Saturday, July 20, 2024
Google search engine
Homeಜಸ್ಟ್ ನ್ಯೂಸ್ವಿದ್ಯಾವಂತರಿಗಿಂತ. ಪ್ರಜ್ಞಾವಂತರು ಇಂದು ಬೇಕಿರುವುದು

ವಿದ್ಯಾವಂತರಿಗಿಂತ. ಪ್ರಜ್ಞಾವಂತರು ಇಂದು ಬೇಕಿರುವುದು

ಜಾಗತೀಕರಣದ ಕಾಲದಲ್ಲಿ , ಲಿಂಗಸಮಾನತೆ ,ರಾಜಕೀಯ ,ಸಾಮಾಜಿಕ ಮತ್ತು ಕೌಟುಂಬಿಕ ಸಮಾನತೆಯನ್ನು ಕುರಿತು ನಾವು ಎಷ್ಟೇ ಮಾತನಾಡಿದರೂ ,ಗತವೊಂದನ್ನು ಕಾಪಾಡಿಕೊಳ್ಳುವ ಪುರುಷ ಸಂಸ್ಕೃತಿಯೊಂದು ನಮ್ಮ ಜೊತೆ ಇದೆ. ಇದು ಮಹಿಳೆ ಹೀಗೇ ಇರಬೇಕು ಎಂದು ನಿರ್ದೇಶಿಸುತ್ತದೆ.
ಇದಕ್ಕೆ ನಾವು ಗೊತ್ತಿದ್ದೊ ,ಗೊತ್ತಿಲ್ಲದೆಯೊ ಬದ್ದರಾಗಿ ನಡೆದುಕೊಳ್ಳುವೆವು.
ಭಾವನಾತ್ಮಕ ನೆಲೆಯಲ್ಲಿ ಹೆಣ್ಣನ್ನು ಉಬ್ಬಿಸಿ ತೊಟ್ಟಿಲಿನ ನೆಪದಲ್ಲಿ ,ಕುಟುಂಬದ ನೆಪದಲ್ಲಿ ಹೆಣ್ಣನ್ನು ನಿಯಂತ್ರಿಸುವ ಕೆಲಸ ನಡೆಯುತ್ತಲೇ ಇದೆ.ಇದನ್ನೆಲ್ಲಾ ಮೀರಿ ಸಮಾನತೆಯನ್ನು ಸಾಧಿಸಲು ನಮಗೆ ಇಂದು ವಿಧ್ಯಾವಂತರಿಗಿಂತ ,ಹೆಚ್ಚು ಹೆಚ್ಚು ಪ್ರಜ್ಞಾವಂತರು ಬೇಕಿದೆ .
ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ನಾವು ಉಮೇದು ಇಟ್ಟುಕೊಂಡು ಸಮಾನತೆಯ ಬಗ್ಗೆ ಬರೀ ಬಾಯಿ ಮಾತಿನಲ್ಲಿ ಹೇಳುವ ಬದಲು ಅದರ ಆಶಯ ಏನಾಗಬೇಕೆಂದರೆ ,ಸಹಜವಾಗಿ ನಾವು ಮಾತುಕತೆಗೆ ನಿಂತಾಗ ,ಸಣ್ಣ ಸಣ್ಣ ಗುಂಪುಗಳಲ್ಲಿ ಸಂವಾದಿಸುವಾಗ ,ನಮ್ಮ ದಿನನಿತ್ಯದ ಬದುಕಿನಲ್ಲಿ ನಾವು ತುಂಬಾ ಎಚ್ಚರವನ್ನು ,ಜಾಗ್ರತೆಯನ್ನು ಸೂಕ್ಷ್ಮವಾಗಿ ಸ್ಥಾಪಿಸಿಕೊಳ್ಳಬೇಕಾಗುತ್ತದೆ.ಎಚ್ಚರ ಇಲ್ಲದೇ ಹೋದರೆ ,ಯಾರೊ ನಿರ್ದೇಶಿಸಲ್ಪಟ್ಟ ,ಯಾರೊ ಹೇಳಿದ ನಿಯಮಗಳಿಗೆನಾವು ಬದ್ದರಾಗಿ ವರ್ತಿಸುತ್ತಾ ನಮ್ಮ ಅಸ್ಮಿತೆಯನ್ನು ಕಳೆದುಕೊಳ್ತೀವಿ .ಆ ಎಚ್ಚರ,ಜಾಗ್ರತೆ ಹೇಗಿರಬೇಕೆಂದರೆ ಕವಿವಾಣಿಯೊಂದರಲ್ಲಿ ಹೇಳಿರುವಂತೆ ನಿದ್ದೆಯಲ್ಲೂ ಇಬ್ಬನಿ ಸದ್ದಿಗೆ ಕಣ್ತೆರೆಯಬಲ್ಲ ಜಾಗ್ರತೆ ಇರಬೇಕು .
ಎಂದು ಗೀತಾಲಕ್ಷಮಿ ರವರು ಹೇಳಿದರು.

