೇಜುಗಳಲ್ಲಿ ಪವಾಡ ರಹಸ್ಯ ಬಯಲು, ಮಾಟ, ಮಂತ್ರದ ಕುರಿತು ಜಾಗೃತಿಯನ್ನು ಮೂಡಿಸಿದ್ದೇವೆ. ಈ ಮೂಲಕ ಶಿಕ್ಷಕರಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸುವಲ್ಲಿ ಶ್ರಮಿಸಿದ್ದೇವೆ. ವಿಜ್ಞಾನ ಹೋರಾಟಗಳಲ್ಲಿ ಭಾಗಿಯಾಗಿದ್ದೇವೆ. ಇದೇ ಕಾರಣಕ್ಕೆ ನಮ್ಮ ತಂಡಗಳ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಲ್ಬುರ್ಗಿ ವಿಭಾಗದಲ್ಲಿ ದಾ.ನಿ. ಬಾಬುರಾವ, ನಿಜಾನಂದ ರೆಡ್ಡಿ ಶರಣಪ್ಪಗೌಢ, ರಘುನಾಥ ರೆಡ್ಡಿ ಸಿದ್ದಲಿಂಗಪ್ಪ, ಡಾ.ಸಂಗಮೇಶ ಎಸ್.ಹರೇಮಠ, ಸುರೇಂದ್ರನಾಥ ಆರ್. ಹುಡಗಿಕರ್, ನರಸಪ್ಪ ಟಿ. ರಂಗೋಲಿ, ಬೆಳಗಾವಿ ವಿಭಾಗದಲ್ಲಿ ಅನ್ನದಾನೇಶ್ವರ ಹಳ್ಳಿಕೇರಿ, ಡಾ.ಎ.ಎಸ್ ಎಲಿ, ಜಿ.ಎಸ್. ಕಾಂಬಲೆ, ಪಂಚಾಕ್ಷರಿ ಸಿದ್ರಾಮಪ್ಪ, ದೊಡ್ಡಬಸಪ್ಪ, ರಾಮಪ್ಪ ಗುರವಾಡ ನಮ್ಮ ತಂಡದವರಾಗಿದ್ದಾರೆ ಎಂದು ಬಸರಾಜು ಹೇಳಿದರು.

ಒಟ್ಟಾರೆಯಾಗಿ ಇದುವರೆಗಿನ ಪ್ರಚಾರವನ್ನು ನೋಡಿದರೆ ಈ.ಬಸವರಾಜು ಪರವಾಗಿರುವ ತಂಡಗಳೇ ಎಲ್ಲಾ ವಿಭಾಗದಲ್ಲೂ ಮೇಲುಗೈ ಸಾಧಿಸಲಿವೆ ಎಂಬುದು ಕಂಡುಬರುತ್ತಿದೆ. ಬಸವರಾಜು ಪರ ತಂಡಗಳು ಗೆದ್ದರೆ ಉತ್ತರ ಕರ್ನಾಟಕದವರಿಗೆ ಆದ್ಯಕ್ಷ ಸ್ಥಾನವನ್ನು ನೀಡಲು ಮುಂದಾಗಿದ್ದಾರೆ. ವಿಜ್ಞಾನ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ ದಾನಿಬಾಬುರಾವ್ ಮತ್ತು ಎ.ಎನ್. ಮಹೇಶ್ ಬಾಬು ಹೆಸರುಗಳು ಹೆಚ್ಚು ಚಾಲ್ತಿಯಲ್ಲಿದ್ದು ಇವರಲ್ಲಿ ಒಬ್ಬರನ್ನು ಅಧ್ಯಕ್ಷರನ್ನಾಗಿ ಮಾಡಲು ಬಸವರಾಜು ತಂಡಗಳು ತೀರ್ಮಾನಿಸಿವೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?