Saturday, September 21, 2024
Google search engine
Homeತುಮಕೂರು ಲೈವ್ಹಳ್ಳಿ, ಹಳ್ಳಿ ತಿರುಗುತ್ತಿದ್ದಾರೆ ಶಾಸಕ ಬಿ.ಸಿ.ನಾಗೇಶ್? ಯಾಕೆ ಗೊತ್ತಾ!

ಹಳ್ಳಿ, ಹಳ್ಳಿ ತಿರುಗುತ್ತಿದ್ದಾರೆ ಶಾಸಕ ಬಿ.ಸಿ.ನಾಗೇಶ್? ಯಾಕೆ ಗೊತ್ತಾ!

ಉಜ್ಜಜ್ಜಿ ರಾಜಣ್ಣ


ತಿಪಟೂರು: ಈಗ ಯಾವುದೇ ಚುನಾವಣೆಯೂ ಇಲ್ಲ.‌ಕೊರೊನಾ ಕಾರಣ ಬಹುತೇಕರು ಮನೆ ಸೇರಿರುವಾಗ, ತಿಪಟೂರಿನ ಶಾಸಕರು ಮಾತ್ರ ಊರೂರು ತಿರುಗುತ್ತಿದ್ದಾರೆ.

ಕೊರೊನಾದಲ್ಲಿ ಹೆಚ್ಚಿನವರು ಕೈಗೆ ಸಿಗದಂತೆ ತಪ್ಪಿಸಿಕೊಳ್ಳಲೇ ಯತ್ನಿಸುತ್ತಿದ್ದಾರೆ. ಇವರು ಮಾತ್ರ ಹಳ್ಳಿ, ಹಳ್ಳಿ ತಿರುಗಿ ಜನರ ಸಂಕಷ್ಟಕ್ಕೆ ಮಿಡಿಯುವ ಕೆಲಸ ಸದ್ದಿಲ್ಲದೇ ಮಾಡುತ್ತಿದ್ದಾರೆ.

ಅರಿವುಳ್ಳವರಿಗೆ ಜನಪ್ರತಿನಿಧಿಯ ಜವಾಬ್ದಾರಿ ಅಷ್ಟು ಸುಲಭನಾದುದಲ್ಲ ಎಂಬ ತಿಳುವಳಿಕೆ ಇದ್ದೇ ಇರುತ್ತದೆ. ಜನರು ಆಳಿಗೊಂದೊಂದ ಪ್ರಶ್ನೆ ಕೇಳುವರು. ತಲೆಗೊಂದೊಂದು ಮಾತನಾಡವರು.‌

ಕೊರೋನದಂತಹ ದುರಿತ ಕಾಲದಲ್ಲಿ ‌ಇನ್ನೆಂದೆಂದಿಗಿಂತಲೂ ಜನರು ಆಲೋಚಸುವುದು, ಗಾಬರಿ ಪಡುವುದು, ಸಾಂತ್ವನಕ್ಕೆ ಆಲಾಪಿಸುವುದು ಜನಪ್ರತಿನಿಧಿಗಳನ್ನು ಅಂಗಲಾಪಿಸಿಜೊಳ್ಳುವುದು ಸಹಕಾರ ಕೋರುವುದು ಇನ್ನೂ ಹೆಚ್ಚಾಗಿರುತ್ತದೆ ಸ್ವಾಭಾವಿಕವಾಗಿರುತ್ತದೆ ಅನಿವಾರ್ಯವಾ ಪರಿಸ್ಥಿತಿಯೂ ಹೌದು. ಸಾಯೋರಿಗೆ ಒಂದು ಹುಲ್ಲು ಗರಿ ಆಸರೆಯಾಗಿ ಬಂದರೂ ಸಾಕು ಎಂಬಂಥ ಪರಿಸ್ಥಿತಿ ಇದೆ.

