Saturday, September 21, 2024
Google search engine
Homeಜನಮನಹೊಸ ಪಠ್ಯ: ಪಿಎಚ್.ಡಿ ವಿದ್ಯಾರ್ಥಿಗಳಿಂದಲೂ ವಿರೋಧ

ಹೊಸ ಪಠ್ಯ: ಪಿಎಚ್.ಡಿ ವಿದ್ಯಾರ್ಥಿಗಳಿಂದಲೂ ವಿರೋಧ

Publicstory


ಕರ್ನಾಟಕ ಸರ್ಕಾರವು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಿದಷ್ಟೇ ತರಾತುರಿಯಲ್ಲಿ ಶಾಲಾ ಪಠ್ಯಪುಸ್ತಕಗಳ ಮರುಪರಿಷ್ಕರಣೆಯನ್ನೂ ಮಾಡಿದೆ. ಅದರಲ್ಲೂ ಸಮಾಜ ವಿಜ್ಞಾನ ಮತ್ತು ಭಾಷಾ ಪಠ್ಯಪುಸ್ತಕಗಳು ಈಗ ವಿವಾದದ ಕೇಂದ್ರ ಬಿಂದುವಾಗಿವೆ.

ಪಠ್ಯಪುಸ್ತಕ ಪುನರ್ ಪರಿಶೀಲನಾ ಸಮಿತಿಯು ಹತ್ತನೆಯ ತರಗತಿಯ ಪ್ರಥಮ ಭಾಷಾ ಕನ್ನಡ ಪಠ್ಯಪುಸ್ತಕದ ತಮ್ಮ ದಿಕ್ಸೂಚಿ ಬರೆಹದಲ್ಲಿ “ಭಾಷಾಪಠ್ಯವಿರುವುದು ಸಾಮಾಜಿಕ ನ್ಯಾಯ, ಲಿಂಗ ಸಮಾನತೆ ಇತ್ಯಾದಿ ಅಂಶಗಳನ್ನು ತುರುಕುವುದಕ್ಕಲ್ಲ” ಎಂದು ಹೇಳಿದೆ.

ಯಾವುದೇ ಪಠ್ಯಪುಸ್ತಕದಲ್ಲಿ ಅಥವಾ ಯಾವುದೇ ಭಾರತೀಯನಲ್ಲಿ ಸಾಮಾಜಿಕ ನ್ಯಾಯ ಮತ್ತು ಲಿಂಗ ಸಮಾನತೆಯ ಆಶಯಗಳು ಒಂದು ಮೌಲ್ಯವಾಗಿ ಹುದುಗಿರಲೇಬೇಕು. ಅದು ಇದ್ದಲ್ಲಿ ಮಾತ್ರ ಆತ/ಆಕೆ ನಿಜವಾದ ಅರ್ಥದಲ್ಲಿ ಮನುಷ್ಯರಾಗುವುದಕ್ಕೆ ಸಾಧ್ಯ. ಭಾರತೀಯ ಸಂವಿಧಾನವೇ ಪ್ರತಿಪಾದಿಸಿರುವ ಈ ಪ್ರಧಾನ ಮೌಲ್ಯಗಳನ್ನು ಸದರಿ ಸಮಿತಿಯು ‘ತುರುಕುವುದು’ ಎಂದು ಹೇಳುತ್ತಿದೆ.

ಈ ಪದಪ್ರಯೋಗವೇ ಸದರಿ ಸಮಿತಿಯ ಎಲ್ಲ ಸದಸ್ಯರು ಸಂವಿಧಾನದ ಮೂಲಭೂತ ಆಶಯಗಳನ್ನೇ ವ್ಯಂಗ್ಯವಾಡಿದ್ದಾರೆ ಎಂಬುದನ್ನು ಹೇಳುವಂತಿದೆ. ಈ ಮಾತು ಭಾರತೀಯ ಸಂವಿಧಾನವನ್ನು ಖುಲ್ಲಂಖುಲ್ಲಾ ಅಪಮಾನ ಮಾಡಿದಂತಿದೆ.

