ದಿಗಂತ್ ಸಿ.ಎಲ್.
6ನೇ ತರಗತಿ ವಿದ್ಯಾರ್ಥಿ, ತುಮಕೂರು
ನಮ್ಮೆಲ್ಲ ಶಾಲೆಯ ಪರೀಕ್ಷೆಯನ್ನು ಕೊರೊನಾ ಭೀತಿಯಿಂದ ಬೇಗ ಬೇಗನೆ ಮುಗಿಸಿ ನಮ್ಮನ್ನು ಮುಂದಿನ ತರಗತಿಗೆ ತೇರ್ಗಡಿಸಿ ಎಲ್ಲರನ್ನೂ ಲಾಕ್ ಡೌನ್ ಎಂಬ ಜೈಲಿಗೆ ಬಂಧಿಸಿ ಇಲ್ಲಿಗೆ ಸುಮಾರು ಮೂರು ತಿಂಗಳಾಯಿತು.
ನಾನು ಶಾಲೆಯಿಂದ ದಿನಾಲೂ ವಾಟ್ಸ್ ಆ್ಯಪ್ ನಲ್ಲಿ ಬರುತ್ತಿದ್ದ ಎಲ್ಲಾ ಹೋಂ ವರ್ಕ್ ಅನ್ನು ಚಾಚೂ ತಪ್ಪದೆ ಮುಗಿಸಿ ಸಮಯ ಕಳೆಯಲು ಪ್ರಾರಂಭಿಸಿದ.
ನನ್ನ ದಿನಚರಿ ಬೆಳಿಗ್ಗಿನ ದೇವರ ಪೂಜೆಯೊಂದಿಗೆ ಪ್ರಾರಂಭವಾಗಿ ನನ್ನ ಮುದ್ದಿನ ತಂಗಿ ನಿಧಿಯ ಜೊತೆ ಆಟವಾಡುತ್ತಾ ಅಮ್ಮ ಅಪ್ಪನಿಗೆ ಸಹಾಯ ಮಾಡುತ್ತಾ ಮತ್ತು ಉಳಿದ ಸಮಯವನ್ನು ತಾತಾ ಅಜ್ಜಿ ಮಾವ ಅತ್ತೆ ದೊಡ್ಡಮ ದೊಡ್ಡಪ್ಪ ಚಿಕ್ಕಪ್ಪ ಚಿಕ್ಕಮ್ಮ ಮತ್ತು ಬಂಧು ಬಳಗದವರ ಜೊತೆ ಫೋನಿನಲ್ಲಿ ಮಾತಾನಾಡುತ್ತಾ ಕಳೆಯುತ್ತಿದ್ದೇನೆ. ಮತ್ತು ಚಿತ್ರಗಳನ್ನು ಬಿಡಿಸುತ್ತಾ ಕಳೆಯಿತು.
ಇದರ ಜೊತೆಯಲ್ಲಿ ಆನ್ಲೈನ್ ತರಗತಿ ಕೂಡ ಶುರುವಾಗಿ ನನ್ನನು ಕಾರ್ಯನಿರತನನ್ನಾಗಿ ಮಾಡಿತು.
ಯಾವಾಗಲೂ ರಜೆಯನ್ನು ಅಜ್ಜಿಯ ಮನೆಯಲ್ಲಿ ತುಂಬಾ ಮೋಜು ಮಸ್ತಿ ನಿಂದ ಕಾಲ ಕಳೆಯುತ್ತಿದ್ದೆ ನಾನು ಈ ರಜೆಯನ್ನು ಬಹಳ ಸುರಕ್ಷಿತವಾಗಿ ಶುಚಿತ್ವದಿಂದ ಮತ್ತು ಜಾಗರೂಕನಾಗಿ ನಮ್ಮ ಮನೆಯಲ್ಲೇ ಕಳೆಯಬೇಕಾಗಿದೆ. ಅದನ್ನು ನಾನು ಪಾಲಿಸುತ್ತಲೂ ಇದ್ದೇನೆ.
ಹೀಗೆ ಕೊರೊನಾ ಲಾಕ್ ಡೌನ್ ನಮಗೆಲ್ಲ ಸಮಯದ,ಸಂಬಂಧದ ಮತ್ತು ಶುಚಿತ್ವದ ಮಹತ್ವವನ್ನು ಸರಿಯಾಗಿ ತಿಳಿಸಿ ಕೊಟ್ಟಿತು.