ಹಾಗೆ ಜನರು ಅಸಹಾಯಕರಾದವರಂತೆ ಚಡಪಡಿಸುವಂತೆ ಮಾಡಿದೆ ಕೊರೋನ. ಇಂತಹ ದುರಿತಕಾಲವನ್ನು ಅಕ್ಷರಶಃ ಅರ್ಥ ಮಾಡಿಕೊಂಡವರಾಗಿ ತಿಪಟೂರು ವಿಧಾನ ಸಭಾ ಕ್ಷೇತ್ರದ ಶಾಸಕರು ಬಿ ಸಿ ನಾಗೇಶ್ ಕ್ಷೇತ್ರದಲ್ಲಿ ಅನುದಿನವೂ ಚಾಲನಾಶೀಲವಾಗಿರುವುದು ಅತ್ಯಂತ ಮಹತ್ವದ್ದಾಗಿದೆ.

ಜನಪ್ರಿಯತೆಯಿಂದ ಅನತಿ ದೂರವೇ ಉಳಿದುರುವ ಶಾಸಕರು ಅಬ್ಬರದ ಪ್ರಚಾರಕ್ಕಿಂತಲೂ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ಅಧಿಕೃತವಾಗಿ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದ ಮೂಲಕ ಕೋವಿದ್ ಅಬ್ಬರದ ಅಲೆಯನ್ನು ನಿಯಂತ್ರಣ ಸಾಧಿಸಲು ಕ್ಷೇತ್ರದಲ್ಲಿ ಕಾರ್ಯ ನಿರತರಾಗಿದ್ದಾರೆ.

ಕರೋನ ಭೀಕರತೆಯನ್ನು ಎದುರಿಸಲು ಜನತೆಗೆ ದೈನಂದಿನ ಜೀವನದಲ್ಲಿ ಧೈರ್ಯ ತುಂಬಲು ಕಳೆದ ಬಾರಿಯಿಂದಲೂ ತಿಪಟೂರು ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಶಾಸಕರು ಬಿ. ಸಿ. ನಾಗೇಶ್ ನಿಗಾ ವಹಿಸಿ ತಿರುಗಾಡುತ್ತಿದ್ದಾರೆ.

ಅದು ಉರುಪು ಉತ್ಸಾಹ ಎನ್ನುವುದಕ್ಕಿಂತಲೂ ಜನರ ಜೀವನ್ಮರದ ಪ್ರಶ್ನೆ ಎಂಬುದನ್ನು ಶಾಸಕರು ಮೊದಲಿನಿಂದಲೂ ತಿಳಿದವರಾಗಿ ಆಡಳಿತ ವ್ಯವಸ್ಥೆ ಮತ್ತು ನಾಗರಿಕರ ನಡುವೆ ಶಾಸಕರೂ ಓರ್ವ Covid warrior’s ಆಗಿ ಕ್ಷೇತ್ರದಾದ್ಯಂತ ಕಾರ್ಯೋನ್ಮುಕರಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಮುತುವರ್ಜಿಯಿಂದ ಸಾವುನೋವುಗಳು ಸಂಭವಿಸುವುದು ತೀರಾ ತೀರಾ ವಿರಳವಾಗಿದೆ.

ಗ್ರಾಮಾಂತರ ಹಾಗು ನಗರಪ್ರದೇಶದ ಆಸ್ಪತ್ರೆಯ ಮೇಲೆ ತೀವ್ರವಾದ ನಿಗಾವಣೆ ಮಾಡಿರುವರು. ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ವಿಶೇಷವಾಗಿ ವಿಶ್ವಾಸಕ್ಕೆ ತೆಗೆದುಕೊಳ್ಳುವ ಮೂಲಕ ಆರೋಗ್ಯ ಸುರಕ್ಷತಾ ಕ್ರಮಗಳನ್ನು ಕೈಗೊಂಡರು.

ಒಂದೊಂದು ಜೀವವೂ ಅತಿ ಹೆಚ್ಚು ಮುಖ್ಯ. ಒಂದು ಜೀವವನ್ನೂ ಕಳೆದುಕೊಳ್ಳ ಬಾರದೆಂಬಂತೆ ಸದಾ ಮನೆಯ ಹೊರಗಿದ್ದು ಜನರ ನಡುವೆ ಆರೋಗ್ಯ ಕ್ಷೇಮ ಸಮಾಚಾರದಲ್ಲಿ ಬಾಗಿಯಾಗುತಿದ್ದಾರೆ.