ಸಂವಿಧಾನದ ಆಶಯಗಳ ಅನುಷ್ಠಾನದಿಂದಾಗಿಯೇ ಈ ದೇಶದ ಜನರ ಬದುಕಿಗೆ ಅರ್ಥಪೂರ್ಣತೆ ಪ್ರಾಪ್ತವಾಗಿದೆ ಎಂಬುದನ್ನು ಸಮಿತಿಯಲ್ಲಿನ ತಜ್ಞರು ಮರೆತಂತಿದೆ. ಮರುಪರಿಷ್ಕರಣೆಯಲ್ಲಿ ಸಕ್ರಿಯ ಪಾತ್ರ ವಹಿಸಿರುವ ರಾಜ್ಯ ಸರ್ಕಾರವೂ ಸಂವಿಧಾನದ ಮೂಲಭೂತ ಆಶಯಗಳನ್ನು ನಿರ್ಲಕ್ಷಿಸಿದೆಯೇ ಎಂಬ ಪ್ರಶ್ನೆಯನ್ನು ನಾವು ಈಗ ಕೇಳಬೇಕಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಪಿಎಚ್.ಡಿ ಸಂಶೋಧನಾರ್ಥಿಗಳ ಬಳಗವು ಸರ್ಕಾರದ ಮುಂದೆ ಈ ಕೆಳಗಿನಂತೆ ಹಕ್ಕೊತ್ತಾಯ ಮಾಡುತ್ತಿದೆ.

ಪಠ್ಯಪುಸ್ತಕ ಪ್ರಕರಣದಿಂದ ವ್ಯಾಪಕ ಜನಾಕ್ರೋಶಕ್ಕೆ ಗುರಿಯಾಗಿರುವ ಕರ್ನಾಟಕ ಸರ್ಕಾರವು ಪಠ್ಯ ಪುನರ್ ಪರಿಷ್ಕರಣಾ ಸಮಿತಿಯನ್ನು ತಕ್ಷಣವೇ ವಿಸರ್ಜಿಸಬೇಕು ಮತ್ತು ಪಠ್ಯಪುಸ್ತಕ ರಚನೆ ಮತ್ತು ಪರಿಷ್ಕರಣೆಯ ಪ್ರಕ್ರಿಯೆಗಳನ್ನು ನಿಯಮಿತವಾಗಿ ನೋಡಿಕೊಳ್ಳುವ ಒಂದು ಸ್ವಾಯತ್ತ ಪ್ರಾಧಿಕಾರವನ್ನು ಸ್ಥಾಪಿಸಬೇಕು, ಈ ಪ್ರಾಧಿಕಾರದಲ್ಲಿ ಅಧ್ಯಕ್ಷ ಮತ್ತು ಸದಸ್ಯರಾಗಿ ಆಯ್ಕೆಯಾಗುವವರು ನಿರ್ದಿಷ್ಟ ಶೈಕ್ಷಣಿಕ ಅರ್ಹತೆಗಳನ್ನು ಹೊಂದಿರುವವರು ಆಗಿರಬೇಕು. ಈ ಸಮಿತಿಯನ್ನು ಆಯ್ಕೆ ಮಾಡುವಲ್ಲಿ ಸಾಮಾಜಿಕ ನ್ಯಾಯದ ಪರಿಪಾಲನೆಯೂ ಪ್ರಧಾನ ಪಾತ್ರ ವಹಿಸಬೇಕು. ಕೊನೆಗೆ ಈ ಸ್ವಾಯತ್ತ ಪ್ರಾಧಿಕಾರದ ಸದಸ್ಯರು ಜಾಗತಿಕ ಮಟ್ಟದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಮನಗಂಡು ಅದಕ್ಕನುಗುಣವಾಗಿ ಸಾಹಿತ್ಯ-ಭಾಷೆ-ಗಣಿತ-ವಿಜ್ಞಾನ-ಸಮಾಜವಿಜ್ಞಾನದ ಕ್ಷೇತ್ರಗಳಲ್ಲಿ ಕರ್ನಾಟಕದ ಶಾಲಾ ಪಠ್ಯಕ್ರಮವನ್ನು ಸಮಗ್ರವಾಗಿ ಪುನರ್ ನವೀಕರಿಸುವಂತಾಗಬೇಕು. ಹಾಗೆಯೇ ಇಂತಹ ಪಠ್ಯಕ್ರಮವನ್ನು ಮಕ್ಕಳಿಗೆ ದಾಟಿಸುವ ಶಾಲಾ ಶಿಕ್ಷಕರೂ ಸತತ ತರಬೇತಿಯನ್ನು ಪಡೆಯುವಂತೆ ಆಗಬೇಕು. ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ನೀತಿ-ನಿಯಮಗಳನ್ನು ರಚಿಸಬೇಕು ಎಂದು ನಾವು ಸರ್ಕಾರವನ್ನು ಆಗ್ರಹಿಸುತ್ತಿದ್ದೇವೆ.

