ಹೊಸ ವರುಷದ ಆಚರಣೆ ಬದಲಾದರೂ
ಗೆಳೆಯರು ಇರ ಬೇಕು ಬದುಕಲ್ಲಿ ಹಾಗೂ
ಈಗಲೂ ಎರಗುತ್ತಿರುವ ಪಿಡುಗು ಮತ್ತು
ಮೂಕನಾಗೇ ಭರವಸೆ ಕೊಡುವ ದೇವರು
ಎಂಬ ಅರ್ಥದ ಕವನ ಡಾII ರಜನಿ ಅವರಿಂದ.
ಹೊಸ ಹರುಷ
***********
ಹೊಸ ವರುಷದ
ಹರುಷ
ಹೊಸದೇನು?
ಕತ್ತರಿಸಿ ಹಂಚಿದ
ಕೇಕ್
ಹಂಚಬೇಕು
ಸಿಹಿಯನ್ನು..
ಮಧ್ಯರಾತ್ರಿ
ಬರ
ಮಾಡಿದ
ಸ್ವಾತಂತ್ರ್ಯ …
ಸುರಿದ ಶುಭಾಶಯಗಳು
ನೆನಪಿರಲಿ ನನ್ನ
ಹಿತೈಷಿಗಳು…
ಈಡೇರಲಾಗದ ಆಸೆಗಳು
ನುಂಗಿದ
ದುಃಖ
ದುಮ್ಮಾನಗಳು…
ಹೆಚ್ಚಿದ ಮುಖದ ಗೆರೆಯನ್ನು
ನೆರೆಯನ್ನು
ನುಂಗಿದ ನೊರೆ ಪಾನೀಯದ
ಮತ್ತು..
ಪಿಡುಗಿನ ಮಧ್ಯೆಯೂ
ಉಳಿದಿರುವ
ಜೀವಗಳು…
ಏರಿಸಿದ ತಂಪು
ಕನ್ನಡಕಗಳು
ಕಾಲ್ಕೆಳಗೆ ನುಣ್ಣನೆ
ಉಸುಕುಗಳು…
ಮತ್ತೆ
ಬಂದೆರಗುತ್ತಿರುವ
ಹೆಮ್ಮಾರಿ
ಪ್ರವಾಹ…
ಆದರೇನು
ಇದ್ದರಲ್ಲವೆ
ಮಧ್ಯರಾತ್ರಿ
ನನ್ನ ಕೈ ಹಿಡಿದು…
ಹೊಸ ವರುಷವ
ಆಹ್ವಾನಿಸಿದ
ಜೊತೆಗಾರರು..
ಬೆಳಗ್ಗೆ ಎದ್ದು
ಬೇಡಿದ ಕೈ
ದಿಟ್ಟಿಸಿ ನೋಡಿದ
ದೇವರು…
ಡಾ|| ರಜನಿ
Superb madam
Super mam