ಹೆಚ್ಚುವರಿಯಾಗಿ ಆಸ್ಪತ್ರೆಯಲ್ಲಿ ಬೆಡ್ ಗಳಿರುವಂತೆಯೂ, ಆಕ್ಸಿಜನ್ ಕೊರತೆ ಆಗದಂದೆಯೂ ಎಚ್ಚರಿಕೆಯ ವಹಿಸಿದ್ದಾರೆ. ಮೇಲಿಂದಮೇಲೆ ಶಾಸಕರ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಭೆ ನಡೆಯುತ್ತವೆ. ಆ ಕೂಡಲೇ ನಗರ ಮತ್ತು ಗ್ರಾಮಾಂತರದಲ್ಲಿ ಸಭೆಯ ತೀರ್ಮಾನಗಳು ಅನುಷ್ಟಾನ ಮಾಡುವವರಾಗಿದ್ದಾರೆ ತಾಲ್ಲೂಕಿನ ಅಧಿಕಾರಿಗಳು.

ಆಕ್ಷೇಪಣೆ ಉಪೇಕ್ಷೆ ಮಾಡುವ ಜನರ ಮಾತುಗಳನ್ನೂ ತತ್ಸಾರ ಮಾಡದ ಹಾಗೆ ಕೋವಿಡ್ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರಲು ಯತ್ನಿಸುತ್ತಿರುವ ಶಾಸಕರು ಮತ್ತು ಅಧಿಕಾರಿಗಳು ತಾಲ್ಲೂಕಿನಲ್ಲಿ ಪೂರ್ಣಾವಧಿಯ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೋವಿಡ್ ದುರಿತ ಕಾಲವನ್ನು ಅರ್ಥ ಮಾಡಿಕೊಂಡವರಾಗಿದ್ದಾರೆ.

ಮುಂಗಾರು ಬಿತ್ತನೆಯ ಕಾಲದಲ್ಲಿ ಏರುತ್ತಿರುವ ಕೊರೋನ ಎಲ್ಲಿ ಹಳಿಗಳ ರೈತರನ್ನು ಕಂಗಾಲು ಮಾಡಬಲ್ಲದೋ ಅರ್ಥವಾಗುದು. ರೂಪಾಂತರ ವೈರಾಣುವಿನ ಅಪರಾವತಾರಗಳು ವೈದ್ಯಕೀಯ ಲೋಕಕ್ಕೂ ಪೂರ್ಣವಾಗಿ ಅರಿವಿಗೆ ಬಾರದ ಸಂಗತಿ ಮತ್ತು ಸವಾಲು. ಮುಂದಾಲೋಚನೆಯಲ್ಲಿ ತೊಡಗಿರುವ ಶಾಸಕರು ಮೊನ್ನಮೊನ್ನೆ ಬಿತ್ತನೆಯ ಬೀಜ ಮತ್ತು ಗೊಬ್ಬರದ ಕೊರತೆಯಾಗದ ಹಾಗೆ ಮತ್ತೆಮತ್ತೆ ಅಧಿಕಾರಿಗಳ ಸಭೆಗಳನ್ನು ನಡೆಸುವ ಮೂಲಕ ಸಂಭವನೀಯ ಪರಿಣಾಮಗಳು ಉಂಟಾಗದ ಹಾಗೆ ಅಧಿಕಾರಿಗಳನ್ನು ಜಾಗೃತ ಗೊಳಿಸಿರುವರು.

ಕೊರೋನ ಉಲ್ಬಣಗೊಂಡರೆ ಆಕ್ಸಿಜನ್ ಮತ್ತು ಬೆಡ್ ಕೊರತೆಯನ್ನು ಕ್ಷೇತ್ರದ ಆಸ್ಪತ್ರೆಯಲ್ಲಿ ಕಾಣಬಾರದು ಎಂಬುದು ಅವರ ಕಾಳಜಿಯನ್ನು ತೋರ್ಪಡಿಸುತ್ತದೆ.

ಬಿತ್ತನೆ ಬೀಜ ಮತ್ತು ರಸಗೊಬ್ಬರಗಳಿಗಾಗಿ ರೈತರು ಈ ದುರಿತ ಕಾಲದಲ್ಲಿ ಪರದಾಡಬಾರದು ಎಂದು ಶಾಸಕರು ಅಧಿಕಾರಿಗಳೊಂದಿಗೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡರುವುದು ಸ್ವಾಗರ್ಹ ಮತ್ತು ಸುಧಾರಿತ ಕ್ರಮವಾಗಿ ಕಂಡಿತು.