ಈ ಪ್ರಕ್ರಿಯೆ ನಡೆದು ಪೂರ್ಣವಾಗುವವರೆಗೆ ಬರಗೂರು ರಾಮಚಂದ್ರಪ್ಪ ಸಮಿತಿ ಮಾಡಿದ ಪಠ್ಯಕ್ರಮವನ್ನೇ ಊರ್ಜಿತದಲ್ಲಿರಿಸಿಕೊಳ್ಳಬೇಕು ಎಂದೂ ಒತ್ತಾಯಿಸುತ್ತಿದ್ದೇವೆ.


ರಂಗಸ್ವಾಮಿ ಹೆಚ್, ದೊಡ್ಡ ಹೊಸೂರು
ಪ್ರಭುಕುಮಾರ್ ಪಿ, ಮಂಡ್ಯ
ಗೋವಿಂದರಾಜು ಎಂ ಕಲ್ಲೂರು
ಶ್ರೀಧರ ಆರ್ ವಿ, ಪಾವಗಡ
ಅಮರ್ ಬಿ, ಕುಮಟಾ,
ಅರವಿಂದ ಇ, ಹರಿಯಬ್ಬೆ
ವರುಣ್ ರಾಜ್, ಕೋಲಾರ
ಖಲಿದಾ ಖಾನಂ, ತುಮಕೂರು
ಶಭಾನ, ಮೈಸೂರು
ಸುಶ್ಮಿತಾ ಎನ್, ಮೈಸೂರು
ಮಂಜುಳಾ ಜಿ ಎಚ್, ಹಂಪಿ
ಮುಸ್ತಾಫ ಕೆ ಹೆಚ್, ಮಂಗಳೂರು
ಶಶಾಂಕ್ ಎಸ್ ಆರ್, ಬೆಂಗಳೂರು
ಗಾದಿಲಿಂಗಪ್ಪ, ಬಳ್ಳಾರಿ
ವೈಶಾಖ್ ಸಿ, ಕೇರಳ
ಅಶೋಕ್ ಡೆಂಜ಼ಿಲ್ ಡಿಸೋಜ಼, ಮಂಗಳೂರು
ಧನುಷ್ ಹೆಚ್, ಬೆಂಗಳೂರು
ಬೀಬೀ ಆಯಿಶಾ, ಧಾರವಾಡ
ಸೀಮಾ ಕೆ, ಕನಕಪುರ
ಗಂಗಾಧರ ಬಾಣಸಂದ್ರ
ಮಲ್ಲಿಕಾರ್ಜುನ್, ಪಾವಗಡ
ಕೃಷ್ಣಮೂರ್ತಿ ಇ, ಶಿರಾ
ಮಮತಾ, ಮಾಕೇನಹಳ್ಳಿ
ಲಕ್ಷ್ಮೀ ಕೆ. ಎಸ್, ಮೈಸೂರು
ಕೃಷ್ಣ ತಳವಾರ, ಬೆಳಗಾವಿ
ಹಜ಼ರತ್ ಸಾಹೇಬ್ ನದಾಫ್, ರಾಮದುರ್ಗ,
ಮೋಹನ್ ಕುಮಾರ್ ಬಿ ಎಸ್, ಚಿತ್ರದುರ್ಗ
ಮೇಘರಾಜ್ ಒಡೆಯರ್ ಸಿ, ಗುಂಡ್ಲುಪೇಟೆ
ಶಿವಕುಮಾರ್, ಮೈಸೂರು
ಸತೀಶ್ ಬಿ ಎಂ, ಕುಣಿಗಲ್
ರಂಗಸ್ವಾಮಿ, ರಾಯಚೂರು
ಗುರು ಸಿದ್ದೇಶ ಮಾಗಣ್ಣವರ,
ನಂದೀಶ ಎಲ್, ಪಾವಗಡ
ಸುನಿಲ್ ಹೊಸಳ್ಳಿ, ಧಾರವಾಡ
ವಿಜಯಶ್ರೀ ಸಿ ಎಸ್, ಬೆಂಗಳೂರು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?