Friday, October 11, 2024
Google search engine
Homeಜನಮನಸಂಕ್ರಮಣ" ದ ಚಂಪಾ " ಅವಧಿ" ಯ ಜಿಎನ್ಮೋ...

ಸಂಕ್ರಮಣ” ದ ಚಂಪಾ ” ಅವಧಿ” ಯ ಜಿಎನ್ಮೋ…

ಪ್ರಕಾಶ ಕಡಮೆ


ಚಂದ್ರಶೇಖರ ಪಾಟೀಲ್ ಮತ್ತು ಜಿ.ಎನ್.ಮೋಹನ
ಸೃಜನ ಶೀಲ ಸಾಹಿತ್ಯದ ಹೆಬ್ಬಾಗಿಲಿನ ಒಳಪ್ರವೇಶದ
ರೂವಾರಿಗಳಿದ್ದಂತೆ.

ಈ ಸುಂಕದ ಕಟ್ಟೆಯಿಂದ ಯಾರು ದಾಟಿ ಮುಂದೆ
ಸಾಗುವರು ಅವರು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಹೆಜ್ಜೆ
ಗುರುತು ಮೂಡಿಸಿದಂತೆ. ಆದರೆ ಈ ಸುಂಕ ದಾಟಲು ಯಾರೂ ಇಲ್ಲಿ ತೆರಿಗೆ ಕೊಡಬೇಕಾಗಿಲ್ಲ.ಅವರವರ
ಬರವಣಿಗೆಯ ಗುಣಮಟ್ಟವೇ ಇಲ್ಲಿ ಮಾನದಂಡ.

ಕಳೆದ ಸುಮಾರು ನಾಲ್ಕೂವರೆ ದಶಕಗಳಿಂದ
ಚಂಪಾ ಕನ್ನಡ ಸಾಹಿತ್ಯದಲ್ಲಿ ” ಸಂಕ್ರಮಣ ” ದ
ಮೂಲಕ ಸಣ್ಣದೊಂದು ಕ್ರಾಂತಿಯನ್ನೇ ಮಾಡುತ್ತಾ
ಬಂದಿರುವರು. ಪ್ರತೀ ವರ್ಷ ಸಾಹಿತ್ಯ ಸ್ಪರ್ಧೆ ಏರ್ಪಡಿಸಿ ಹೊಸ ಹೊಸ ಪ್ರತಿಭೆಗಳನ್ನು ನಾಡಿಗೆ ಪರಿಚಯಿಸಿ ಸುತ್ತಾ ಬಂದು ಅಂತವರು ಈ ಸಾಹಿತ್ಯ ಲೋಕದಲ್ಲಿ ನೆಲೆನಿಲ್ಲಲು ಬೆಳಕಿನ ದಾರಿ ತೋರಿಸುವರು.

ದಾರಿ ತೋರಿಸುವಿಕೆ ಏನೋ ಅವರದು ; ನೆಲೆ ನಿಲ್ಲುವಿಕೆ ಓದು – ಅಧ್ಯಯನದ ಮೇಲೆ ನಿರ್ಣಯವಾಗುವದು.
ಸಂಕ್ರಮಣದಲ್ಲಿ ಬರಹ – ಕವನ ಪ್ರಕಟವಾದರೆ ಅದು ನಾಡಿನ ಗಮನ ಸೆಳೆದಂತೆ. ಚಂಪಾ ಎಂದಿಗೂ
ಯಾರ ಬರಹಕ್ಕೂ ಬಿಡೆಗೊಳಗಾಗದೇ ಗುಣಮಟ್ಟದ ಸಾಹಿತ್ಯವನ್ನು ನೀಡುತ್ತಾ ಬಂದಿರುತ್ತಾರೆ. ಬರಹಗಾರನೂ ಅಷ್ಟೇ ಸಮಾಜಮುಖಿ ಧೋರಣೆಯಿಂದ ಕನ್ನಡ ಸಾಹಿತ್ಯದಲ್ಲಿ ತನ್ನ ಭವಿಷ್ಯವನ್ನು ರೂಪಿಸಿಕೊಳ್ಳುವನು.

ಚಂಪಾ ಒಬ್ಬ ಅಪ್ಪಟ ಜವಾರಿ ಕವಿ , ಒಳ್ಳೆಯ ನಾಟಕಕಾರ , ಪತ್ರ ಪ್ರಿಯರಾದ ಇವರ ಕೈ ಬರಹದ
ಅಕ್ಷರಗಳು ಕನ್ನಡ ಸಾಹಿತ್ಯ ಲೋಕಕ್ಕೇ ಪರಿಚಿತ.
ಗೋಕಾಕ ಚಳುವಳಿಯ ಮೂಲಕ ಇವರೊಬ್ಬ
ಮಹಾನ್ ಸಂಘಟಕ. ಎಲ್ಲಕಿಂತ ಮುಖ್ಯವಾಗಿ
ಚಂಪಾ ಒಬ್ಬ ಸ್ನೇಹ ಜೀವಿ. ಅವರೊಡನೆಯ
ಗೆಳೆತನಕ್ಕೆ ವಯಸ್ಸಿನ ಹಂಗಿಲ್ಲ.ಇಂದಿನ ಎಲ್ಲಾ ಪ್ರಮುಖ ಬರಹಗಾರರೂ “ಸಂಕ್ರಮಣ” ದ ಮೂಲಕವೇ ಕನ್ನಡ ಸಾಹಿತ್ಯ ಲೋಕಕ್ಕೆ ಪ್ರವೇಶ ನೀಡಿದವರೇ ;

ಇಲ್ಲಿಂದ ಪ್ರವೇಶ ಪಡೆಯದ ಕೆಲವರು ನಂತರದ
ದಿನಗಳಲ್ಲಾದರೂ ಸಂಕ್ರಮಣದ ಓಡನಾಡಿಗಳೇ.