ಊಟ ಬೇಕಾಗಿತ್ತು ಹೋಟೆಲಿಗೆ ಹೋಗಿದ್ದೆ. ಸಿದ್ದಪ್ಪನ ಹೋಟೆಲ್ ನಲ್ಲಿ ಕಾಕಾ ಹೋಟೆಲ್ ಟೀ ಗ್ಲಾಸ್ ಒಂದರಲ್ಲಿ ಟೀ ಕುಡಿಯುತ್ತಾ ಶಾಸಕರು ಅದೆಲ್ಲಿಂದಲೋ ಬಂದು ಮೂಲೆಯೊಂದರ ಕುರ್ಚಿಯಲ್ಲಿ ಕಿಟಕಿ ಆಚೆಯ ಬೆಳಕು ದಿಟ್ಟಿಸುತ್ತಾ ಮುಂದೇನು ಎಂಬುದನ್ನು ಹತ್ತಿರದಲ್ಲೇ ಕುಳಿತಿದ್ದವರ ಜೊತೆಯಲ್ಲಿ ಮಾತನಾಡುತಿದ್ದರು.

ಹೊತ್ತು ಊಟದ ಸಮಯದ ಕಡೆ ತಿರುಗುತ್ತಿತ್ತು ಆಗಲೇ. ಅವರದಿನ್ನೂ ತಿಂಡಿಯಾಗಿರಲಿಲ್ಲ. ಆಕಸ್ಮಿಕವಾಗಿ ಅವರನ್ನು ಎದುರುಬದುರಾಗಿ ನೀವೇಕೆ ಇಲ್ಲಿ ಎಂದರೆ, ಆಗಲೇ ಅವರು ವಿಧಾನ ಕ್ಷೇತ್ರದ ವ್ಯಾಪ್ತಿಯಲ್ಲಿ, ಅಲೆಮಾರಿಗಳು ಅರೆ ಅಲೆಮಾರಿಗಳು ನೆಲೆಗೊಂಡಿರುವ ಹಳ್ಳಿಗಳಲ್ಲಿ ತಿರುಗಾಡಿ ಮನೆ ಮುಂಜುರಾತಿ ಪತ್ರಗಳನ್ನು ವಿತರಣೆ ಮಾಡಿ ಬಂದಿದ್ದರು.

ಇಂತಹ ಸಂದರ್ಭಗಳಲ್ಲಿ ಅಲೆಮಾರಿಗಳು ಅರೆ ಅಲೆಮಾರಿಗಳ ಯೋಗಕ್ಷೇಮವನ್ನು ಅರಿತುಕೊಂಡ ಹಾಗೆ ಶಾಸಕರು ಇಂತಹ ಕಾರ್ಯಕ್ರಮ ಹಾಕಿಕೊಂಡು ಕ್ಷೇತ್ರದಲ್ಲಿ ಸಂಚರಿಸುವುದೂ ಹೆಮ್ಮೆಯ ಸಂಗತಿ. ಅವರದಿನ್ನೂ ತಿಂಡಿಯಾಗದೆ ಟೀಯಲ್ಲಿಯೇ ಊಟವನ್ನೂ ಮುಗಿಸುವವರಂತೆ ಕಂಡರು.

ಎಲ್ಲರೂ ಆರೋಗ್ಯವನ್ನು ಎಚ್ಚರಿಕೆಯಿಂದ ಗಮನಿಸಿಕೊಳ್ಳಬೇಕು. ನಾವೆಲ್ಲರೂ ಗಂಭೀರವಾದ ಆರೋಗ್ಯ ಪರಿಸ್ಥಿತಿ ಎದುರಿಸುತ್ತಿದ್ದೇವೆ ಎಂದು ಹೇಳುತ್ತಿದ್ದ ಅವರು ಸಾರ್ವಜನಿಕರ ನಡುವೆ ಇರಲೇಬೇಕಾದ ಅನಿವಾರ್ಯ ಕಾಲ ಸ್ಥಿತಿಯನ್ನು ಕಂಡ ನನಗೆ ಅವರು ಅವರ ಯೋಗಕ್ಷೇಮವನ್ನು ನೋಡಿಕೊಳ್ಳುವುದೂ ಅತಿಮುಖ್ಯ ಎನಿಸಿತು. ಬೈಗೂ ಬೆಳಗೂ ಅವರು ಜನರು ಅಧಿಕಾರಿಗಳು ವ್ಯವಸ್ಥೆಯ ನಡುವಿನ ಸಂಬಂಧವನ್ನು ಬಿಟ್ಟಿರಲಾರದ ಪರಿಸ್ಥಿತಿ.