ಕರ್ನಾಟಕ ಲೇಖಕಿಯರ ಸಂಘ ತುಮಕೂರು ಜಿಲ್ಲಾಶಾಖೆ ತುಮಕೂರಿನ IMA ಹಾಲ್ ನಲ್ಲಿಹಮ್ಮಿಕೊಂಡಿದ್ದ ,ವಿಶ್ವಮಹಿಳಾ ದಿನಾಚರಣೆ ಸಂದರ್ಭದಲ್ಲಿ ಮುಖ್ಯಭಾಷಣಕಾರರಾಗಿ ಬಂದಿದ್ದ ,ಅಂಕಣ ಬರಹಗಾರ್ತಿ ಲೇಖಕಿ ಗೀತಾ ಲಕ್ಷ್ಮಿ ರವರು ಮೇಲಿನಂತೆ ಮಾತನಾಡುತ್ತಾ ,ಮುಂದುವರಿದು ಸಮಾನತೆಯ ಬಗ್ಗೆ ಮಾತನಾಡವ ಪ್ರತಿ ಮಹಿಳೆಯೂ ಅಂಬೇಡ್ಕರ್ ಮತ್ತುಸಾವಿತ್ರಿಬಾಯಿ ಫುಲೆರವರನ್ನು ನೆನೆಯಲೇ ಬೇಕು.ಮಕ್ಕಳನ್ನು ಹೆಚ್ಚು ಹೆಚ್ಚಾಗಿ ನಾವು ಸಮಾನತೆ ಕಡೆ ತೊಡಗಿಸಬೇಕಿದೆ .ಮೋಜಿನ ಕಲ್ಪನೆಗಳನ್ನು ಬಿಟ್ಟು ಆಚೆ ಬರುವಂತೆ ಮಕ್ಕಳಿಗೆ ತಿಳಿಸಬೇಕಾಗಿದೆ ಎಂದರು ಇದೇ ಕಾರ್ಯಕ್ರಮದಲ್ಲಿ, ಕರ್ನಾಟಕ ಲೇಖಕಿಯರ ಸಂಘ ತುಮಕೂರು ಜಿಲ್ಲಾ ಶಾಖೆಯಿಂದ , ಸೋಮಾವತಿ ಮತ್ತುಇಂದಿರಮ್ಮ ನೆನಪಿನ ಸಾಧಕ ಮಹಿಳೆ ಪ್ರಶಸ್ತಿ ಯನ್ನು , ವಿಶೇಷವಾಗಿ ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡಿರುವ ಪರಿಸರ ಹೋರಾಟಗಾರ್ತಿ ಎನ್ .ಇಂದಿರಮ್ಮ ಚಿ.ನಾ.ಹಳ್ಳಿ ರವರಿಗೆ ನೀಡಿ ಅಭಿನಂದಿಸಲಾಯ್ತು .
ಹಾಗೂ
,ಲೇಖಕಿಯರ ಸಂಘವು ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಜಿ.ಮಲ್ಲಿಕಾ ಬಸವರಾಜು ವಹಿಸಿದ್ದರು .
ಪ್ರೇಮಾಮಲ್ಲಣ್ಣರವರು ಉದ್ಘಾಟಿಸಿ ,ಡಾ/ಅರುಂಧತಿ ರವರು ಪ್ರಸ್ತಾವನೆ ಮಾಡಿದರು .
ಸಿ.ಎ.ಇಂದಿರಮ್ಮರವರು ಅಭಿನಂದನಾ ನುಡಿಗಳನ್ನಾಡಿದರು .
ಡಾ/ರಜನಿ ,ಕವಯತ್ರಿ ಮತ್ತು ಪ್ರಾಂಶುಪಾಲರು ,ಜಿಲ್ಲಾ ಆರೋಗ್ಯ ತರಬೇತಿ ಸಂಸ್ಥೆ ತುಮಕೂರು ರವರು ಉಪಸ್ಥಿತರಿದ್ದರು .
ಪಾರ್ವತಮ್ಮು ಮತ್ತು ತಂಡದವರು ಜಾಗೃತಿ ಗೀತೆಗಳನ್ನು ,ಕುಸುಮಾ ಜೈನ್ ರವರು ವಚನಗಳನ್ನು ಹಾಡಿದರು . ರಾಣಿ ಚಂದ್ರಶೇಖರ್ ರವರು ನಿರೂಪಣೆ ಮಾಡಿದರು.
ಕಾರ್ಯಕ್ರಮದಲ್ಲಿ ಸಂಘದ ಹಿಂದಿನ ಅಧ್ಯಕ್ಷ ರುಗಳಾದ ,ಅನ್ನಪೂರ್ಣ ವೆಂಕಟನಂಜಪ್ಪ ಎಂ.ಸಿ.ಲಲಿತಾ ,ಸುಗುಣಾ ದೇವಿ ಮತ್ತು ಕಾರ್ಯ ಕಾರಿ ಸಮಿತಿ ಸದಸ್ಯರು ಹಾಜರಿದ್ದರು

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?