” ಅವಧಿ ” ಯುವ ಕನ್ನಡ ಮನಸುಗಳ ನಾಡಿ
ಮಿಡಿತದ ಸದ್ದು. ಇದಕೆಲ್ಲಾ ಕಾರಣ ಜಿ.ಎನ್.ಮೋಹನ ಎಂಬ ಮೋಡಿಗಾರ. ಪತ್ರಿಕೆ ಹಾಗೂ ಇಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಹಲವು ವರ್ಷಗಳ ಕಾಲ ಸೇವೆಸಲ್ಲಿಸಿ
ಈಗ ಕಳೆದೊಂದು ದಶಕದಿಂದ ” ಅವಧಿ” ಯ ಮೂಲಕ ಯುವ ಮನಸುಗಳ ಹೃದಯಕ್ಕೆ ; ಹಿರಿಯರ ಪ್ರಬುದ್ಧ ಬರಹಗಳಿಂದ ನಾಡಿನ ಸಾಹಿತ್ಯಾಸಕ್ತರ ಗಮನ ಸೆಳೆದಿರುವರು. ಪ್ರತಿಯೊಬ್ಬ ಯುವ ಬರಹಗಾರನೂಸಹ ಯಾವದಾದರೂ ತನ್ನದೊಂದು ಬರಹ ಅವಧಿಯಲ್ಲಿ ಬರಲೆಂದು ಆಶಿಸುವನು ಮತ್ತು ಕಾಯುವನು.

ಅವಧಿಯ ಅಂಗಳವೇ ಹಾಗಿದೆ. ಮೋಹನ್ ಈ
ಒಂದು ಚಿಕ್ಕ ಸಮಯದಲ್ಲಿ ಎಷ್ಟೆಲ್ಲಾ ಹೊಸ ಹೊಸ ಕನ್ನಡದ ಪ್ರತಿಭೆಗಳನ್ನು ಬೆನ್ನು ಚಪ್ಪರಿಸಿ ನಾಡಿಗೆ ಪರಿಚಯಿಸಿದರು. ಇವರೆಲ್ಲರೂ ಸಹ ಈಗ ಕನ್ನಡದ
ಪ್ರಮುಖ ಬರಹಗಾರರೇ.

ಮೋಹನ ತಾವೂ ಬೆಳೆದರು, ಹೊಸಬರನ್ನೂ ಬೆಳೆಸಿದರು. ಮತ್ತೊಬ್ಬರ ಏಳ್ಗೆಯನ್ನು ಕಂಡು ಖುಷಿಪಡುವ ಜೀವ ಇವರದು. ” ಬಹುರೂಪಿ ” ಪ್ರಕಾಶನದ ಮೂಲಕ ಮೋಹನ್ ಇಂದು ಅಕ್ಷರ ಲೋಕಕ್ಕೆ ಹೊಸ ಬೆರಗನ್ನು ನೀಡಲು ಪ್ರಾರಂಭಿಸಿರುವರು. ಇದರಿಂದಾಗಿಯೇ ಇಂದು
ಮೋಹನ್ ಕನ್ನಡ ಸಾಹಿತ್ಯ ಲೋಕದಲ್ಲಿ ಎಲ್ಲರ ಪ್ರೀತಿ ಆದರಕ್ಕೆ ಕಾರಣರು.

ಇವರೊಳಗೊಬ್ಬ ಕವಿ ಸದಾ ಜಾಗ್ರತನಾಗಿದ್ದು , ಅವಧಿಗೆ ಹೊಸ ಹೊಸ ಪ್ರತಿಭೆಗಳ ಶೋಧನೆಗೆ ಸದಾ ಕಣ್ಣಾಗಿರುವರು.ಅವಧಿಯ ಎಲ್ಲಾ ಬರಹಗಳೂ ಪ್ರಗತಿಪರ ನಿಲುವಿನದಾಗಿದ್ದು ಮಾನವೀಯ ಮೌಲ್ಯಗಳ ಬೆಸುಗೆಯಾಗಿರುತ್ತದೆ.

ಇವುಗಳಿಂದಾಗಿಯೇ ಇಂದು ” ಸಂಕ್ರಮಣ” ದ ಚಂಪಾ ” ಅವಧಿ” ಯ ಜಿಎನ್ಮೋ ಶುದ್ಧ ಪ್ರತಿಭೆ , ಶುದ್ಧ ಕನ್ನಡಕ್ಕಾಗಿ ಪರಿಶುದ್ಧ ಮನಸ್ಸಿನಿಂದ ಹೊಸ ಹೊಸ ಕನ್ನಡತನದ ಶೋಧ ಗಳಿಗೆ ಕಣ್ಗಾವಲಾಗಿರುವರು.ಕನ್ನಡ ಸಾಹಿತ್ಯದಲ್ಲಿಯ ಇವರ ಜನಪರ, ಪ್ರಗತಿಪರ ಕಾಳಜಿಗೆ ನಮ್ಮದೊಂದು ಸಲಾಮ್ .

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?