ಹುಟ್ಟುಹಬ್ಬ ಎಂದರೆ
ಮಕ್ಕಳಿಗೆ ಎಲ್ಲಿಲ್ಲದ ಸಂಭ್ರಮ, ಸಡಗರ. ಹುಟ್ಟು ಹಬ್ಬಕ್ಕೆ ಹೊಸಬಟ್ಟೆ,
ಕೇಕ್ ತಂದು, ಅಕ್ಕಪಕ್ಕದ ಸ್ನೇಹಿತರನ್ನೆಲ್ಲಾ ಸೇರಿಸಿ ಕೇಕ್ ಕತ್ತರಿಸಿ ಸಂಭ್ರಮಿಸುವುದನ್ನು ನೋಡಲು ಪಾಲಕರಿಗೆ ಖುಷಿ.ಆದರೆ ಸಿರಾ ನಗರದ ಅಣ್ಣತಮ್ಮಂದಿರು ಭಾನುವಾರ ಅವರ ಹುಟ್ಟುಹಬ್ಬವನ್ನು
ಹಸಿದವರಿಗೆ ಅನ್ನ ನೀಡುವ ಮೂಲಕ ಆಚರಿಸಿಕೊಂಡಿರುವುದು ವಿಶೇಷ.ಸಿರಾ ನಗರ ವಾಸಿ ಶಿಕ್ಷಕ ಆರ್. ತಿಪ್ಪೇಸ್ವಾಮಿಯವರ ಮಕ್ಕಳಾದ ವಿನೀತ್ 3ನೇ ವರ್ಷದ ಪ್ರಣೀತ್ ತನ್ನ 5 ನೇ ವರ್ಷದ ಹುಟ್ಟುಹಬ್ಬವನ್ನು ಹಸಿದವರಿಗೆ ಅನ್ನ ನೀಡುವ ಮೂಲಕ ಹುಟ್ಟು ಹಬ್ಬ ಆಚರಿಸಿಕೊಂಡು ಇತರರಿಗೆ ಮಾದರಿಯಾಗಿದ್ದಾರೆ.ಕೊರೋನ ಎರಡನೇ ಅಲೆಗೆ ಸರ್ಕಾರ ಲಾಕ್ ಡೌನ್ ಘೋಷಿಸಿರುವುದರಿಂದ ಕೆಲ ಕೂಲಿ ಕಾರ್ಮಿಕರು, ಬೀದಿಬದಿ ವ್ಯಾಪಾರಿಗಳು ಸೇರಿದಂತೆ ಹಲವರ ಜೀವನೋಪಾಯ ತೀರ ಕಷ್ಟವೆನಿಸಿದೆ. ಇಂತಹ ವಿಷಮ ಪರಿಸ್ಥಿತಿಯಲ್ಲಿ ಈ ಪುಟಾಣಿಗಳ ನಿರ್ಧಾರ ಶ್ಲಾಘನೀಯವಾದದ್ದು.ಈ ಮಕ್ಕಳ ಒತ್ತಾಸೆಗೆ ನೀರೆದವರು ಸಿರಾ ಮಾನವ ಬಂದುತ್ವ ವೇದಿಕೆಯ ಪದಾಧಿಕಾರಿಗಳು.ವೇದಿಕೆ ವತಿಯಿಂದ ಕಳೆದ 13 ದಿನಗಳಿಂದ ನಗರದಲ್ಲಿರುವ ಅಸಹಾಯಕರು ಮತ್ತು ನಿರ್ಗತಿಕರು ನಗರಸಭೆಯ ಪೌರಕಾರ್ಮಿಕರು, ಕೆಎಸ್ಸಾರ್ಟಿಸಿ ಬಸ್ ಸ್ಟ್ಯಾಂಡ್ ಸ್ವಚ್ಛಗೊಳಿಸುವ ಕಾರ್ಮಿಕರು, ಡಿಪೋದಲ್ಲಿ ರಕ್ಷಣೆ ಮಾಡುವ ರಕ್ಷಕರು, ಅಗ್ನಿಶಾಮಕ ಠಾಣೆಯ ಸಿಬ್ಬಂದಿವರ್ಗದವರಿಗೆ ಆಹಾರದ ಪೊಟ್ಟಣ ಮತ್ತು ನೀರನ್ನು ವಿತರಿಸಲಾಯಿತು.ಆಹಾರ ವಿತರಣೆಯ ಸಂದರ್ಭದಲ್ಲಿ ಮಾನವ ಬಂಧುತ್ವ ವೇದಿಕೆಯ ತಾಲೂಕು ಸಂಚಾಲಕ ಎಸ್. ರಂಗರಾಜು ಹಾಗೂ ಜಿಲ್ಲಾ ಸಂಯೋಜಕ ಧರಣಿ ಕುಮಾರ್, ವೇದಿಕೆ ಕಾರ್ಯಕರ್ತರಾದ ಮೋಹನ್, ಬೊಮ್ಮಣ್ಣ, ಅಹಿಂದ ಮುಖಂಡ ರಾಜೇಂದ್ರಪ್ರಸಾದ್ ಇತರರು ಹಾಜರಿದ್ದರು.
ಹುಟ್ಟುಹಬ್ಬ ಆಚರಣೆ ಬದಲು ಹಸಿದವರಿಗೆ ಅನ್ನ ನೀಡಿದ ಪುಟಾಣಿಗಳು
RELATED ARTICLES
Recent Comments
ಗುರು on
ಕೊಳಲ ಕರೆ on
ಕೊಳಲ ಕರೆ on
ಕೋರೋಣ on
ಸರಗಳವು on
ನಾನು ಬಿದಿರು… on
ನಾನು ಬಿದಿರು… on
ನಾನು ಬಿದಿರು… on
ನಾನು ಬಿದಿರು… on