ಡಾ \\ ರಜನಿ
ಮುದ್ದಾದ
ಕಿರು ಬೆರಳ ಒಮ್ಮೆ
ಮುತ್ತಿಡಲು
ಕೆಂಪು ತುಟಿಗಳ
ಇನ್ನೂ ಕೆಂಪಾಗಿಸಲು
ಗುಲಾಬಿ ಹಿಮ್ಮಡಿಗಳ
ಧೂಳ್ ಆಗಿಸದೆ ಇರಲು
ರೇಷ್ಮೆ ಕೂದಲಲ್ಲಿ
ಕಾಡು ಹಳದಿ ಹೂವ ಮುಡಿಸಲು
ನನ್ನ ಮೂಗಿಗೆ ನಿನ್ನ ಅಂಗಳದ
ಪಾರಿಜಾತದ ಗಂಧ ಅಡರಲು
ನಿನ್ನ ಹೊಲದಲ್ಲಿ ..ಆಕಾಶದ
ಕೆಳಗೆ ..
ಕಾದ ಬಂಡೆಯ ಮೇಲೆ
ನೀನು ಕೊಡಿಸಿದ ಸೀರೆಯ
ಎದೆ ಮೇಲೆ ಹರಡಿ ಒಮ್ಮೆ ತಿರುಗಲು
ಕಮಲದ ಕಾಲುಗಳು
ಭೂಮಿಗೆ ಇಡವುದ . . ಕಾದು..
ಹೆಮ್ಮೆಯಿಂದ ನೋಡಲು
ಸಂಜೆ ಕೆಂಬಳಗಲ್ಲಿ….ದೇವಸ್ಥಾನದ
ಬೀದಿಗಳಲ್ಲಿ
ಬಣ್ಣದ ಬಳೆಗಳ ಆರಿಸಲು
ಗುಟ್ಟಾದ ಹೆಸರಿಟ್ಟು
ನಮ್ಮದೇ ಗಳಿಗೆಯಲ್ಲಿ
ರಮಿಸಲು
ನೀನಂದು ಕೊಂಡಿದನ್ನು
ನಾನು ಕೇಳಿಲ್ಲ…..