ಮಳೆ ಚನ್ನಾಗಿ ಆಗಿದೆ ರಾಜಣ್ಣ, ರೈತರು ಭೂಮಿ ಸಿದ್ದತೆ ಮಾಡಿಕೊಳ್ಳಲು ಅನುಕೂಲವಾಗುತ್ತಿದೆ. ಮುಂದೆ ಬರುವ ಮಳೆಗೆ ಮುಂಗಾರು ಬಿತ್ತನೆ ಆಗುತ್ತದೆ. ಜನರು ಹುಷಾರಾಗಿ ಇರಲೇ ಬೇಕು. ಯಾರೂ ಆರೋಗ್ಯದ ಬಗ್ಗೆ ತಾತ್ಸಾರ ಮಾಡಬಾರದು.

ನೀವೂ ಅಷ್ಟೇ ಉಷಾರಗಿರಿ ಎಂದು ಎಚ್ಚರಿಸಿದರು. ಅದರಿಂದಿನ ದಿನಗಳಲ್ಲಿ ಶಾಸಕರು Covid patients ಗಳ ಜೊತೆಯಲ್ಲಿ ದೂರವಾಣಿ ಕರೆಯ ಮೂಲಕ ಸೇರಿಕೊಂಡು ಅವರಿಗೆ ಸಮಾಧಾನಕರ ಮಾಹಿತಿಯನ್ನು ನೀಡುವ ಮೂಲಕವೂ ಅವರು ಕ್ರಿಯಾಶೀಲವಾಗಿರುವುದನ್ನು ತಿಳಿದಿರುವ ಸಂಗತಿಯನ್ನು ಅವರಿಗೆ ನಾನು ನೆನಪು ಮಾಡಿ,‌ ನೀವು Covid patients ಗಳ ಜೊತೆಯಲ್ಲಿ ಮಾತನಾಡಿ ಬಹಳ ಒಳ್ಳೆಯ ಕೆಲಸವಾಯಿತು ಎಂದೆ. ಔಷಧಕ್ಕಿಂತಲೂ ಇಂತಹ ಸಂದರ್ಭದಲ್ಲಿ ಗಂಭೀರವಾದ ಇರುಸ್ಥತಿಯಲ್ಲಿ patients ಗಳಿಗೆ ಕರೆ ಮಾಡುವುದು ಸಾಂತ್ವನ ಹೇಳವುದೂ ಸಿದ್ದ ಔಷಧವಿದ್ದ ಹಾಗೆಂದುಕೊಂಡೆ.

ಮುಂಗಾರು ಬಿತ್ತನೆ ಹಿಂದೆ ಬೀಳಬಾರದು. Covid patients ಗಳಿಗೆ Oxygen and hospitals beds ಗಳು ಕೊರತೆ ಆಗದ ಹಾಗೆ ಸದಾ ಹೆಚ್ಚುವರಿಯಾಗಿರಬೇಕು. Fertilizers and seeds ಸಕಾಲದಲ್ಲಿ ಸಮರ್ಪಕವಾಗಿ ರೈತರಿಗೆ ದೊರೆಯುವಂತೆ ಮಾಡುವುದು ಬಹಳ ಮುಖ್ಯವಾದ ತುರ್ತು ಕೆಲಸ ಎಂಬುದು ಅವರ ಮಾತಿನ ಇಂಗಿತವಾಗಿತ್ತು.

ಸಾರ್ವಜನಿಕ ಆರೋಗ್ಯ ರಕ್ಷಣಾ ಕೆಲಸ ನಿಮಿತ್ತವಾಗಿ ಟೀ ಕುಡಿದು ಅವಸರವಸರವಾಗಿ ಶಾಸಕರು ನಿರ್ಗಮಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?